ಬೆಳಗಾವಿ:ಪಂಚಮಸಾಲಿ ಮೀಸಲಾತಿ ಹೋರಾಟ ವಿಷಯದಲ್ಲಿ ಸರ್ಕಾರ ಕೊಟ್ಟಿರುವ ಮಾತು ಉಳಿಸಿಕೊಳ್ಳಲು ಜ.12ರ ವರೆಗೆ ಇನ್ನೂ 48 ಗಂಟೆಗಳ ಕಾಲಾವಕಾಶವಿದೆ. ತಕ್ಷಣ ಮೀಸಲಾತಿ ವಿಷಯವಾಗಿ ಕೈಗೊಂಡ ನಿರ್ಣಯಗಳ ಕುರಿತು ಅಧಿಸೂಚನೆ ಹೊರಡಿಸಬೇಕು, ಇಲ್ಲವಾದರೆ ಜ. 13ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಶಿಗ್ಗಾವಿಯಲ್ಲಿನ ಮನೆ ಮುಂದೆ ಸತ್ಯಾಗ್ರಹ ನಡೆಸಲಾಗುವುದು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.‌
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮೀಸಲಾತಿ ಹುಸಿ ಭರವಸೆ ಕೊಟ್ಟು ಹೋರಾಟದ ದಾರಿ ತಪ್ಪಿಸಿದ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ನಿರ್ಧರಿಸಲಾಗಿದೆ. ಜ.13ರಂದು ಹಾವೇರಿ ಜಿಲ್ಲೆಯ ಶಿಗ್ಗಾವಿಯ ಸಿಎಂ ಮನೆಯಿಂದಲೇ ಹೋರಾಟ ಆರಂಭಿಸುತ್ತೇವೆ. ಶಿಗ್ಗಾವಿ ಹೋರಾಟವನ್ನೆ ಸಂಕ್ರಾಂತಿ ಎಂದು ಆಚರಿಸೋಣ. ನ್ಯಾಯ ಸಿಕ್ಕರೆ ಮಾತ್ರ ನಿಜವಾಗಿ ಹಬ್ಬ ಆಚರಿಸೋಣ ಎಂದು ಸಮುದಾಯದ ಜನತೆಗೆ ಸೂಚನೆ ನೀಡಲಾಗಿದೆ. ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಸುವ ನಿರ್ಧಾರ ಮಾಡಲಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಪಂಚನಗೌಡ ದ್ಯಾಮನಗೌಡರ, ಅಡವೇಶ ಇಟಗಿ, ಆರ್.ಕೆ.ಪಾಟೀಲ್, ರಾಮನಗೌಡ ಪಾಟೀಲ್, ರಾಜು ಮಗದುಮ್ಮ, ಗುಂಡು ಪಾಟೀಲ ಇದ್ದರು.
ಸಚಿವ ಸಂಪುಟ ನಿರ್ಣಯ ತಿರಸ್ಕಾರ:ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಮಣಿದ ಸರ್ಕಾರ ಸಮುದಾಯಕ್ಕೆ ಪ್ರತ್ಯೇಕ ಗುಂಪು ರಚಿಸಿ ಮೀಸಲಾತಿ ಸೌಲಭ್ಯ ಕಲ್ಪಿಸುವ ಭರವಸೆ ಕೊಟ್ಟು ಹೋರಾಟ ನಿಲ್ಲಿಸಿದ್ದರು. ನಂತರ ಡಿ.29 ರಂದು ಸಚಿವ ಸಂಪುಟ ಸಭೆ ಕರೆದು ಕೈಗೊಂಡ ನಿರ್ಧಾರಗಳ ಕುರಿತು ಇಂದಿಗೂ ಅಧಿಸೂಚನೆ ಹೊರಡಿಸದೆ ಸ್ವತಃ ಸರಕಾರ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೋರಾಟದ ದಿಕ್ಕು ತಪ್ಪಿಸಿರುವುದರಿಂದ ಸಚಿವ ಸಂಪುಟದ ನಿರ್ಣಯಗಳನ್ನು ನಾವು ತಿರಸ್ಕರಿಸಿದ್ದೇವೆ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.
ಅಡ್ಡಿಯಾಗಿರುವ ಸಚಿವರ ಪಟ್ಟಿ ಬಿಡುಗಡೆ:ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಅಡ್ಡಿ ಮಾಡುತ್ತಿರುವ ಸಚಿವರು, ಶಾಸಕರು ಮತ್ತು ಪ್ರಭಾವಿಗಳ ಪಟ್ಟಿ ಕೂಡ ಶಿಗ್ಗಾವಿಯಲ್ಲಿ ನಡೆಯುವ ಸತ್ಯಾಗ್ರಹ ಸಂದರ್ಭದಲ್ಲಿಯೇ ಬಿಡುಗಡೆ ಮಾಡುತ್ತೇವೆ. ಸರಕಾರದ ಜತೆಗೆ ಅಡ್ಡಿ ಮಾಡಿದವರ ವಿರುದ್ಧ ಯಾವ ರೀತಿ ಹೋರಾಟ ನಡೆಸಬೇಕು ಎನ್ನುವ ರೂಪರೇಷೆ ಕೂಡ ಕೈಗೊಳ್ಳಲಾಗುವುದು ಎಂದು ಬಸವಜಯ ಮೃತ್ಯಂಜಯ ಸ್ವಾಮೀಜಿ ಹೇಳಿದರು.
‘ನಾನು ಯೂಟ್ಯೂಬರ್ ಆಗಿದ್ದು ಯಾಕೆ?’ ಅಂತ ಖುದ್ದು ಡಾ.ಬ್ರೋ ಅವರೇ ಹಂಚಿಕೊಂಡಿದ್ದಾರೆ ಇಲ್ಲಿ..

ಡಾ.ಬ್ರೋ ಯಾವಾಗ ವಿದೇಶಕ್ಕೆ ಹೋಗಲ್ಲ?; ಒಂದು ದೇಶಕ್ಕೆ ಹೊರಟಾಗ ಅವರ ಅಧ್ಯಯನ ಹೇಗಿರುತ್ತೆ?; ಇಲ್ಲಿದೆ ಮಾಹಿತಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − fifteen =
Remember me
