*ಸಂಕಷ್ಟದಲ್ಲೂ ಸಿಗದ ಪಡಿತರ*– ಸರ್ಕಾರ-ನ್ಯಾಯಬೆಲೆ ಅಂಗಡಿಗಳ ನಡುವೆ ಕಿತ್ತಾಟ | ಬಡವರಿಗೆ ಸಂಕಟ
| ವಿಲಾಸ ಮೇಲಗಿರಿ/ಹರೀಶ್ ಬೇಲೂರು ಬೆಂಗಳೂರು
ಪಡಿತರ ಅಕ್ಕಿಯನ್ನು ಈಗಾಗಲೆ ಕಡಿತಗೊಳಿಸಿರುವ ರಾಜ್ಯ ಸರ್ಕಾರ, ಕೋವಿಡ್ ಸಂಕಷ್ಟ ಸಂದರ್ಭದಲ್ಲಿ ಆಹಾರ ಧಾನ್ಯವನ್ನು ಸಕಾಲಕ್ಕೆ ತಲುಪಿಸುವಲ್ಲಿಯೂ ವಿಫಲವಾಗಿದೆ. ಪಡಿತರ ವಿತರಣೆಗೆ ಬಯೋಮೆಟ್ರಿಕ್ ಬೇಡ. ಮೊಬೈಲ್ ಒಟಿಪಿ ಇಲ್ಲವೆ ಚೆಕ್ ಲಿಸ್ಟ್ ಆಧಾರದ ಮೇಲೆ ಅವಕಾಶ ಕೊಡಿ ಎಂದು ನ್ಯಾಯಬೆಲೆ ಅಂಗಡಿ ಮಾಲೀಕರು ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಆದರೆ, ಸರ್ಕಾರ ಆಧಾರ್ ಆಧಾರಿತ ಒಟಿಪಿ ಬಳಸಿ ಪಡಿತರ ಕೊಡುವಂತೆ ಆದೇಶ ಮಾಡಿದೆ. ರಾಜ್ಯದಲ್ಲಿ ಆಧಾರ್ ಆಧಾರಿತ ಒಟಿಪಿ ಸೌಲಭ್ಯ ಇರುವವರು ಶೇ.20-25 ಮಾತ್ರ ಎಂದು ಹೇಳಲಾಗುತ್ತಿದೆ. ಹಾಗಾಗಿ ಎಲ್ಲ ಅರ್ಹ ಫಲಾನುಭವಿಗಳಿಗೆ ಈ ತಿಂಗಳ ಪಡಿತರ ಸಿಗುವ ಗ್ಯಾರಂಟಿ ಇಲ್ಲ.
ಕೇಂದ್ರದ ನೆರವು: ಕೇಂದ್ರ ಸರ್ಕಾರ ಕೋವಿಡ್ ಸಂಕಷ್ಟದಲ್ಲಿ ಬಡವರಿಗೆ ತಲಾ ಐದು ಕೆಜಿ ಉಚಿತವಾಗಿ ಅಕ್ಕಿ ನೀಡುವುದಾಗಿ ಘೊಷಿಸಿದೆ. ಈ ಅಕ್ಕಿ ಜತೆಗೆ ರಾಜ್ಯ ಸರ್ಕಾರ 2 ಕೆಜಿ ಅಕ್ಕಿ, 3 ಕೆಜಿ ರಾಗಿ/ಜೋಳ ಹಾಗೂ ಕಾರ್ಡ್​ವೊಂದಕ್ಕೆ 2 ಕೆಜಿ ಗೋಧಿ ಕೊಡಬೇಕು. ಆದರೆ, ಕರೊನಾ ಕಡುಕಷ್ಟದಲ್ಲೇ ಪಡಿತರ ವಿತರಣೆ ಗೊಂದಲದ ಗೂಡಾಗಿದ್ದು, ಇದು ಪಡಿತರದಾರರ ಹಸಿವು ಹೆಚ್ಚಿಸುತ್ತಿದೆ.
