ಬೆಂಗಳೂರು:ಬೇಸಿಗೆ ಆರಂಭವಾಗುತ್ತಿದ್ದಂತೆ ಪ್ರಾಣಿ,ಪಕ್ಷಿಗಳು ಆಹಾರ ಮತ್ತು ನೀರು ಸಿಗದೇ ಸಾವನ್ನಪು್ಪತ್ತವೆ. ಈ ಹಿನ್ನೆಲೆಯಲ್ಲಿ ಅವುಗಳ ರಕ್ಷಣೆಗೆ ಮುಂದಾಗಿರುವ ಬಿಬಿಎಂಪಿ, ನಗರದಾದ್ಯಂತ ನೀರಿನ ಬಟ್ಟಲುಗಳ ಅಳವಡಿಕೆ ಮಾಡುತ್ತಿದೆ.
ಈಗಾಗಲೇ ಕೆ.ಜಿ. ರಸ್ತೆ, ವಿಧಾನಸೌಧ, ಅಂಬೇಡ್ಕರ್ ಬೀದಿ, ಬಸವೇಶ್ವರ ವೃತ್ತ, ಕಾಪೋರೇಷನ್ ವೃತ್ತ ಹಾಗೂ ವಿಧಾನಸೌಧ ಆವರಣದ ಎಜಿ ಕಚೇರಿ ಬಳಿ ನೀರಿನ ಕುಂಡಗಳನ್ನು ಅಳವಡಿಕೆ ಮಾಡಲಾಗಿದೆ. ಪ್ರಮುಖ ವೃತ್ತಗಳು ಹಾಗೂ ಜಂಕ್ಷನ್​ಗಳಲ್ಲಿ ಸುಂದರವಾದ ಕಲ್ಲಿನಿಂದ ನಿರ್ವಿುಸಿದ ನೀರಿನ ಕುಂಡಗಳ ಅಳವಡಿಕೆ ಮೂಲಕ ಪ್ರಾಣಿ- ಪಕ್ಷಿಗಳಿಗೆ ಆಸರೆ ಒದಗಿಸಲಾಗುತ್ತಿದೆ.
ಈ ಕುಂಡಗಳಿಗೆ ಪ್ರತಿನಿತ್ಯ ಬೆಳಗ್ಗೆ ರಸ್ತೆ ಹಾಗೂ ವೃತ್ತಗಳಲ್ಲಿ ಸ್ವಚ್ಛತಾ ಕಾರ್ಯ ಮಾಡುವ ಪೌರಕಾರ್ವಿುಕರು ನೀರು ಹಾಕುತ್ತಾರೆ. ಜತೆಗೆ ಸಾರ್ವಜನಿಕರು, ಸುತ್ತಲಿನ ಕಚೇರಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಕೂಡ ಈ ಕಾರ್ಯ ಮಾಡಬಹುದು. ಇನ್ನು ಉದ್ಯಾನಗಳ ಬಳಿಯಿರುವ ಕುಂಡಗಳಿಗೆ ಅಲ್ಲಿನ ಭದ್ರತಾ ಸಿಬ್ಬಂದಿ ಮತ್ತು ಇತರೆ ಕೆಲಸಗಾರರು ನೀರು ಹಾಕಿ ಪಕ್ಷಿಗಳಿಗೆ ನೆರವಾಗಬಹುದಾಗಿದೆ.
ಅನುಪಯುಕ್ತ ವಸ್ತುಗಳ ಸದ್ಬಳಕೆ
ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ಪಕ್ಷಿಗಳು ಹಾಗೂ ಮರದ ಮೇಲೆ ವಾಸ ಮಾಡುವ ಅಳಿಲು ಸೇರಿ ಇತರ ಪ್ರಾಣಿ-ಪಕ್ಷಿಗಳಿಗೆ ನೆರವಾಗುವ ದೃಷ್ಟಿಯಿಂದ ನೀರು ಮತ್ತು ವಿವಿಧ ಕಾಳುಗಳ ಬಟ್ಟಲುಗಳನ್ನು ಅಳವಡಿಕೆ ಮಾಡಲಾಗಿದೆ. ಮರಗಳಿಗೆ ತೆಂಗಿನಕಾಯಿ ಚಿಪು್ಪಗಳು, ನೀರಿನ ಬಾಟಲಿಗಳು, ಒಡೆದ ಮಡಕೆಗಳು, ಪ್ಲಾಸ್ಟಿಕ್ ಮಗ್ ಸೇರಿ ಅನುಪಯುಕ್ತ ವಸ್ತುಗಳನ್ನು ತೊಟ್ಟಿಗಳಾಗಿಸಿ ಮರಗಳಿಗೆ ಕಟ್ಟಿದ್ದಾರೆ.
