ಬೆಂಗಳೂರು:ಮಾಹಾತ್ಮ ಗಾಂಧೀಜಿ ಹಾಗೂ ಡಾ.ಬಿ.ಆರ್​.ಅಂಬೇಡ್ಕರ್​ ದೈಹಿಕವಾಗಿ ಇಂದು ಇಲ್ಲವಾದರೂ, ಮಾನಸಿಕವಾಗಿ ಜಗತ್ತನ್ನು ಆವರಿಸಿಕೊಂಡಿದ್ದಾರೆ ಎಂದು ಕಲಬುರಗಿ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್​.ಟಿ.ಪೋತೆ ಹೇಳಿದ್ದಾರೆ.
ಗಾಂಧೀ ಶಾಂತಿ ಪ್ರತಿಷ್ಠಾನ, ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಹಾಗೂ ಶೇಷಾದ್ರಿಪುರಂ ಸಂಜೆ ಕಾಲೇಜು ಸಂಯುಕ್ತಾಶ್ರಯದಲ್ಲಿ ನಗರದ ಗಾಂಧಿ ಭವನದಲ್ಲಿ ಬುಧವಾರ ಆಯೋಜಿಸಿದ್ದ ಗಾಂಧೀವಾದಿ ಡಬ್ಲ್ಯು.ಎಚ್​.ಹನುಮಂತಪ್ಪ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಗಾಂಧಿ ಮತ್ತು ಅಂಬೇಡ್ಕರ್​ ಪ್ರಸ್ತುತತೆ’ ವಿಷಯದ ಕುರಿತು ಮಾತನಾಡಿದರು.
ಸಾಕಷ್ಟು ವಿಚಾರಗಳಲ್ಲಿ ಗಾಂಧೀಜಿ ಹಾಗೂ ಅಂಬೇಡ್ಕರ್​ ನಡುವೆ ಭಿನ್ನಾಭಿಪ್ರಾಯ ಇತ್ತು. ಆದರೆ ದ್ವೇಷ ಭಾವನೆ ಇರಲಿಲ್ಲ. ಈ ಮನಸ್ಥಿತಿಯನ್ನು ಇಂದಿನ ಸಮಾಜ ಅರ್ಥ ಮಾಡಿಕೊಳ್ಳಬೇಕು ಎಂದರು.
ಗಾಂಧೀಜಿ ಮೇಲ್ವರ್ಗದ ಸಮುದಾಯದಿಂದ ಸ್ವಾತಂತ್ರ್ಯಕ್ಕಾಗಿ ತಳಮಟ್ಟದಲ್ಲಿ ಹೋರಾಡಿದರು. ಅಂಬೇಡ್ಕರ್​ ಕೆಳವರ್ಗದಿಂದ ಬಂದು ತಮ್ಮ, ಜನರಿಗಾಗಿ ಮೇಲ್ಮಟ್ಟದಲ್ಲಿ ಹೋರಾಟ ನಡೆಸಿದರು. ಹೋರಾಟದ ದಾರಿ ಬೇರೆ ಬೇರೆಯಾಗಿದ್ದರೂ, ಇಬ್ಬರಲ್ಲೂ ಮಾನವೀಯತೆ ಹಾಗೂ ಅಚಲ ವಿಶ್ವಾಸ ಇತ್ತು. ರಾಜಕೀಯ ಹೋರಾಟಕ್ಕಿಂತಲೂ ಸಾಮಾಜಿಕ ಹೋರಾಟ ಮುಖ್ಯ ಎಂಬುದನ್ನು ಅಂಬೇಡ್ಕರ್​ ಅರಿತುಕೊಂಡಿದ್ದರು. ಇವರಿಬ್ಬರ ದೃಷ್ಟಿಕೋನದಿಂದ ನೋಡಿದಾಗ ಭಾರತ ಏನೆಂಬುದು ಅರ್ಥವಾಗುತ್ತದೆ.
ಗಾಂಧೀಜಿ ಮುಂಚೂಣಿಯಲ್ಲಿದ್ದುಕೊಂಡು ಸ್ವಾತಂತ್ರ್ಯ ತಂದುಕೊಟ್ಟರು. ಅಂಬೇಡ್ಕರ್​ ಸಂವಿಧಾನ ತಂದರು. ಇಬ್ಬರು ಮಹಾನ್​ ನಾಯಕರು ದೇಶ ಕಟ್ಟುವ ಕೆಲಸ ಮಾಡಿದ್ದಾರೆ. ಇಂದಿಗೂ ಜಾತಿ ಪದ್ಧತಿ, ಅಸಮಾನತೆ, ಅಸ್ಪೃಷ್ಯತೆ, ಮಹಿಳಾ ಶೋಷಣೆ ನಮ್ಮ ಸಮಾಜದ ಕೆಲ ಭಾಗಗಳಲ್ಲಿ ಉಳಿದುಕೊಂಡಿದೆ. ಇವೆಲ್ಲವೂ ಸಂಪೂರ್ಣವಾಗಿ ನಶಿಸುವಲ್ಲಿ ತನಕ ಗಾಂಧೀಜಿ ಹಾಗೂ ಅಂಬೇಡ್ಕರ್​ ಪ್ರಸ್ತುತ ಆಗುತ್ತಲೇ ಇರುತ್ತಾರೆ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಅಧ್ಯಕ್ಷ ನಾಡೋಜ ಡಾ.ವೂಡೇ ಪಿ.ಕೃಷ್ಣ, ದತ್ತಿ ದಾನಿಗಳ ಪ್ರತಿನಿಧಿ ಡಬ್ಲ್ಯು.ಡಿ.ಅಶೋಕ್​, ಗಾಂಧೀ ಶಾಂತಿ ಪ್ರತಿಷ್ಠಾನದ ಕಾರ್ಯದರ್ಶಿ ಡಾ.ಸತ್ಯಮಂಗಲ ಮಹಾದೇವ ಮತ್ತಿತರರಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + five =
Remember me