ಇಕೆವೈಸಿಗೆ ವಿನಾಯಿತಿ: ಲಾಕ್​ಡೌನ್ ಸಂದರ್ಭದಲ್ಲಿ ಬಡವರಿಗೆ ತೊಂದರೆಯಾಗಬಾರದು, ತುರ್ತು ಪಡಿತರ ವಿತರಣೆಯಾಗಬೇಕು ಎಂಬ ಹಿನ್ನೆಲೆಯಲ್ಲಿ ಇಕೆವೈಸಿ(ನಿಮ್ಮ ಫಲಾನುಭವಿ ವಿಳಾಸ ಖಚಿತಪಡಿಸಿ ಕೊಳ್ಳಿ)ಗೆ ಈ ಬಾರಿ ವಿನಾಯಿತಿ ನೀಡಿ ಮೇ 1 ರಿಂದಲೇ ಪಡಿತರ ಎತ್ತುವಳಿ ಮಾಡುವಂತೆ ಇಲಾಖೆ ನಿರ್ದೇಶನ ನೀಡಿದೆ. ಆದರೆ, ಈವರೆಗೆ ಶೇ.20-30 ಆಹಾರ ಧಾನ್ಯ ಮಾತ್ರ ಗೋದಾಮಿನಿಂದ ಎತ್ತುವಳಿಯಾಗಿದೆ. ಈ ಪೈಕಿ ಕೆಲವು ಕಡೆ ವಿತರಣೆ ಆರಂಭವಾದರೆ, ಇನ್ನು ಕೆಲವು ಕಡೆ ಆರಂಭವಾಗಿಲ್ಲ. ಉಳಿದ ಶೇ.80 ಆಹಾರ ಪದಾರ್ಥ ಎತ್ತುವಳಿ ವಿಚಾರ ಗೊಂದಲದ ಗೂಡಾಗಿದೆ.
ದುಪ್ಪಟ್ಟು ಆಹಾರ ವಿತರಣೆ: ಕೇಂದ್ರ ಸರ್ಕಾರ( ಎರಡು ತಿಂಗಳಿಗೆ ಮಾತ್ರ) ಉಚಿತವಾಗಿ ಕೊಡುವ 2.17 ಲಕ್ಷ ಮೆ.ಟನ್ ಅಕ್ಕಿ ಹಾಗೂ ರಾಜ್ಯ ಸರ್ಕಾರ ಎಂದಿನಂತೆ ಹಂಚಿಕೆ ಮಾಡುವ 2.17 ಲಕ್ಷ ಟನ್(ಅಕ್ಕಿ, ರಾಗಿ ಮತ್ತು ಗೋಧಿ ಸೇರಿ) ಹಾಗೂ ಸುಮಾರು 23 ಸಾವಿರ ಮೆ.ಟನ್ ಗೋಧಿ ಎತ್ತುವಳಿ ಮಾಡಬೇಕು. ಹಿಂದಿನ ತಿಂಗಳಿಗೆ ಹೋಲಿಸಿದರೆ ಕೇಂದ್ರದ ಉಚಿತ ಅಕ್ಕಿ ಸೇರಿದರೆ ಈ ಬಾರಿ ದುಪ್ಪಟ್ಟು ಪಡಿತರ ಹಂಚಿಕೆ ಮಾಡಬೇಕು. ಆದರೆ, ಮೇ 8 ಕಳೆದರೂ ಗೋದಾಮಿನಿಂದ ಎತ್ತುವಳಿ ಆದ ಅಕ್ಕಿ ಶೇ.20-30 ಮಾತ್ರ. ಹಾಗಾಗಿ ಈ ಬಾರಿ ಪಡಿತರ ವಿತರಣೆ ವಿಳಂಬವಾಗಲಿದೆ ಎನ್ನಲಾಗುತ್ತಿದೆ.
ಏನು ಬೇಡಿಕೆ?: ಕರೊನಾ ಮಹಾಮಾರಿಗೆ ರಾಜ್ಯದಲ್ಲಿ ಈವರೆಗೆ 83 ಮಂದಿ ನ್ಯಾಯಬೆಲೆ ಅಂಗಡಿ ಮಾಲೀಕರು ಬಲಿಯಾಗಿದ್ದಾರೆ. ಹಾಗಾಗಿ ಕರೊನಾ ಹಾವಳಿ ಮುಗಿವರೆಗೆ ಮೊಬೈಲ್ ಒಟಿಪಿ ಅಥವಾ ಚೆಕ್ ಲಿಸ್ಟ್ ಆಧರಿಸಿ ವಿತರಣೆಗೆ ಅವಕಾಶ ಕೊಡಬೇಕು ಎಂಬುದು ನ್ಯಾಯಬೆಲೆ ಅಂಗಡಿ ಮಾಲೀಕರ ಪ್ರಮುಖ ಬೇಡಿಕೆ.
