ಹಾವೇರಿ:ಕೋವಿಡ್​ ವ್ಯಾಕ್ಸಿನೇಷನ್​ನಲ್ಲೂ ‘ವಿವಿಐಪಿ ಸಂಸ್ಕೃತಿ’ ಇದ್ಯಾ? ಇಂತಹದ್ದೊಂದು ಪ್ರಶ್ನೆ ಕೃಷಿ ಸಚಿವ ಬಿ.ಸಿ.ಪಾಟೀಲ್​ರ ನಡೆ ಹುಟ್ಟುಹಾಕಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಆಸ್ಪತ್ರೆಗೆ ಹೋಗಿ ಲಸಿಕೆ ಪಡೆದಿದ್ದಾರೆ. ಆದರೆ, ಬಿ.ಸಿ.ಪಾಟೀಲ್​ ಮಾತ್ರ ಆರೋಗ್ಯ ಸಿಬ್ಬಂದಿಯನ್ನ ತನ್ನ ಮನೆ ಬಾಗಿಲಿಗೇ ಕರೆಸಿಕೊಂಡು ಲಸಿಕೆ ಪಡೆದಿದ್ದಾರೆ.
ಆಸ್ಪತ್ರೆಗೆ ಹೋಗದೆ ಮನೆಯಲ್ಲೇ ಲಸಿಕೆ ಪಡೆದ ಕೃಷಿ ಸಚಿವರ ನಡೆಗೆ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ. ನರೇಂದ್ರ ಮೋದಿಗಿಂತಲೂ ಬಿ.ಸಿ.ಪಾಟೀಲ್​ ದೊಡ್ಡವರಾ? ಹಿರಿ ಜೀವಗಳು ಆಸ್ಪತ್ರೆ ಬಾಗಿಲಲ್ಲಿ ಕಾದರೂ ಪರವಾಗಿಲ್ಲ, ಇವರ ದೌಲತ್ತಿಗೆ ಆರೋಗ್ಯ ಸಿಬ್ಬಂದಿಯೇ ಮನೆ ಬಾಗಿಲಿಗೆ ಬಂದು ಲಸಿಕೆ ಕೊಡುತ್ತಾರೆ. ಇದೆಂಥಾ ನ್ಯಾಯ? ಜನಸಾಮಾನ್ಯರಿಗೆ ಒಂದು ಇವರಿಗೊಂದು ಏಕೆ? ಕೋವಿಡ್​ ಲಸಿಕೆ ವಿಚಾರದಲ್ಲೂ ವಿವಿಐಪಿ ಸಂಸ್ಕೃತಿ ಏಕೆ? ಎಂದು ಸಾರ್ವಜನಿಕ ವಲಯ ಪ್ರಶ್ನಿಸಿದೆ.ಇದನ್ನೂ ಓದಿರಿಜೀವಂತ ಯುವಕನನ್ನೇ ಪೋಸ್ಟ್ ಮಾರ್ಟಂಗೆ ಕರೆದೊಯ್ದ ಆಸ್ಪತ್ರೆ ಸಿಬ್ಬಂದಿ! ಮುಂದೇನಾಯ್ತು?
ಸೋಮವಾರ ಬೆಳಗ್ಗೆ ಹಿರೇಕೆರೂರು ಆಸ್ಪತ್ರೆಯ ಸಿಬ್ಬಂದಿ ಕೃಷಿ ಸಚಿವ ಬಿ.ಸಿ. ಪಾಟೀಲ್​ರ ಮನೆಗೆ ಬಂದು ಸಚಿವರು ಮತ್ತು ಅವರ ಪತ್ನಿ ವನಜಾ ಪಾಟೀಲ್​ಗೆ ಲಸಿಕೆ ಹಾಕಿದ್ದರು. ಆಸ್ಪತ್ರೆಗೆ ಹೋಗಿ ಲಸಿಕೆ ಪಡೆಯಬೇಕಿದ್ದವರು ತಮ್ಮ ಮನೆಗೇ ಕರೆಸಿಕೊಂಡು ಹಾಕಿಸಿಕೊಂಡಿದ್ದಾರೆ.
ಈ ಕುರಿತು ರಾಮನಗರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಕುಮಾರಸ್ವಾಮಿ, ಈ ಸರ್ಕಾರದಲ್ಲಿ ಏನು ಬೇಕಾದರೂ ನಡೆಯುತ್ತದೆ ಎಂದರು.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ
ಮನೆಯಲ್ಲೇ ಕೋವಿಡ್​ ವ್ಯಾಕ್ಸಿನ್ ಪಡೆಯಲು ಅವಕಾಶವಿಲ್ಲ: ಸಚಿವ ಡಾ.ಸುಧಾಕರ್

ಪ್ರಾಣಾಪಾಯದಿಂದ ನಟ ರಿಷಬ್​ ಶೆಟ್ಟಿ, ನಟಿ ಗಾನವಿ ಜಸ್ಟ್ ಮಿಸ್​!

ಕಾಲೇಜು ಕಟ್ಟಡದಿಂದ ಜಿಗಿದು ಬಿಇ ವಿದ್ಯಾರ್ಥಿ ಆತ್ಮಹತ್ಯೆ! ಡೆತ್​ನೋಟ್​ ಪತ್ತೆ, ಸಹಪಾಠಿಗಳ ಪ್ರತಿಭಟನೆ

ಮೊದಲ ರಾತ್ರಿಯೇ ಮದುಮಗಳ ದುರಂತ ಸಾವು! ಮದ್ವೆ ಮನೆಯಲ್ಲಿ ಮುಗಿಲು ಮುಟ್ಟಿದ ಆಕ್ರಂದನ

ಜೀವಂತ ಯುವಕನನ್ನೇ ಪೋಸ್ಟ್ ಮಾರ್ಟಂಗೆ ಕರೆದೊಯ್ದ ಆಸ್ಪತ್ರೆ ಸಿಬ್ಬಂದಿ! ಮುಂದೇನಾಯ್ತು?

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:20 − four =
Remember me
