ಬೆಂಗಳೂರು:ರಾಜ್ಯದಲ್ಲಿ ಕುಡಿಯುವ ನೀರಿಗೆ ಬರ ಎದುರಾಗಿದ್ದು, ರಾಜಧಾನಿ ಬೆಂಗಳೂರಿನಲ್ಲಿ ನೀರಿನ ಹಾಹಾಕಾರ ಬಿಗಿಯಾಗಿದೆ. ನಗರ ನಿವಾಸಿಗಳಿಗೆ ಕುಡಿಯುವ ನೀರು ಪೂರೈಸಲು ಕಷ್ಟಕರವಾಗುತ್ತಿರುವುದರ ಮಧ್ಯೆ ಅನಗತ್ಯ ನೀರು ಪೋಲು ನಿಷೇಧ ಎಂದು ಸರ್ಕಾರ ಆದೇಶಿಸಿತ್ತು. ಇಷ್ಟಾದರೂ ಸಹ ಕಾರುಗಳನ್ನು ತೊಳೆಯಲು, ದೊಡ್ಡ ಕಟ್ಟಡಗಳ ಕೆಲಸಗಳಿಗೆ, ಗಿಡಗಳಿಗೆ ಕುಡಿಯುವ ನೀರು ಬಳಕೆ ಮಾಡಿದವರಿಗೆ ಈಗಾಗಲೇ ಭಾರೀ ದಂಡ ಬಿಡಬ್ಲ್ಯೂಎಸ್​ಎಸ್​ಬಿ ವಿಧಿಸಿತ್ತು. ಈಗ ಮತ್ತೊಮ್ಮೆ ಅದನ್ನು ಮುಂದುವರೆಸಿದೆ.
ಇದನ್ನೂ ಓದಿ:ವಿಜಯ್​ ದೇವರಕೊಂಡ ಚಿತ್ರಕ್ಕೆ ಸಿಗಲಿಲ್ಲ ಯಶಸ್ಸು! ಸೋಲಿನ ಹಿಂದಿರುವ ಅಸಲಿ ಕಾರಣ ಬಿಚ್ಚಿಟ್ಟ ಖ್ಯಾತ ಜ್ಯೋತಿಷಿ…
ಗಿಡಗಳಿಗೆ, ದೊಡ್ಡ ಕಟ್ಟಡಗಳ ನಿರ್ಮಾಣಕ್ಕೆ, ಕಾರು ತೊಳೆಯಲು ಅನಗತ್ಯವಾಗಿ ಕುಡಿಯುವ ನೀರನ್ನು ಬಳಕೆ ಮಾಡಿದರೆ ಅಂತವರಿಗೆ 5,000 ರೂ. ಹಣವನ್ನು ದಂಡವಾಗಿ ವಿಧಿಸುತ್ತೇವೆ ಎಂದು ಜಲಮಂಡಳಿ ಅಧಿಕಾರಿಗಳು ಖಡಕ್ ಎಚ್ಚರಿಕೆ ನೀಡಿದ್ದರು.
ಈ ನಿಯಮ ಮೀರಿ ನಗರದ ಕೆಲವು ನಿವಾಸಿಗಳು ಯುಗಾದಿ ಹಬ್ಬದಂದು ಕುಡಿಯುವ ನೀರನ್ನು ಕಾರು, ಬೈಕ್ ತೊಳೆಯಲು ವ್ಯರ್ಥ ಮಾಡಿರುವುದು ಪತ್ತೆಯಾಗಿದೆ. ಈ ಬೆನ್ನಲ್ಲೇ ಅಧಿಕಾರಿಗಳು ಪೂರ್ವ​ ಬೆಂಗಳೂರಿನ ದೊಡ್ಡೇನಕುಂಡಿ ಬಳಿಯಿರುವ ವಿಜ್ಞಾನನಗರದ ಮಧ್ಯ ವಯಸ್ಕ ವ್ಯಕ್ತಿಗೆ 5000 ರೂ. ದಂಡ ವಿಧಿಸಿದ್ದಾರೆ.
ಇದನ್ನೂ ಓದಿ:ಶಿಖರ್ ಹೆಸರಿನ ಪೆಂಡೆಂಟ್ ಧರಿಸಿರುವ ಜಾಹ್ನವಿ! ಡೇಟಿಂಗ್ ಪಕ್ಕಾ?
ಬಿಡಬ್ಲ್ಯೂಎಸ್​ಎಸ್​ಬಿ ಅಧಿಕಾರಿಗಳ ಪ್ರಕಾರ, ವಾಹನ ಮತ್ತು ಗಿಡಗಳನ್ನು ತೊಳೆಯಲು ಕುಡಿಯುವ ನೀರನ್ನು ಬಳಸಿದ್ದಕ್ಕಾಗಿ ಕಳೆದ ಒಂದು ತಿಂಗಳ ಅವಧಿಯಲ್ಲಿ ದಂಡ ಸ್ವೀಕರಿಸಿದ ವ್ಯಕ್ತಿಗಳಲ್ಲಿ ಇವರು 407ನೇಯವರು. ಇಲ್ಲಿಯವರೆಗೆ ಒಟ್ಟು 407 ಜನಕ್ಕೆ ದಂಡ ವಿಧಿಸಿದ್ದೇವೆ. ಅವರಿಂದ 20.3 ಲಕ್ಷ ರೂ. ದಂಡವಾಗಿ ಸ್ವೀಕರಿಸಿದ್ದೇವೆ. ಇದೇ ವ್ಯಕ್ತಿಗಳು ಮತ್ತೊಮ್ಮೆ ನಿಯಮ ಉಲ್ಲಂಘಿಸಿದರೆ ಮುಂದಿನ ಬಾರಿ 5,500 ರೂ. ಪಡೆಯುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ,(ಏಜೆನ್ಸೀಸ್).
ಎಕ್ಕೆ ಎಲೆ ನೋಡಿ ರೈತರು ಹೇಳ್ತಾರೆ ಭವಿಷ್ಯ! ಇದು ಯುಗಾದಿ ಹಬ್ಬದಂದು ಮಾತ್ರ ಸಾಧ್ಯ…

ಮುಖದಲ್ಲಿ ಕಪ್ಪು ಕಲೆ ಹೋಗ್ತಿಲ್ವಾ? ಚಿಂತೆ ಬಿಡಿ! ಈ 2 ತರಕಾರಿಯಲ್ಲಿದೆ ಚಮತ್ಕಾರ, ಟ್ರೈ ಮಾಡಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − six =
Remember me