ದ್ವಂದ್ವ ನಿಲುವು ಈಗೇಕೆ?: ಕರೊನಾ ಮೊದಲ ಅಲೆ ಸಂದರ್ಭದಲ್ಲಿ ಬಯೋಮೆಟ್ರಿಕ್ ಬದಲು ಮೊಬೈಲ್ ಒಟಿಪಿ ಪಡೆದು ಫಲಾನುಭವಿಗೆ ಪಡಿತರ ವಿತರಿಸಲು ಆಹಾರ ಇಲಾಖೆ ಈಗಿನ ಆಯುಕ್ತರೇ ಅವಕಾಶ ಮಾಡಿಕೊಟ್ಟಿದ್ದರು. ಆದರೆ, ಈ ಬಾರಿ ಅದಕ್ಕೆ ಅವಕಾಶ ನೀಡುತ್ತಿಲ್ಲ. ಈ ದ್ವಂದ್ವ ಸರಿಯಲ್ಲ ಎನ್ನುವುದು ನ್ಯಾಯಬೆಲೆ ಅಂಗಡಿ ಮಾಲೀಕರ ವಾದ.
ಸಿಮ್ ಬದಲು ಸಮಸ್ಯೆ
ಆಧಾರ್ ಕಾರ್ಡ್ ಮಾಡಿಸುವಾಗ ಕೊಟ್ಟ ಮೊಬೈಲ್ ನಂಬರ್ ಈಗ ಬಹಳಷ್ಟು ಜನರ ಬಳಿ ಇಲ್ಲ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಈ ಸಮಸ್ಯೆ ಹೆಚ್ಚಿದೆ. ಇನ್ನು ಕೆಲವರು ಆಧಾರ್ ಮಾಡಿಸುವಾಗಲೂ ಮೊಬೈಲ್ ನಂಬರ್ ಕೊಟ್ಟಿಲ್ಲ. ಆ ತರುವಾಯ ಮೊಬೈಲ್ ನಂಬರ್ ಅಳವಡಿಸುವಂತೆ ಸೂಚನೆ ನೀಡಿದರೂ ಅನೇಕರು ಅಳವಡಿಸಿಲ್ಲ. ಅಲ್ಲದೆ, ಜನರು ಆಗಾಗ್ಗೆ ಸಿಮ್ ಬದಲಾವಣೆ ಮಾಡುತ್ತಾರೆ. ಹಾಗಾಗಿ ಆಧಾರ್ ಆಧಾರಿತ ಮೊಬೈಲ್ ಒಟಿಪಿ ಮೂಲಕ ಪಡಿತರ ವಿತರಣೆ ಕಷ್ಟ ಎಂಬ ಮಾತು ಕೇಳಿ ಬರುತ್ತಿದೆ.
ಕಾರ್ಡ್​ದಾರರು ಎಷ್ಟು? ಏನು?
ರಾಜ್ಯದಲ್ಲಿ 1,15,76,871 ಬಿಪಿಎಲ್ ಕಾರ್ಡ್ ಗಳು(4.60 ಕೋಟಿ ಯುನಿಟ್), 10,80,240 ಅಂತ್ಯೋದಯ ಕಾರ್ಡ್( ಇವರಿಗೆ ಗೋಧಿ ಇಲ್ಲ) ಹಾಗೂ 18-20 ಲಕ್ಷ ಎಪಿಎಲ್ ಕಾರ್ಡ್​ಗಳಿವೆ.
