ಬೆಂಗಳೂರು: ವಿಧಾನಸಭೆ ಚುನಾವಣೆ ಮುಗಿದು ದೊಡ್ಡ ಗೆಲುವ ಪಡೆದು ಸರ್ಕಾರಿ ರಚನೆಯಾಗಿ ಎರಡು ತಿಂಗಳುಗಳ ಬಳಿಕ ಕಾಂಗ್ರೆಸ್ ಚುನಾವಣೆ ಫಲಿತಾಂಶದ ಮಾಹಿತಿ ಕಲೆಹಾಕಲು ಮುಂದಾಗಿದೆ.2023ರ ವಿಧಾನಸಭಾ ಚುನಾವಣೆ ಮತಗಳಿಕೆಗೆ ಸಂಬಂಧಿದಂತೆ ಮಾಹಿತಿ ಕೇಳಿದ್ದು, ಪಕ್ಷದನಾಯಕರು ವಾಸವಿರುವ (ಮತದಾನ ಮಾಡಿದ) ಬೂತ್‌ಗಳ ಪಕ್ಷವಾರು ಮತಗಳವಿವರವಾದ ಪಟ್ಟಿಯನ್ನು ತಕ್ಷಣವೇ ಕಳುಹಿಸಿಕೊಡುವಂತೆ ಎಐಸಿಸಿ ಸೂಚನೆ ನೀಡಿದೆ.ಆ ಪ್ರಕಾರ, ನಾಯಕರು, ಪಕ್ಷದಲ್ಲಿ ಹೊಂದಿರುವ ಸ್ಥಾನ, ವಿಧಾನಸಭಾ ಕ್ಷೇತ್ರದ ಹೆಸರು, ಬೂತ್ ಸಂಖ್ಯೆ, ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಇತರ ಪಕ್ಷದವರು ಪಡೆದ ಮತದ ಮಾಹಿತಿ ಕಳುಹಿಸಿಕೊಡುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೂಚನೆ ಕಳಿಸಿದ್ದಾರೆ.ಹಿರಿಯ ನಾಯಕರುಗಳು, ಲೋಕಸಭೆ, ರಾಜ್ಯಸಭೆ ಸದಸ್ಯರು, 2019ರ ಲೋಕಸಭಾ ಅಭ್ಯರ್ಥಿಗಳು, 2023ರ ವಿಧಾನಸಭಾ ಅಭ್ಯರ್ಥಿಗಳು, ವಿಧಾನ ಪರಿಷತ್ ಸದಸ್ಯರು, ಮಾಜಿ ಸಂಸದರು, ಮಾಜಿ ಶಾಸಕರು, ಜಿಲ್ಲಾ ಕಾಗ್ರೆಸ್ ಅಧ್ಯಕ್ಷರು, ಕೆಪಿಸಿಸಿ ಪದಾಧಿಕಾರಿಗಳು, 2023ರ ವಿಧಾನಸಭೆ ಚುನಾವಣೆ ಆಕಾಂಕ್ಷಿಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಕೆಪಿಸಿಸಿ ಸಂಯೋಜಕರು ಹಾಗೂ ಸಂಬಂದಪಟ್ಟ ಎಲ್ಲಾ ಮುಖಂಡರು ಈ ಮಾಹಿತಿ ಕಳುಹಿಸಬೇಕಾಗುತ್ತದೆ.ವಿಧಾನಸಭೆ ಚುನಾವಣೆಗೆ ಮುನ್ನ ಪ್ರಮುಖ ನಾಯಕರಿಗೆ ತಮ್ಮ ಬೂತ್‌ನಲ್ಲಿ ಹಿಡಿತ ಸಾಧಿಸುವಂತೆ, ಲೀಡ್ ಕೊಡಿಸುವಂತೆ ಎಐಸಿಸಿ ಸೂಚಿಸಿತ್ತು. ಇದೀಗ ಪಕ್ಷದ ಸೂಚನೆಯನ್ನು ಯಾವ ರೀತಿ ಪಾಲನೆ ಮಾಡಿದ್ದಾರೆಂದು ಎಂದು ತಿಳಿದುಕೊಳ್ಳಲು ಪಕ್ಷ ಬಯಸಿದೆ.ಅಷ್ಟೇ ಅಲ್ಲದೇ, ಮುಂದಿನ ದಿನಗಳಲ್ಲಿ ಪಕ್ಷದ ಜವಾಬ್ದಾರಿ ನೀಡಬೇಕಾದ ಸಂದರ್ಭದಲ್ಲಿ ಬೂತ್ ಲೀಡ್‌ಅನ್ನೂ ಸಹ ಪರಿಗಣಿಸಲಾಗುತ್ತದೆ. ಜತೆಗೆ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ನಾಯಕರಿಗೆ ಸ್ಪಷ್ಟ ಸೂಚನೆ ನೀಡುವುದಕ್ಕೂ ಈ ಬೂತ್ ಮಾಹಿತಿ ಬಳಸಿಕೊಳ್ಳಲಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:nineteen + six =
Remember me