ಸಂಘ- ಸಂಸ್ಥೆಗಳು ಸಾರ್ವಜನಿಕರ ಕಾಳಜಿ
ನಗರದಲ್ಲಿ ಅನೇಕ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ಅನೇಕ ವರ್ಷ ಗಳಿಂದ ತಮ್ಮ ಸುತ್ತಲಿನ ಪ್ರಾಣಿ-ಪಕ್ಷಿಗಳಿಗೆ ಆಹಾರ ಮತ್ತು ನೀರು ಪೂರೈಕೆ ಮಾಡುತ್ತ ಅವುಗಳನ್ನು ರಕ್ಷಣೆ ಮಾಡುತ್ತಿದ್ದಾರೆ. ಇದೊಂದು ಜಾಗೃತಿಯಾಗಿದ್ದು, ಅನೇಕರು ನೀರು ಮತ್ತು ಆಹಾರದ ಬಟ್ಟಲುಗಳನ್ನು ಉದ್ಯಾನಗಳು, ರಸ್ತೆ ಬದಿಯ ಮರಗಳಿಗೆ ಅಳವಡಿಕೆ ಮಾಡುವುದನ್ನು ರೂಢಿಸಿಕೊಂಡಿದ್ದಾರೆ. ಬೆಳಗ್ಗೆ ವಾಯುವಿಹಾರಕ್ಕೆ ಬರುವ ಸಾರ್ವಜನಿಕರು, ಮೈದಾನದಲ್ಲಿ ಕ್ರೀಡಾಭ್ಯಾಸಕ್ಕೆ ಹೋಗುವ ಕ್ರೀಡಾಪಟುಗಳು ನೀರು ಮತ್ತು ಕಾಳುಗಳನ್ನು ಹಾಕುತ್ತಾರೆ. ಮನೆಗಳ ಮೇಲೆ ತಾರಸಿ ತೋಟಗಳನ್ನು ನಿರ್ವಿುಸಿಕೊಂಡವರಿಂದಲೂ ಸಾವಿರಾರು ಹಕ್ಕಿಗಳು ಬದುಕುಳಿಯುತ್ತಿವೆ.
ಪ್ರಾಣಿ-ಪಕ್ಷಿಗಳ ಉಳಿವಿಗೆ ನೆರವಾಗಿ
ಪ್ರತಿವರ್ಷ ಬೇಸಿಗೆ ಕಾಲದಲ್ಲಿ ಪ್ರಾಣಿ- ಪಕ್ಷಿಗಳು ನೀರು, ಆಹಾರ ಸಿಗದೆ ಸಾಯುವುದನ್ನು ನೋಡಿದ್ದೇವೆ. ಇದನ್ನು ತಪ್ಪಿಸಲು ನೀರಿನ ಬಟ್ಟಲು, ತೊಟ್ಟಿಗಳನ್ನು ಅಳವಡಿಸೋಣ. ಪಾಲಿಕೆಯಿಂದ ನೀರಿನ ಕುಂಡ ಅಳವಡಿಸುತ್ತಿದ್ದು, ಸಾರ್ವಜನಿಕರು ಇದಕ್ಕೆ ನೆರವಾಗಬೇಕು ಎಂದು ಮೇಯರ್ ಗೌತಮ್ುಮಾರ್ ತಮ್ಮ ಫೇಸ್​ಬುಕ್ ಖಾತೆಯಲ್ಲಿ ಸಂದೇಶ ರವಾನಿಸಿದ್ದಾರೆ.
ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ ಡಾ. ಕೆ. ಸುಧಾಕರ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + 16 =
Remember me
