ಬಾಗಲಕೋಟೆ:ರಾಜ್ಯದ ಒಟ್ಟು 28 ಕ್ಷೇತ್ರಗಳ ಪೈಕಿ ಬಾಕಿ ಉಳಿದಿದ್ದ 14 ಕ್ಷೇತ್ರಗಳ ಮತದಾನ ಪ್ರಕ್ರಿಯೆ ಇಂದು ಬೆಳಗ್ಗಿನಿಂದಲೇ ಹಲವೆಡೆ ಆರಂಭಗೊಂಡಿದ್ದು, ಇದೀಗ ಬಾಗಲಕೋಟೆಯ 132ರ ಮತಗಟ್ಟೆಯಲ್ಲಿ ತಾಂತ್ರಿಕ ದೋಷದ ಕಾರಣ, ತಾತ್ಕಾಲಿಕವಾಗಿ ಮತದಾನ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ.
ಇದನ್ನೂ ಓದಿ:ಪೆನ್​ಡ್ರೈವ್ ಕಥಾ ನಾಯಕರೇ ಕಾಂಗ್ರೆಸ್ ಅಧ್ಯಕ್ಷರು ದೇವರಾಜೇಗೌಡ ಆರೋಪ; ಬೆದರಿಕೆಗಳಿಗೆಲ್ಲಾ ತಲೆಕೆಡಿಸಿಕೊಳ್ಳಲ್ಲ ಎಂದ ಡಿಕೆಶಿ
ತಾಂತ್ರಿಕ‌ ದೋಷ ಎದುರಾದ ಕಾರಣ ಕೆಲ ಕಾಲ ಮತದಾನ ಪ್ರಕ್ರಿಯೆ ಸ್ಥಗಿತಗೊಂಡಿದ್ದು, ವಿವಿಪ್ಯಾಟ್​ನಲ್ಲಿ ದೋಷ ಎಂದು ಅಲ್ಲಿನ ಚುನಾವಣಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅರ್ಧ ಗಂಟೆಗೂ ಹೆಚ್ಚು ಸಮಯ ಮತದಾನ ವಿಳಂಬವಾಗಿತ್ತು. ಆದರೆ, ಈಗ ತಾಂತ್ರಿಕ ದೋಷ ಪರಿಹರಿಸಿದ ಬಳಿಕ ಮತದಾನ ಪ್ರಕ್ರಿಯೆ ಮುಂದುವರೆದಿದೆ.
ಇದೇ ರೀತಿಯ ಸಮಸ್ಯೆ ಕಾರವಾರ ಜಿಲ್ಲೆಯ ವಿವಿಧೆಡೆ ನಡೆದಿದ್ದು, ಮತಯಂತ್ರಗಳು ಕೈಕೊಟ್ಟು ಮತದಾನಕ್ಕೆ‌ಅಡಚಣೆ ಉಂಟುಮಾಡಿದೆ.ಕಾರವಾರದ ಸೇಂಟ್ ಮೈಕಲ್ ಶಾಲೆಯ 107ನೇ ಸಂಖ್ಯೆಯ ಮತಗಟ್ಟೆ ಮತ್ತು ಶಿರವಾಡದ 62ನೇ ಮತಗಟ್ಟೆಯಲ್ಲಿ ಬೆಳಗ್ಗೆ 8 ಗಂಟೆಯಾದರೂ ಮತದಾನ ಪ್ರಾರಂಭವಾಗಿರಲಿಲ್ಲ. ಶಿರಸಿಯ ಅವೇಮರಿಯಾ ಶಾಲೆಯ 74ನೇ ಮತಗಟ್ಟೆಯಲ್ಲಿಯೂ ಮತಯಂತ್ರ ಕೈ ಕೊಟ್ಟು, ಅರ್ಧ ಗಂಟೆಗೂ ಹೆಚ್ಚು ಕಾಲ ವಿಳಂಬವಾಯಿತು ಎಂದು ವರದಿಯಾಗಿದೆ.
ಆತನಿಗೆ ಯಾವಾಗ, ಹೇಗೆ ಆಡಬೇಕು ಅನ್ನೋದೆ ಗೊತ್ತಿಲ್ಲ! ಸ್ಟಾರ್​ ಬ್ಯಾಟ್ಸ್​ಮನ್​ ವಿರುದ್ಧ ಬಜ್ಜಿ ಗರಂ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + 15 =
Remember me
