ಬೆಂಗಳೂರು:ಸಮ್ಮಿಶ್ರ ಸರ್ಕಾರದ ಪತನದಲ್ಲಿ ಬಿಜೆಪಿ ಜತೆಗೆ ಕಾಂಗ್ರೆಸ್​ನ ಒಂದು ಗುಂಪು ಷಡ್ಯಂತ್ರ ನಡೆಸಿತ್ತು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಆರೋಪಿಸಿದ್ದಾರೆ.
ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಒಂದು ವರ್ಷವಾದ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳ ಜತೆ ವಿಡಿಯೋ ಸಂವಾದ ನಡೆಸಿದರು.ಹಲವಾರು ವಾಮಮಾರ್ಗಗಳಿಂದ ತಮ್ಮ ಸರ್ಕಾರ ಬೀಳಿಸಲಾಯಿತು. ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಕಾಂಗ್ರೆಸ್​ನ ಒಂದು ಗುಂಪು ಸರ್ಕಾರ ಉರುಳಿಸಲು ಪ್ರಯತ್ನ ಪಟ್ಟಿತು. ಆಡಳಿತ ನಡೆಸಲು ಕ್ಷಣಕ್ಷಣಕ್ಕೂ ಯಾವ ರೀತಿ ಅಡ್ಡಿಪಡಿಸಿದರು ಎಂಬ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ ಎಂದರು.
ಇದನ್ನೂ ಓದಿ:ವಾಹನಗಳಲ್ಲಿ ಇನ್ನು ಹೆಚ್ಚುವರಿ ಟೈಯರ್​ ಅವಶ್ಯಕತೆ ಇಲ್ಲ!
ನಾನು ನಿಷ್ಕ್ರಿಯನಾಗಿದ್ದೇನೆ, ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿಲ್ಲ ಎಂಬ ಭಾವನೆ ಬೇಡ. ಕರೊನಾ ಹಾವಳಿ ಕಡಿಮೆಯಾಗಲಿ ಎಂದು ಸುಮ್ಮನಿದ್ದೇನೆ. ಪ್ರತಿ ತಾಲೂಕಿಗೂ ಭೇಟಿ ನೀಡಿ ಪಕ್ಷ ಸಂಘಟಿಸುತ್ತೇನೆ.| ಎಚ್.ಡಿ. ಕುಮಾರಸ್ವಾಮಿಮಾಜಿ ಮುಖ್ಯಮಂತ್ರಿ
ಕಾರ್ಯಕರ್ತರಿಗಾಗಿ ಕಣ್ಣೀರು:ಸಿಎಂ ಆದ ಕೆಲವೇ ದಿನಗಳಲ್ಲಿ ನನ್ನ ಕಾರ್ಯಕರ್ತರಿಂದ ದೂರವಾಗುತ್ತಿದ್ದೇನೆ ಎಂಬ ಭಾವನೆ ಮೂಡಿತು. ಪಕ್ಷದ ಕಚೇರಿಯಲ್ಲಿ ನನಗೆ ಸನ್ಮಾನ ಮಾಡಿದಾಗ ‘ನಿಮ್ಮಂತಹ ನಿಷ್ಠಾವಂತ ಕಾರ್ಯಕರ್ತರಿಗೆ ನನ್ನಿಂದ ಏನೂ ಮಾಡಲು ಆಗುತ್ತಿಲ್ಲವಲ್ಲ’ ಎಂದು ಕಣ್ಣೀರು ಹಾಕಿದ್ದೆ. ಅದನ್ನು ಬೇರೆ ಬೇರೆ ರೀತಿ ವಿಶ್ಲೇಷಣೆ ಮಾಡಲಾಯಿತು ಎಂದು ಕುಮಾರಸ್ವಾಮಿ ಅಸಮಾಧಾನ ಹೊರಹಾಕಿದರು.
ಇದನ್ನೂ ಓದಿ:ಅಸ್ಸಾಂ ಪ್ರವಾಹ: ಸಂಕಷ್ಟದಲ್ಲಿವೆ 2,525 ಗ್ರಾಮಗಳು, ಮರಣ ಪ್ರಮಾಣ 89
ಹೆಸರಿಗಷ್ಟೇ ಮುಖ್ಯಮಂತ್ರಿ ಆಗಿದ್ದೆ:ಕಾಂಗ್ರೆಸ್ ಅಸಹಕಾರದ ನಡುವೆಯೂ 14 ತಿಂಗಳಲ್ಲಿ ರಾಜ್ಯದ ಅಭಿವೃದಿಟಛಿ ಮಾಡಿದ್ದೇನೆ. 2 ಬಾರಿ ಮೈತ್ರಿ ಸರ್ಕಾರ ನಡೆಸಿ ನೋವು ಅನುಭವಿಸಿದ್ದೇನೆ. ನಾನು ಹೆಸರಿಗಷ್ಟೇ ಸಿಎಂ ಆಗಿದ್ದೆ. ಪ್ರತಿಯೊಂದಕ್ಕೂ ಕಾಂಗ್ರೆಸ್ ಅನುಮತಿ ಪಡೆಯಬೇಕಿತ್ತು. ಅವರು ಬಿಟ್ಟುಕೊಟ್ಟ ನಿಗಮ ಮಂಡಳಿ ಪಡೆಯಬೇಕಿತ್ತು ಎಂದು ಕುಮಾರಸ್ವಾಮಿ ಹೇಳಿದರು.
ಇದನ್ನೂ ಓದಿ:ಬಿಜೆಪಿಗೆ ಸೇರಿ ಎಂದ ನೆಟ್ಟಿಗನಿಗೆ ಡ್ರೋನ್​ ಪ್ರತಾಪ್​ ನೀಡಿದ ಉತ್ತರ ಕೇಳಿದ್ರೆ ನಿಮ್ಗೆ ಶಾಕ್​ ಆಗ್ಬೋದು!
