ಹಾಸನ:ಅಬಕಾರಿ ಸುಂಕ ಹೆಚ್ಚಿಸುವುದಾಗಿ ಬಜೆಟ್​ನಲ್ಲಿ ಘೋಷಿಸಿರುವ ಸರ್ಕಾರದ ನಿಲುವಿನ ವಿರುದ್ಧ ಕರ್ನಾಟಕ ಮದ್ಯಪಾನಪ್ರಿಯರ ಸಂಘ ಅಸಮಾಧಾನ ವ್ಯಕ್ತಪಡಿಸಿದ್ದು, ಸರ್ಕಾರ ಈ ನಿಲುವಿನಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದೆ.
ಕರ್ನಾಟಕ ಮದ್ಯಪಾನಪ್ರಿಯರ ಸಂಘದ ರಾಜ್ಯಾಧ್ಯಕ್ಷ ವೆಂಕಟೇಶಗೌಡ ಬೋರೇಹಳ್ಳಿ ಇಂದು ಹಾಸನದಲ್ಲಿ ಸುದ್ದಿಗಾರರ ಜತೆ ಮಾತನಾಡಿ ಈ ವಿಷಯ ತಿಳಿಸಿದರು. ಅಬಕಾರಿ ಸುಂಕ ಶೇ. 20 ಜಾಸ್ತಿ ಮಾಡುವುದಾಗಿ ಸರ್ಕಾರ ಬಜೆಟ್​ನಲ್ಲಿ ಘೋಷಿಸಿದೆ. ಅದನ್ನು ಏರಿಸಬೇಡಿ, ಬದಲಿಗೆ ಶೇ. 10 ಕಡಿಮೆ ಮಾಡಿ, ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು ಎಂದು ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ:ಶುಲ್ಕ ಪಾವತಿಗಾಗಿ ಪಾರ್ಟ್​ ಟೈಂ ಕೆಲಸ ಮಾಡಿ ಓದಿದ್ದ ವಿದ್ಯಾರ್ಥಿನಿಗೆ 2 ಚಿನ್ನದ ಪದಕ!
ಬಿಜೆಪಿಯವರು ಶೇ. 30 ಏರಿಸಿ ಹೋಗಿದ್ದರು. ಒಳ್ಳೆಯ ಸರ್ಕಾರ ಬರುತ್ತದೆ ಎಂದು ನಾವೆಲ್ಲ ನಿಮಗೆ ಮತ ಹಾಕಿದೆವು. ಆದರೆ ನೀವು ಆರಂಭದಲ್ಲೇ ನಮಗೇ ಹೊಡೆತ ಕೊಡಲು ಆರಂಭಿಸಿದ್ದೀರಿ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಅಬಕಾರಿ ಸುಂಕ ಏರಿಸದೆ ಯಥಾಸ್ಥಿತಿ ಕಾಪಾಡಿ ಎಂದು ಸಿಎಂ ಮತ್ತು ಸಂಬಂಧಿತ ಸಚಿವರಿಗೆ ಮುಂದಿನ ವಾರ ಮನವಿ ನೀಡಲಾಗುವುದು. ಸ್ಪಂದಿಸದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ:ಮದುವೆ ವಾರ್ಷಿಕೋತ್ಸವಕ್ಕಾಗಿ ಪತ್ನಿಯನ್ನು ಊರಿನಿಂದ ಕರೆಸಿಕೊಂಡ; ಹೆಂಡತಿ ಬರುವಷ್ಟರಲ್ಲಿ ಹೆಣವಾದ ಗಂಡ!
ಬೇರೆ ಜನಾಂಗಕ್ಕೆ ಕೊಟ್ಟ ಹಾಗೆ ನಮಗೂ ನಿಗಮ ಕೊಡಿ ಎಂಬ ಬೇಡಿಕೆಯೂ ಇದೆ. ಎಲ್ಲ ಜಾತಿಗೂ ನಿಗಮ ಕೊಟ್ಟಿದ್ದೀರಿ, ನಮ್ಮಲ್ಲಿ ಜಾತಿ ಭೇದ ಭಾವ ಇಲ್ಲ. ನಮಗೆ ಯಾಕೆ ನಿಗಮ ಮಾಡಬಾರದು? ನಮಗೆ ನಮ್ಮದೇ ಆದ ನಿಗಮ ಕೊಡಿ ಎಂದೂ ಅವರು ಆಗ್ರಹಿಸಿದ್ದಾರೆ. ನಮ್ಮ ಮಕ್ಕಳಿಗೆ ಉಚಿತ ಶಿಕ್ಷಣ, ನಮಗೆ ಉಚಿತ ಚಿಕಿತ್ಸೆ ಕೊಡಬೇಕು ಎಂದೂ ಅವರು ಹೇಳಿದ್ದಾರೆ.
ನಾವು ಯಾರಿಗೂ ಕುಡಿಯಿರಿ ಎಂದು ಪ್ರಚೋದನೆ ಮಾಡುವುದಿಲ್ಲ. ‘ನಿತ್ಯ ದುಡಿ, ಸತ್ಯ ನುಡಿ, ಸ್ವಲ್ಪ ಕುಡಿ, ಮನೆಗೆ ನಡಿ’ ಎಂಬುದು ನಮ್ಮ ಸ್ಲೋಗನ್ ಆಗಿದ್ದು, ದುಡಿದಿದ್ದರಲ್ಲಿ ಸ್ವಲ್ಪವಷ್ಟೇ ಕುಡಿದು ಮನೆಯವರೊಂದಿಗೆ ಆರಾಮಾಗಿರಿ ಎಂಬುದು ನಮ್ಮ ಕಿವಿಮಾತು ಎಂದೂ ವೆಂಕಟೇಶಗೌಡ ಹೇಳಿದ್ದಾರೆ.

ಕಾಮಕುಮಾರ ಸ್ವಾಮೀಜಿಯ ಭೀಕರ ಕೊಲೆ; ತಲೆ ಇಬ್ಭಾಗ, ಕೈ-ಕಾಲುಗಳೂ ಕಟ್, ಶವ 9 ತುಂಡು!

ಒಂದು ವರ್ಷದ ಅಂತರ.. ಅದೇ ಜಾಗ.. ಒಂದೇ ಥರದಲ್ಲಿ ಸಂಬಂಧಿಕರಿಬ್ಬರ ಸಾವು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × one =
Remember me
