ಬೆಂಗಳೂರು:ರಾಷ್ಟ್ರೀಯ ಹೆದ್ದಾರಿ ಟೋಲ್​ಪ್ಲಾಜಾಗಳಲ್ಲಿ ಫಾಸ್ಟ್ಯಾಗ್​​ ಮೂಲಕ ಟೋಲ್ ಪಾವತಿಸಿ ಸಮಯ ಉಳಿಸಿ ಎಂಬುದು ರಾ.ಹೆ. ಪ್ರಾಧಿಕಾರದ ಹೇಳಿಕೆ. ಆದರೆ, ಫಾಸ್ಟಾ್ಯಗ್ ವ್ಯವಸ್ಥೆ ಜಾರಿ ನಂತರವೂ ವಾಹನಗಳು ಕಾಯುವ ಸಮಯ ಹೆಚ್ಚಾಗಿದೆ.
ದೇಶದಲ್ಲಿ 1.4 ಲಕ್ಷ ಕಿ.ಮೀ. ಉದ್ದದ ರಾ.ಹೆದ್ದಾರಿಯಿದ್ದು, ಆ ಪೈಕಿ 24,996 ಕಿ.ಮೀ. ಹೆದ್ದಾರಿ ಟೋಲ್ ವ್ಯಾಪ್ತಿಗೊಳಪಟ್ಟಿದೆ. ರಾಜ್ಯ ವ್ಯಾಪ್ತಿಯಲ್ಲಿನ 3,700 ಕಿ.ಮೀ. ರಾ.ಹೆದ್ದಾರಿಗಳಲ್ಲಿ 36 ಟೋಲ್​ಗಳಿವೆ. ದೇಶದಲ್ಲಿನ ಒಟ್ಟು 543 ಟೋಲ್ ಪ್ಲಾಜಾಗಳ ಪೈಕಿ 488ರಲ್ಲಿ ಟ್ರಾಫಿಕ್ ಮಾನಿಟರಿಂಗ್ ವ್ಯವಸ್ಥೆ ಅಳವಡಿಸಲಾಗಿದೆ. ಇದರ ಮೂಲಕ ವಾಹನಗಳು ಟೋಲ್​ಗೆ ಬರುವ ಮತ್ತು ಫಾಸ್ಟಾ್ಯಗ್ ಸ್ಕಾ್ಯನ್ ಆದ ಬಳಿಕ ಹೊರಡಲು ಎಷ್ಟು ಸಮಯ ಬೇಕಾಗಲಿದೆ ಎಂಬುದನ್ನು ಅಂದಾಜಿಸಲಾಗುತ್ತದೆ.
ಪ್ರಾಧಿಕಾರದ ಮಾಹಿತಿಯಂತೆ ನ.15ರಿಂದ ಡಿ.14ರವರೆಗೆ ಸರಾಸರಿ ಕಾಯುವ ಸಮಯ 7.44 ನಿಮಿಷವಾಗಿದೆ. ಡಿ.15ರಿಂದ ಜ.14ರವರೆಗೆ ಕಾಯುವ ಸಮಯ ಸರಾಸರಿ 9.57 ನಿಮಿಷಕ್ಕೆ ಏರಿಕೆಯಾಗಿದೆ. ಅದರಲ್ಲೂ ಡಿ.15ರಂದು ಒಂದೇ ದಿನ ಸರಾಸರಿ 10.04 ನಿಮಿಷಕ್ಕೆ ಏರಿಕೆಯಾಗಿತ್ತು. ಆ ಮೂಲಕ ಫಾಸ್ಟಾ್ಯಗ್ ವ್ಯವಸ್ಥೆ ಜಾರಿಗೆ ಆರಂಭವಾದ ನಂತರದ ದಿನಗಳಲ್ಲಿ ವಾಹನಗಳ ಕಾಯುವ ಸಮಯ ಹೆಚ್ಚಾದಂತಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − 6 =
Remember me