ಸುಖಾಸುಮ್ಮನೆ ಆರೋಪ ಮಾಡುವುದಿಲ್ಲ:ಸರ್ಕಾರದ ವಿರುದ್ಧ ಕಾಂಗ್ರೆಸ್​ನವರಂತೆ ವೃಥಾ ಆರೋಪ ಮಾಡುವುದಿಲ್ಲ. ದಾಖಲೆ ಇಟ್ಟು ಮಾತಾಡುತ್ತೇನೆ. ಮೈತ್ರಿ ಸರ್ಕಾರವನ್ನು ಅಸಮರ್ಥ ಸರ್ಕಾರ ಎಂದು ಬಿಂಬಿಸಿದ್ದು ಬಿಜೆಪಿ. ಈ ಸರ್ಕಾರದ ಆಡಳಿತವನ್ನು ಜನ ಗಮನಿಸಲಿ, ಜನರ ಅನುಭವಕ್ಕೆ ಬರಲಿ ಎಂದೇ ಮೌನ ವಹಿಸಿದ್ದೇನೆ. ನೆರೆ ಬಂದಾಗ ಬಿಜೆಪಿ ಸರ್ಕಾರ ನಿಭಾಯಿಸಿದ ರೀತಿಯನ್ನು ನಾನು ಗಮನಿಸಿದ್ದೇನೆ. ಕರೊನಾ ಪರಿಸ್ಥಿತಿಯನ್ನು ಸರ್ಕಾರ ಯಾವ ರೀತಿ ನಿರ್ವಹಿಸುತ್ತಿದೆ ಎಂದು ನೋಡುತ್ತಿದ್ದೇನೆ. ಮಂತ್ರಿಗಳು ಪ್ರತಿದಿನ ಮಾಧ್ಯಮಗಳ ಮುಂದೆ ಹೇಳಿಕೆ ಕೊಡಲಷ್ಟೇ ಸೀಮಿತ ಆಗಿದ್ದಾರೆ. ನನ್ನನ್ನು ಟೀಕಿಸುವುದಕ್ಕಿಂತ ಜನರ ಜೀವ ಮುಖ್ಯ ಎಂದು ಕುಮಾರಸ್ವಾಮಿ ಹೇಳಿದರು.
ಇದನ್ನೂ ಓದಿ:ಸೈಬರಾಬಾದ್​ ಪೊಲೀಸ್​ ಆಯುಕ್ತ ವಿಶ್ವನಾಥ ಸಜ್ಜನರ್​ರಿಂದ ಕನ್ನಡಿಗರಲ್ಲಿ ವಿಶೇಷ ಮನವಿ
ನಿಮ್ಮ ದುಡಿಮೆ ಫಲದಿಂದ ನಮ್ಮ ಪಕ್ಷದ ಸರ್ಕಾರವನ್ನು ತರಬೇಕಿದೆ. ನಮ್ಮ ಪಕ್ಷದ ಬೇರು ಕಿತ್ತುಹಾಕುವ ಪ್ರಯತ್ನ ನಡೆಯುತ್ತಿದೆ. ಜೆಡಿಎಸ್ ಕಾರ್ಯಕರ್ತರ ಶಕ್ತಿ ಕಿತ್ತುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.
ಇದನ್ನೂ ಓದಿ:ದುಬೆ ಎನ್‌ಕೌಂಟರ್‌ ತನಿಖೆಗೆ ಜಡ್ಜ್‌ ನೇಮಕ: ಹಲವು ಸರ್ಕಾರಗಳು ಸಂಕಷ್ಟದಲ್ಲಿ!
ಕೇಂದ್ರದ ಅಸಹಕಾರ:ಕೇಂದ್ರ ನಾಯಕರು ಸಿಎಂ ಭೇಟಿಗೆ ಅವಕಾಶ ಕೊಡದೆ ನಿರ್ಲಕ್ಷ್ಯ ತೋರಿದ್ದಾರೆ. ರಾಜ್ಯದ ವಿಷಯಗಳ ಕುರಿತು ರ್ಚಚಿಸಲು ಬಯಸಿದರೆ ಸಿಎಂ ಭೇಟಿಗೆ ಅವಕಾಶ ಕೊಡುವುದಿಲ್ಲ. ಅವರ ಈ ನಿರ್ಲಕ್ಷ್ಯ ಬಿಎಸ್​ವೈಗೆ ಮಾಡಿದ ಅವಮಾನ ಮಾತ್ರವಲ್ಲ, ನಾಡಿನ ಜನತೆಗೆ ಮಾಡಿದ ಅವಮಾನ ಎಂದು ಕುಮಾರಸ್ವಾಮಿ ಹೇಳಿದರು. ಬಿಜೆಪಿಯವರು ಇವತ್ತು ಚೀನಾದ ವಸ್ತು ಬಹಿಷ್ಕಾರಕ್ಕೆ ಕರೆ ನೀಡುತ್ತಿದ್ದಾರೆ. ನಾನು ಅಂದೇ ‘ಕಾಂಪಿಟ್ ವಿತ್ ಚೀನಾ’ ಎಂದು ಕರೆ ಕೊಟ್ಟಿದ್ದೆ ಎಂದರು.
ಹಾಡುಹಗಲೇ ನಡೆಯಿತು ರಾಬರಿ: ಮಾಸ್ಕ್ ಧರಿಸಿದವರು 3 ಲಕ್ಷಕ್ಕೂ ಅಧಿಕ ಮೌಲ್ಯದ ನಗ,ನಗದು ದೋಚಿದ್ರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 13 =
Remember me
