ಹುಬ್ಬಳ್ಳಿ:ಎರಡೂವರೆ ದಶಕಗಳಿಂದ ಪ್ರಯಾಣಿಕರ ಸಾರಿಗೆ ಸೇವೆಯಲ್ಲಿ ಮುಂಚೂಣಿಯಲ್ಲಿರುವ ನಾಡಿನ ಪ್ರತಿಷ್ಠಿತ ವಿಜಯಾನಂದ ಟ್ರಾವಲ್ಸ್​ನ ಚಾಲಕರು, ಪ್ರಯಾಣಿಕರೊಬ್ಬರು ಬಸ್ ಇಳಿಯುವಾಗ ಮರೆತುಹೋಗಿದ್ದ ನಗದು ಹಾಗೂ ಲ್ಯಾಪ್​ಟಾಪ್ ಕಂಪ್ಯೂಟರ್ ಇದ್ದ ಬ್ಯಾಗ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಕೃಷ್ಣ ಧನ್ವಂತ್ರಿ ಎಂಬ ಪ್ರಯಾಣಿಕ ಬೆಳಗಾವಿಯಿಂದ ಬರೋಡಾಕ್ಕೆ ಪ್ರಯಾಣಿಸಿದ್ದರು. ಬರೋಡಾದಲ್ಲಿ ಇಳಿಯುವಾಗ ಬ್ಯಾಗ್ ಮರೆತು ಹೋಗಿದ್ದರು. ಈ ಬ್ಯಾಗಿನಲ್ಲಿ 55 ಸಾವಿರ ನಗದು ಹಾಗೂ ಬೆಲೆ ಬಾಳುವ ಲ್ಯಾಪ್​ಟಾಪ್ ಇತ್ತು.
ಇದನ್ನು ಗಮನಿಸಿದ ಬಸ್ ಚಾಲಕರಾದ ಐ.ಎಂ. ಫಣಿಬಂದ ಹಾಗೂ ಉಮೇಶ ಸಂಕಪಾಲ ತಕ್ಷಣ ಸಂಸ್ಥೆಯ ಪ್ರಧಾನ ಕಚೇರಿಯನ್ನು ಸಂರ್ಪಸಿ ವಿಷಯ ತಿಳಿಸಿದರು. ಬಳಿಕ, ಹಣ ಮತ್ತು ಲ್ಯಾಪ್​ಟಾಪ್ ಹೊಂದಿದ್ದ ಬ್ಯಾಗನ್ನು ಅದರ ಮಾಲೀಕರಿಗೆ ಸುರಕ್ಷಿತವಾಗಿ ಮರಳಿಸಲಾಗಿದೆ.
ವಿಆರ್​ಎಲ್ ಟ್ರಾವಲ್ಸ್ ಬಸ್ ಚಾಲಕರ ಪ್ರಾಮಾಣಿಕತೆಯನ್ನು ಕೊಂಡಾಡಿರುವ ಪ್ರಯಾಣಿಕ ಕೃಷ್ಣ ಧನ್ವಂತ್ರಿ ಈ ಚಾಲಕರಿಗೆ ಮತ್ತು ಸಂಸ್ಥೆಗೆ ಧನ್ಯವಾದಗಳನ್ನು ತಿಳಿಸಿದ್ದು, ಫೇಸ್​ಬುಕ್​ನಲ್ಲಿ ಪೋಸ್ಟ್ ಸಹ ಹಾಕಿದ್ದಾರೆ.
ವಿಆರ್​ಎಲ್ ಸಂಸ್ಥೆಯ ಬಸ್​ಗಳಲ್ಲಿ ಪ್ರಯಾಣಿಸುವವರು ಮರೆತು ಹೋಗಿದ್ದ ಅನೇಕ ಬೆಲೆ ಬಾಳುವ ವಸ್ತುಗಳನ್ನು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಉದಾಹರಣೆಗಳು ಈ ಹಿಂದೆಯೂ ಸಾಕಷ್ಟು ಬಾರಿ ನಡೆದಿವೆ ಎಂದು ಸಂಸ್ಥೆಯ ಉಪಾಧ್ಯಕ್ಷ ಪ್ರಭು ಸಾಲಗೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಿಬ್ಬಂದಿಗೆ ನಗದು ಬಹುಮಾನ
ಪ್ರಯಾಣಿಕರ ಸ್ವತ್ತುಗಳ ಬಗ್ಗೆ ಕಾಳಜಿ ವಹಿಸುವುದನ್ನು, ಪ್ರಾಮಾಣಿಕ ಸೇವಾ ಮನೋಭಾವವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಇಬ್ಬರೂ ಚಾಲಕರಿಗೆ ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್  ಡಾ. ವಿಜಯ ಸಂಕೇಶ್ವರ ಹಾಗೂ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ ನಗದು ಬಹುಮಾನ ಘೊಷಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 13 =
Remember me
