ಬೆಂಗಳೂರು :ಕರೊನಾ ಸೋಂಕಿನಿಂದ ಗುಣಮುಖರಾಗಿರುವ 75 ವರ್ಷದ ವೃದ್ಧೆಯೊಬ್ಬರು ಲವಲವಿಕೆಯಿಂದ ಆಸ್ಪತ್ರೆಯ ಸಿಬ್ಬಂದಿಯೊಂದಿಗೆ ಒಡನಾಡುತ್ತಿರುವ ವಿಡಿಯೋ ತುಣುಕೊಂದು ಜಾಲತಾಣದಲ್ಲಿ ವೈರಲ್ ಆಗಿದೆ. ಕರೊನಾ ವಿರುದ್ಧ ಆತ್ಮಸ್ಥೈರ್ಯದಿಂದ ಹೋರಾಡುವುದಕ್ಕೆ ಹಲವರಿಗೆ ಈ ಅಜ್ಜಿ ಸ್ಪೂರ್ತಿಯಾಗಿದ್ದಾರೆ.
ಆಕ್ಸಿಜನ್ ಮಟ್ಟ ಕಡಿಮೆಯಾಗಿ ಹೆಬ್ಬಾಳ ಕೋವಿಡ್​ ಆರೈಕೆ ಸೆಂಟರ್​ ಸೇರಿದ್ದ ವೃದ್ಧೆಯು ಸೋಂಕಿನ ಆತಂಕ ಬಿಟ್ಟು, ಆತ್ಮಸ್ಥೈರ್ಯದಿಂದ ಗುಣಮುಖರಾಗಿದ್ದಾರೆ. ಮನೆಗೆ ಹೋಗಲು ಸಿದ್ಧರಾಗುತ್ತಿರುವಾಗ ಆರೋಗ್ಯ ಸಿಬ್ಬಂದಿಯೊಂದಿಗೆ ಉತ್ಸಾಹದ ಒಡನಾಟ ನಡೆಸಿದ್ದಾರೆ. ಈ ಸಂದರ್ಭದ ವಿಡಿಯೋವನ್ನು ಬೆಂಗಳೂರು ಕೋವಿಡ್ ವಾರ್​​ ರೂಮ್​ನ ನೋಡಲ್ ಅಧಿಕಾರಿ ಡಾ. ಭಾಸ್ಕರ್ ರಾಜಕುಮಾರ್​ ಟ್ವಿಟರ್​​ನಲ್ಲಿ ಶೇರ್ ಮಾಡಿದ್ದಾರೆ.
Those small moments of happiness is all that matters…
75 year old lady, admitted in hypoxic state, getting discharged in hyperactive state 😊🙏 from our Hebbal CCC@mla_sudhakar@byrathi_anna@BBMPCOMM@BBMPSWMSplComm@BbmpsplHealth#CovidWarriorspic.twitter.com/8Ct2OdHG6p
— Dr Bhaskar Rajakumar (ಡಾ. ಭಾಸ್ಕರ್ ರಾಜಕುಮಾರ್)🇮🇳 (@DrBhaskarRaj)May 22, 2021

‘ಹೈಪಾಕ್ಸಿಕ್’​ ಸ್ಥಿತಿಯಲ್ಲಿ ಅಡ್ಮಿಟ್​ ಆದರು, ‘ಹೈಪರಾಕ್ಟೀವ್’ ಸ್ಥಿತಿಯಲ್ಲಿ ಡಿಸ್ಚಾರ್ಜ್​ ಆಗುತ್ತಿದ್ದಾರೆ ಎಂದು ರಾಜ್​ಕುಮಾರ್​ ಅವರು ಟಿಪ್ಪಣಿ ಬರೆದು ಸಂತೋಷ ವ್ಯಕ್ತಪಡಿಸಿದ್ದಾರೆ. ಈ ತೆರನ ಸಣ್ಣ ಸಣ್ಣ ಸಂತೋಷದ ಕ್ಷಣಗಳೇ ಬದುಕಿನಲ್ಲಿ ಮುಖ್ಯ ಎಂದಿದ್ದಾರೆ. ವೈದ್ಯರು-ದಾದಿಯರು ರೋಗಿಗಳ ಬಗ್ಗೆ ಹೊಂದಿರುವ ಆತ್ಮೀಯತೆಯನ್ನೂ ಈ ವಿಡಿಯೋದಲ್ಲಿ ಕಾಣಬಹುದು.
ಯುವಕನ ಮೊಬೈಲ್ ಒಡೆದು ಕಪಾಳಕ್ಕೆ ಹೊಡೆದ ಜಿಲ್ಲಾಧಿಕಾರಿ ಸಸ್ಪೆಂಡ್

‘ಅಮ್ಮ ಬಿಟ್ಟು ಹೋದರು… ಅವರ ನೆನಪುಗಳನ್ನು ಉಳಿಸಿಕೊಡಿ’; ಬಾಲಕಿಯ ಈ ಮನವಿ ಕರುಳುಹಿಂಡುವಂಥದ್ದು !

ರಾಜ್ಯದಲ್ಲಿ ಕರೊನಾ ಆರ್​​ನಾಟ್​ ವ್ಯಾಲ್ಯೂ ಇಳಿಕೆ… ಹರಡುವಿಕೆ ಪ್ರಮಾಣ ಕುಸಿತ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 5 =
Remember me
