ಚಿತ್ರದುರ್ಗ:ಪೆಟ್ರೋಲ್ ಬಂಕ್ ಟ್ಯಾಂಕಿಗೆ ಮಳೆ ನೀರು ಸೇರಿದ್ದು ಬೈಕ್ ಹಾಳಾದ ಆರೋಪ ಕೇಳಿ ಬಂದಿದೆ.
ಚಿತ್ರದುರ್ಗ ನಗರದ ಹೊಳಲ್ಕೆರೆ ರಸ್ತೆಯಲ್ಲಿರುವ ಸಿದ್ಧಾರೂಢ ಪೆಟ್ರೋಲಿಯಂ ಬಂಕ್​ನಲ್ಲಿ ಈ ಘಟನೆ ನಡೆದಿದ್ದು ಬೈಕ್ ಮಾಲೀಕನೋರ್ವ, ಜನರ ಮುಂದೆಯೇ ವಾಟರ್ ಫೈಂಡಿಂಗ್ ಟೆಸ್ಟ್​ ಮಾಡಿಸಿದ್ದಾನೆ.
ಈ ಸಂದರ್ಭ ಆಫ್ರೀದ್ ಹಾಗೂ ಅಕ್ರಮ್ ಎನ್ನುವವರು, ಮಳೆ ನೀರು ಮಿಶ್ರಿತ ಪೆಟ್ರೋಲ್ ಹಾಕಿದ್ದಾರೆ ಎಂದು ಬಂಕ್ ಮಾಲೀಕರ ವಿರುದ್ಧ ಆರೋಪ ಮಾಡಿದ್ದಾರೆ. ಇವರಿಬ್ಬರೂ, ಚಿತ್ರದುರ್ಗ ಪಟ್ಟಣದ ಮಂಡಕ್ಕಿ ಭಟ್ಟಿ ಏರಿಯಾ ನಿವಾಸಿಗಳಾಗಿದ್ದು 6ನೇ ತಾರೀಕು 200 ರೂಪಾಯಿ ಪೆಟ್ರೋಲ್ ಹಾಕಿಸಿದ್ದರು.
ಇಂದು ಬೈಕ್ ಸ್ಟಾರ್ಟ್ ಆಗದೇ ಅವರಿಬ್ಬರು ಕಿರಿಕಿರಿ ಅನುಭವಿಸಿದ್ದು ಬೈಕ್ ಪೆಟ್ರೋಲ್ ಬಂಕ್​ಗೆ ತಂದು ಬಿಡಿ ಭಾಗ ಬಿಚ್ಚಿಟ್ಟ ಈ ಮೂಲಕ ಆಫ್ರೀದ್ ಆಕ್ರೋಶ ಹೊರಹಾಕಿದ್ದಾನೆ. ಇನ್ನು ಬಂಕ್​ನಲ್ಲಿನ ಟ್ಯಾಂಕ್​ನಲ್ಲಿಯೂ ನೀರಿನಂಧ ಟೆಸ್ಟ್​ ನಡೆದಿದ್ದು ಅಲ್ಲೂ ಪೆಟ್ರೋಲಲ್ಲಿ ನೀರಿನಾಂಶ ಕಂಡುಬಂದಿದೆ.
ಬಂಕ್ನಲ್ಲಿ ಪೆಟ್ರೋಲ್ ಗೆ ನೀರು ಸೇರಿದ್ದರಿಂದ ಸ್ಥಳೀಯರೂ ಆಕ್ರೋಶ ವ್ಯಕ್ತಪಡಿಸಿದ್ದು ಮಾಹಿತಿ ತಿಳಿಯುತ್ತಿದ್ದಂತೆ ಕೋಟೆ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಈ ಸಂದರ್ಭ ಬಂಕ್ ಬಂದ್ ಮಾಡುವಂತೆ ಮ್ಯಾನೇಜರ್​ಗೆ ಅವರು ಸೂಚನೆ ನೀಡಿದ್ದಾರೆ. ಸಮಸ್ಯೆ ತಿಳಿಸಿದರೂ ‘ದೂರು ಕೊಡಿ’ ಎಂದಿದ್ದ ಬಂಕ್ ಮಾಲೀಕ ವಿರುದ್ಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
