ಬೆಂಗಳೂರು:“ಭಾರತಸ್ಯ ಪ್ರತಿಷ್ಠೇ ದ್ವೇ ಸಂಸ್ಕೃತಂ ಸಂಸ್ಕೃತಿಸ್ತಥಾ” ಅಂದರೆ ಭಾರತದ ಪ್ರತಿಷ್ಠೆಯ ವಿಚಾರಗಳು ಮುಖ್ಯವಾಗಿ ಸಂಸ್ಕೃತ ಮತ್ತು ಸಂಸ್ಕೃತಿ ಎಂಬ ಮಾತಿದೆ. ನಮ್ಮ ರಾಷ್ಟ್ರದ ಹೆಮ್ಮೆಯ ಪ್ರತೀಕವಾದ ಸಂಸ್ಕೃತ ಭಾಷೆಯ ಮಹತ್ವವನ್ನು ವಿಶ್ವದಾದ್ಯಂತ ಶಿಕ್ಷಣತಜ್ಞರು ಪುರಸ್ಕರಿಸುತ್ತಾರೆ. ಸಂಸ್ಕೃತ ಭಾಷೆಯ ಕಲಿಕೆಯು ಮಕ್ಕಳ ಬೌದ್ಧಿಕ ಉನ್ನತಿಗಷ್ಟೇ ಅಲ್ಲ, ಭಾರತದ ಅಪರಿಮಿತ ಜ್ಞಾನಪರಂಪರೆಯನ್ನು ಅರ್ಥೈಸಿಕೊಳ್ಳಲು ಸಹಾಯಕವಾಗಿದೆ ಎಂದು ಸಂಸ್ಕೃತ ಭಾರತೀ ಸಂಸ್ಥೆಯ, ದಕ್ಷಿಣ ಪ್ರಾಂತ ಸಹಶಿಕ್ಷಣ ಪ್ರಮುಖ್​ ಸೂರ್ಯ ಹೆಬ್ಬಾರ್​ ಹೇಳಿದ್ದಾರೆ.
ವಿಶ್ವ ಸಂಸ್ಕೃತ ದಿನವಾದ ಇಂದು(ಆಗಸ್ಟ್​ 22) ‘ವಿಜಯವಾಣಿ’ಯೊಂದಿಗೆ ಮಾತನಾಡಿದ ಅವರು, ಸಂಸ್ಕೃತವನ್ನು ಆಡುಭಾಷೆಯಾಗಿ ಬೆಳೆಸುವ ಕಾರ್ಯದಲ್ಲಿ ಸಂಸ್ಕೃತ ಭಾರತೀ ಸಂಸ್ಥೆ ತೊಡಗಿದೆ. ಸಂಸ್ಕೃತ ಭಾಷೆ ಮುಂಚಿನ ಹಾಗೆ ವ್ಯಾಪಕವಾಗಿಲ್ಲದಿದ್ದರೂ, ಇಂದಿಗೂ ಪ್ರಸ್ತುತವಾಗಿದೆ. ಭಾರತದಲ್ಲಿ ಹಲವಾರು ಕುಟುಂಬಗಳು ಸಂಸ್ಕೃತದಲ್ಲೇ ವ್ಯವಹರಿಸುತ್ತವೆ. ಶ್ರೀಮಂತ ಭಾಷೆಯಾದ ಸಂಸ್ಕೃತವನ್ನು ಆಸಕ್ತಿ ಮತ್ತು ಉತ್ಸಾಹ ಇರುವವರೆಲ್ಲರೂ ಕಲಿಯಬಹುದು. ಇದಕ್ಕಾಗಿ ಸಂಸ್ಕೃತ ಭಾರತಿ ಹಲವಾರು ಕಲಿಕಾ ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂದರು.
ಇದನ್ನೂ ಓದಿ:‘ಕೇವಲ ಸೋದರರಲ್ಲ, ಸೋದರಿಯರೂ ರಕ್ಷಿಸಬಲ್ಲರು’ ಎನ್ನುತ್ತಾರೆ ನೃತ್ಯಜೋಡಿ ಶಕ್ತಿ, ಮುಕ್ತಿ!