ಆಧಾರ್ ಆಧಾರಿತ ಮೊಬೈಲ್ ಒಟಿಪಿ ಇರುವ ಪಡಿತರ ಚೀಟಿದಾರರ ಸಂಖ್ಯೆ ತೀರಾ ಕಡಿಮೆ ಇದೆ. ವಿತರಣಾ ವ್ಯವಸ್ಥೆಯ ಪಾರದರ್ಶಕತೆಗೆ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡರೂ ನಮ್ಮ ಅಭ್ಯಂತರವಿಲ್ಲ. ಆಧಾರ್ ಆಧಾರಿತ ಒಟಿಪಿ ಸೌಲಭ್ಯ ಇಲ್ಲದವರು ಪಡಿತರ ವಂಚಿತರಾಗದಂತೆ ಮೊಬೈಲ್ ಒಟಿಪಿ ಇಲ್ಲವೆ ಚೆಕ್ ಲಿಸ್ಟ್ ಮೂಲಕ ವಿತರಣೆಗೆ ಸರ್ಕಾರ ಅವಕಾಶ ಮಾಡಿಕೊಡಬೇಕು.| ಟಿ.ಕೃಷ್ಣಪ್ಪ, ರಾಜ್ಯಾಧ್ಯಕ್ಷ, ಸರ್ಕಾರಿ ಪಡಿತರ ವಿತರಕರ ಸಂಘಅನ್ನಭಾಗ್ಯ ಅಕ್ಕಿ ದುರ್ಬಳಕೆ ಆಗುವುದರಿಂದ ಆಧಾರ್ ಒಟಿಪಿ ಮೂಲಕ ಪಡಿತರ ನೀಡುವಂತೆ ಆದೇಶಿಸಲಾಗಿದೆ. ಸರ್ಕಾರ ಸಹ ಮೊಬೈಲ್ ಒಟಿಪಿ ಮತ್ತು ಚೆಕ್​ಲಿಸ್ಟ್​ನಲ್ಲೇ ಪಡಿತರ ಹಂಚಿಗೆ ಬಗ್ಗೆ ಗಂಭೀರ ಚಿಂತನೆ ನಡೆಸಿದೆ.| ಶಮ್ಲಾ ಇಕ್ಬಾಲ್, ಆಹಾರ ಇಲಾಖೆ ಆಯುಕ್ತರು
ಆಧಾರ್ ಆಧಾರಿತ ಮೊಬೈಲ್ ಒಟಿಪಿ ಇರುವ ಪಡಿತರ ಚೀಟಿದಾರರ ಸಂಖ್ಯೆ ತೀರಾ ಕಡಿಮೆ ಇದೆ. ವಿತರಣಾ ವ್ಯವಸ್ಥೆಯ ಪಾರದರ್ಶಕತೆಗೆ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡರೂ ನಮ್ಮ ಅಭ್ಯಂತರವಿಲ್ಲ. ಆಧಾರ್ ಆಧಾರಿತ ಒಟಿಪಿ ಸೌಲಭ್ಯ ಇಲ್ಲದವರು ಪಡಿತರ ವಂಚಿತರಾಗದಂತೆ ಮೊಬೈಲ್ ಒಟಿಪಿ ಇಲ್ಲವೆ ಚೆಕ್ ಲಿಸ್ಟ್ ಮೂಲಕ ವಿತರಣೆಗೆ ಸರ್ಕಾರ ಅವಕಾಶ ಮಾಡಿಕೊಡಬೇಕು.
| ಟಿ.ಕೃಷ್ಣಪ್ಪ, ರಾಜ್ಯಾಧ್ಯಕ್ಷ, ಸರ್ಕಾರಿ ಪಡಿತರ ವಿತರಕರ ಸಂಘ
ಅನ್ನಭಾಗ್ಯ ಅಕ್ಕಿ ದುರ್ಬಳಕೆ ಆಗುವುದರಿಂದ ಆಧಾರ್ ಒಟಿಪಿ ಮೂಲಕ ಪಡಿತರ ನೀಡುವಂತೆ ಆದೇಶಿಸಲಾಗಿದೆ. ಸರ್ಕಾರ ಸಹ ಮೊಬೈಲ್ ಒಟಿಪಿ ಮತ್ತು ಚೆಕ್​ಲಿಸ್ಟ್​ನಲ್ಲೇ ಪಡಿತರ ಹಂಚಿಗೆ ಬಗ್ಗೆ ಗಂಭೀರ ಚಿಂತನೆ ನಡೆಸಿದೆ.| ಶಮ್ಲಾ ಇಕ್ಬಾಲ್, ಆಹಾರ ಇಲಾಖೆ ಆಯುಕ್ತರು
ಅನ್ನಭಾಗ್ಯ ಅಕ್ಕಿ ದುರ್ಬಳಕೆ ಆಗುವುದರಿಂದ ಆಧಾರ್ ಒಟಿಪಿ ಮೂಲಕ ಪಡಿತರ ನೀಡುವಂತೆ ಆದೇಶಿಸಲಾಗಿದೆ. ಸರ್ಕಾರ ಸಹ ಮೊಬೈಲ್ ಒಟಿಪಿ ಮತ್ತು ಚೆಕ್​ಲಿಸ್ಟ್​ನಲ್ಲೇ ಪಡಿತರ ಹಂಚಿಗೆ ಬಗ್ಗೆ ಗಂಭೀರ ಚಿಂತನೆ ನಡೆಸಿದೆ.
| ಶಮ್ಲಾ ಇಕ್ಬಾಲ್, ಆಹಾರ ಇಲಾಖೆ ಆಯುಕ್ತರು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 5 =
Remember me
