ದಾವಣಗೆರೆ:ಕರೊನಾ ಲಾಕ್​ಡೌನ್​ ಪರಿಣಾಮ ಕೋಳಿ ಕೂಗುವ ಮುನ್ನವೇ ಮಾಸ್ಕ್​ ಧರಿಸಿ, ಇಪ್ಪತ್ತು ಜನರ ಸಮ್ಮುಖದಲ್ಲೇ ಮದುವೆ ಮಾಡಿ ಮುಗಿಸಿದ ಲಕ್ಷಾಂತರ ಉದಾಹರಣೆಗೆ ಸಾಕ್ಷಿಯಾಗಿದೆ ಜಗತ್ತು. ಇನ್ನು ಕೆಲ ಮದುವೆಯಲ್ಲಿ ವರನ ತಂದೆ-ತಾಯಿಗಳು ತಾವಿರುವಲ್ಲೇ ವಾಟ್ಸ್ಆ್ಯಪ್ ವಿಡಿಯೋ ಕಾಲ್​ ಮೂಲಕ ಮದುವೆ ಕಣ್ತುಂಬಿಕೊಂಡಿದ್ದಾರೆ. ಬೆಂಗಳೂರು ಮೂಲದ ದಂಪತಿಗಳು ಗುರುಗ್ರಾಮ್​ನಲ್ಲಿರುವ ಸೊಸೆಯನ್ನು ವಿಡಿಯೋ ಕಾಲ್​ನಲ್ಲೇ ಮನೆ ತುಂಬಿಸಿಕೊಂಡದ್ದೂ ಅಚ್ಚರಿ ಎನಿಸಿತ್ತು!
ಇದನ್ನೂ ಓದಿರಿಸಿಎಂ ಕೋವಿಡ್ ನಿಧಿಗೆ ರಂಭಾಪುರಿ ಶ್ರೀಗಳಿಂದ 21 ಲಕ್ಷ ರೂ. ಚೆಕ್ ಹಸ್ತಾಂತರ
ಈಗ ಕ್ರಿಯಾಶೀಲ ಮನಸ್ಸುಗಳು ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದು, ಮದುವೆ ಸಂಭ್ರಮವನ್ನು ಫೇಸ್​ಬುಕ್​ ಲೈವ್​ ಮೂಲಕ ಉಣಬಡಿಸಲು ಹೊರಟಿವೆ. ಅದಕ್ಕಾಗಿ ಆಮಂತ್ರಣ ಪತ್ರವನ್ನೂ ಮುದ್ರಿಸಲಾಗಿದೆ! ಮನೆ ಮಂದಿಯೆಲ್ಲ ಹೋಗಿ ಮದುವೆ ಸಂಭ್ರಮ ಕಣ್ತುಂಬಿಕೊಳ್ಳಲು ಆಗುತ್ತಿಲ್ಲ ಎಂಬ ಭಾವನೆಯಲ್ಲಿದ್ದ ಬಂಧು-ಮಿತ್ರರ ಮನಸ್ಸಿಗೆ ತುಸು ನೆಮ್ಮದಿ ನೀಡುವ ಕೆಲಸ ಮಾಡಲಾಗಿದೆ.
ಇದನ್ನೂ ಓದಿರಿಎಸ್ಸೆಸ್ಸೆಲ್ಸಿ ಪರೀಕ್ಷಾ ಅಭಿಯಾನದ ಅಂತಿಮ ಸಭೆಯಲ್ಲಿ ಸಚಿವರು ಏನು ಹೇಳಿದ್ರು ಗೊತ್ತಾ?
ವಂಕದಾರಿ ಮತ್ತು ಚಿಂತಾಲ ಕುಟುಂಬದ ರಂಜಿತಾ ಹಾಗೂ ನವೀನ್​ ಮದುವೆ ದಾವಣಗೆರೆ ಕನ್ಯಕಾ ಪರಮೇಶ್ವರಿ ದೇವಸ್ಥಾನದಲ್ಲಿ ಜೂ.15ರ ಬೆಳಗ್ಗೆ 9ಕ್ಕೆ ನಡೆಯಲಿದೆ. ಕೋವಿಡ್​19ರ ಸರ್ಕಾರದ ಅಧಿನಿಯಮ ಪ್ರಕಾರ 50ಕ್ಕೂ ಹೆಚ್ಚು ಜನರಿಗೆ ಪ್ರತ್ಯಕ್ಷವಾಗಿ ಭಾಗವಹಿಸಲು ಅವಕಾಶವಿಲ್ಲ. ಹಾಗಾಗಿ ತಾವೆಲ್ಲರೂ ವಧು-ವರರನ್ನು ಸ್ವಗೃಹದಿಂದ ಆನ್​ಲೈನ್​ ಮುಖಾಂತರ ಆಶೀರ್ವದಿಸಬೇಕೆಂದು ಕೋರುತ್ತೇವೆ ಎಂಬ ಅಡಿ ಟಿಪ್ಪಣಿ ಹೊಂದಿರುವ ಲಗ್ನಪತ್ರಿಕೆಯಲ್ಲಿ ಫೇಸ್​ಬುಕ್​ ಲೈವ್​ನ ಲಿಂಕ್​ ಸಹ ನೀಡಲಾಗಿದೆ. Kishor Nanda profile ಫೇಸ್​ಬುಕ್​ ಲೈವ್​ ಮೂಲಕ ನೀವೂ ಮದುವೆ ಸಂಭ್ರಮದಲ್ಲಿ ಪಾಲ್ಗೊಂಡು ವಧು-ವರರನ್ನು ಆಶೀರ್ವದಿಸಬಹುದು.
ಇದನ್ನೂ ಓದಿರಿಟಿವಿಗೇ ಅಕ್ಷತೆ ಹಾಕಿ ಮಗ-ಸೊಸೆಗೆ ಆಶೀರ್ವದಿಸಿದ ತಂದೆ-ತಾಯಿ!
ಸಂಬಂಧಿಕರ ಮದುವೆ.. ಹೋಗೋಣ ಅಂದ್ರೆ ಕರೊನಾ ಭಯ ಕಾಡ್ತಿದೆ. ಅವರು ನನ್ನ ಕ್ಲೋಸ್​ ಫ್ರೆಂಡ್​, ನಾನು ಎರಡು ದಿನ ಮೊದಲೇ ಹೋಗಿ ಮದುವೆ ಸಂಭ್ರಮದಲ್ಲಿ ಪಾಲ್ಗೊಳ್ಳಬೇಕಿತ್ತು. ನನ್ನಾಸೆಗೆ ಕರೊನಾ ಕಲ್ಲಾಕಿತು… ಹೀಗೆ ಲಕ್ಷಾಂತರ ಜನರು ಲೆಕ್ಕವಿಲ್ಲದಷ್ಟು ಬಾರಿ ಗೊಣಗಾಡಿದ್ದಾರೆ. ಈ ಸಂಬಂಧ ರಂಜಿತಾ ಹಾಗೂ ನವೀನ್​ ಮದುವೆ ಹೊಸ ಭಾಷ್ಯ ಬರೆಯುತ್ತಿದೆ.
ಇದನ್ನೂ ಓದಿರಿಗುರುಗ್ರಾಮ್​ನಲ್ಲಿ ಮದುವೆ, ಬೆಂಗಳೂರಿಂದ ವಿಡಿಯೋ ಕಾಲ್​ನಲ್ಲೇ ಸೊಸೆಯನ್ನು ಮನೆ ತುಂಬಿಸಿಕೊಂಡ ಅತ್ತೆ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − one =
Remember me