ಶಾಲೆ-ಕಾಲೇಜುಗಳಲ್ಲಿ ಮಾರ್ಕ್ಸ್​ ಗಳಿಸೋದು ಸುಲಭ ಅಂತ ಮಾತ್ರ ಸಂಸ್ಕೃತ ಆಯ್ಕೆ ಮಾಡ್ಕೊಳ್ಳುವುದರಲ್ಲಿ ಅರ್ಥವಿಲ್ಲ. ಭಾರತದ ಜ್ಞಾನ ಪರಂಪರೆಯನ್ನು ಅರ್ಥಮಾಡಿಕೊಳ್ಳೋಕೆ, ದೇಶದ ಎಲ್ಲಾ ಪ್ರಾದೇಶಿಕ ಭಾಷೆಗಳನ್ನು ಕಲಿಯುವುದಕ್ಕೆ ಸಂಸ್ಕೃತ ಪೂರಕವಾಗಿದೆ. ಹಲವಾರು ಶಾಸ್ತ್ರಗಳ, ಸಾಹಿತ್ಯ ಗ್ರಂಥಗಳ ಅನುವಾದಗಳನ್ನು ನಾವು ಓದಿ ಆನಂದಿಸುತ್ತೇವೆ. ಅವುಗಳ ಮೂಲಗ್ರಂಥಗಳಿರುವ ಸಂಸ್ಕೃತವನ್ನು ಕಲಿಯುವುದು ಉಪಯುಕ್ತವಾಗುತ್ತದೆ ಎಂದು ಹೆಬ್ಬಾರ್​ ತಿಳಿಸಿದರು.
ಸಂಸ್ಕೃತ ಕಲಿಕಾ ಕಾರ್ಯಕ್ರಮಗಳು: ದೇಶದ ವಿವಿಧ ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳು ಸಂಸ್ಕೃತ ಅಭ್ಯಾಸಕ್ಕೆ ಅವಕಾಶ ಒದಗಿಸುತ್ತಿವೆ. ಅವುಗಳೊಂದಿಗೆ ಸಂಸ್ಕೃತ ಭಾರತಿ ವಿಶಿಷ್ಟ ಅವಕಾಶಗಳನ್ನು ಒದಗಿಸುತ್ತಿದೆ.
1. ಸಂಸ್ಕೃತ ಸಂಭಾಷಣಾ ಶಿಬಿರಗಳು – 6 ವರ್ಷ ಮೇಲ್ಪಟ್ಟ ಆಸಕ್ತರೆಲ್ಲಾ ಈ 10 ದಿನಗಳ ಶಿಬಿರಗಳಲ್ಲಿ ಭಾಗವಹಿಸಿ ಸಂಸ್ಕೃತದಲ್ಲಿ ಮಾತನಾಡುವುದನ್ನು ಕಲಿಯಬಹುದು. ಇದೀಗ ಆನ್​ಲೈನ್​ ಮುಖಾಂತರವೂ ಅಲ್ಪಾವಧಿ ಸಂಭಾಷಣೆ ಕೋರ್ಸ್​ಗಳು ನಡೆಯುತ್ತಿವೆ.
2. ಅಂಚೆ ಮೂಲಕ ಸಂಸ್ಕೃತ – 16 ವರ್ಷ ಮೇಲ್ಪಟ್ಟವರು ಅಂಚೆ ಮೂಲಕ ಸಂಸ್ಕೃತ ಅಭ್ಯಾಸ ಮಾಡಬಹುದು. ಪ್ರಾತಿನಿಧಿಕ ಶುಲ್ಕದಲ್ಲಿ ನಾಲ್ಕು ಹಂತಗಳ ವ್ಯಾಸಂಗ ನಡೆಸಿ ಸಂಸ್ಕೃತದಲ್ಲಿ ಪಾಂಡಿತ್ಯ ಸಾಧಿಸಬಹುದು.
3. ಸರಳ ಸಂಸ್ಕೃತ ಪರೀಕ್ಷಾ – 4ನೇ ತರಗತಿಯ ವಿದ್ಯಾರ್ಥಿಗಳಿಂದ ಆರಂಭವಾಗಿ ಸಂಸ್ಕೃತವನ್ನು ಸರಳವಾಗಿ ಕಲಿಯಲು ಈ ಪರೀಕ್ಷೆಗಳು ಉಪಯುಕ್ತವಾಗಿವೆ.
ಹೆಚ್ಚಿನ ವಿವರಗಳಿಗೆ samskritabharati.in ವೆಬ್​ಸೈಟ್​​ಗೆ ಭೇಟಿ ನೀಡಬಹುದು. ಬೆಂಗಳೂರಿನ ಗಿರಿನಗರದಲ್ಲಿ ಸಂಸ್ಥೆಯ ‘ಅಕ್ಷರಮ್​’ ಹೆಸರಿನ ಕಾರ್ಯಾಲಯವಿದೆ. ದೂರವಾಣಿ ಸಂಖ್ಯೆಗಳು – 080-26721052, 26722576.
ಕಾಲು ನೋವು, ಕಿಬ್ಬೊಟ್ಟೆಯ ನೋವು ನಿಯಂತ್ರಿಸಲು ಈ ಯೋಗಾಸನ ಸಹಕಾರಿ!

VIDEO| ‘ಈಗ ಎಲ್ಲಾ ಜೀರೋ ಆಗಿಬಿಟ್ಟಿದೆ’ – ಕಣ್ಣೀರು ಹಾಕಿದ ಅಫ್ಘಾನಿಸ್ತಾನದ ಮಾಜಿ ಸಂಸದ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 5 =
Remember me
