ಕುಶಾಲನಗರ:ಕುಶಾಲನಗರದ ಕಲಾ ಭವನದ ಸಮೀಪದಲ್ಲಿ ಶುಕ್ರವಾರ ಬೆಳಗ್ಗೆ ಎಂಪೈರ್ ಏಜೆನ್ಸಿಯ ಕೆಲ ವಾಯಿದೆ ಮೀರಿದ ಕೂದಲ ಬಣ್ಣದ ಪ್ಯಾಕೆಟ್‌ಗಳನ್ನು ಬಿಸಾಡಿ ಹೋಗಿದ್ದರು. ಆದರೆ, ಪರಿಶೀಲಿಸಿದ ಅಧಿಕಾರಿಗಳು ಕಸ ಹಾಕಿದವರಿಂದಲೇ ಕಸ ಹೆಕ್ಕಿಸಿದ ಘಟನೆ ನಡೆದಿದೆ.
ಕಸ ಹಾಕಿದ್ದನ್ನು ಗಮನಿಸಿದ ಸ್ಥಳಿಯರಾದ ಜಿ.ರಾಘವೇಂದ್ರ ಮತ್ತು ಬಿ.ಎನ್.ರಾಘವೇಂದ್ರ ವಿಜಯವಾಣಿ ವರದಿಗಾರರಿಗೆ ತಿಳಿಸಿದರು. ತಕ್ಷಣ ಫೋಟೋಗಳನ್ನು ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಪ.ಪಂ.ಮುಖ್ಯಾಧಿಕಾರಿ, ಪ.ಪಂ. ಅಧ್ಯಕ್ಷ, ಉಪಾಧ್ಯಕ್ಷೆ, ಸದಸ್ಯರು ಇರುವ ವಾಟ್ಸ್ ಅಪ್ ಗ್ರೂಪಿಗೆ ಹಾಕಲಾಯಿತು.
ನಂತರ ಪ.ಪಂ.ನ ಅಧ್ಯಕ್ಷ ಜಯವರ್ಧನ್, ಉಪಾಧ್ಯಕ್ಷೆ ಸುರಾಯಬಾನು, ಮುಖ್ಯಾಧಿಕಾರಿ ಸುಜಯ ಕುಮಾರ್ ಮತ್ತು ಸದಸ್ಯ ಬಿ.ಅಮೃತ್ ರಾಜ್ರವರು ಸ್ಥಳಕ್ಕೆ ಆಗಮಿಸಿ, ಪರಿಶೀಲಿಸಿ ಎಂಪೈರ್ ಏಜೆನ್ಸಿಯ ಮಾಲೀಕ ನೀರಜ್ನನ್ನು ಕರೆಸಿ ಬಿಸಾಡಿರುವ ವಸ್ತುಗಳನ್ನು ತೆರವುಗೊಳಿಸಲು ಸೂಚಿಸಿದರು. ನೀರಜ್ ತನ್ನ ಸಿಬ್ಬಂದಿಗಳನ್ನು ಕರೆಸಿ ತೆರವುಗೊಳಿಸಿದರು.ಬಿಜೆಪಿ ತಾಲೂಕು ವಕ್ತಾರ ಕೆ.ಜಿ.ಮನು, ಡಿ.ಸಿ.ಮಂಜುನಾಥ್, ಪ್ರಶಾಂತ್ ಮುಂತಾದವರು ಸ್ಥಳದಲ್ಲಿ ಹಾಜರಿದ್ದರು.
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
Sign in to your account
Please enter an answer in digits:18 + seventeen =
Remember me
