ಮಂಡ್ಯ:ಮುಂಗಾರು ಆಗಮನವಾದರೂ ಮಳೆಯಾಗದೇ ರೈತರ ಮೊಗದಲ್ಲಿ ಆತಂಕ ಮೂಡಿಸಿದ್ದ ಮಳೆರಾಯ ಇದೀಗ ನಿರಂತವಾರವಾಗಿ ಅಬ್ಬರಿಸುವ ಮೂಲಕ ಆತಂಕವನ್ನು ದೂರ ಮಾಡಿದ್ದಾನೆ. ಮಳೆಯಿಲ್ಲದೆ ಬರಿದಾಗಿದ್ದ ಕೃಷ್ಣರಾಜ ಸಾಗರ ಅಣೆಕಟ್ಟಿಗೆ ಮತ್ತೆ ಜೀವ ಕಳೆ ಬಂದಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಕೆಆರ್​ಎಸ್​ ಡ್ಯಾಂಗೆ ಹರಿದು ಬರುತ್ತಿರುವ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
ಆತಂಕದ ಮಟ್ಟಕ್ಕೆ ಕುಸಿದಿದ್ದ ಕೆಆರ್​ಎಸ್ ಡ್ಯಾಂನ​ ನೀರಿನ ಮಟ್ಟ ಇದೀಗ ಸುಧಾರಿಸಿದ್ದು 100 ಅಡಿಗೆ ತಲುಪಿದೆ. ಕೇವಲ ಎರಡೇ ದಿನದಲ್ಲಿ 8 ಅಡಿ ಭರ್ತಿಯಾಗಿದೆ. ಕೆಆರ್​ಎಸ್​ ಗರಿಷ್ಠ 124.80 ಅಡಿ ಹೊಂದಿದ್ದು, ಸದ್ಯ 100 ಅಡಿಗೆ ನೀರಿನ ಮಟ್ಟ ತಲುಪಿದೆ. ಮಳೆ ಹೀಗೆ ಮುಂದುವರಿದರೆ ಡ್ಯಾಂ ಭರ್ತಿಯಾಗಲಿದೆ.
ಇದನ್ನೂ ಓದಿ:ಅರೆಬರೆ ಡ್ರೆಸ್​ ಬಗ್ಗೆ ವ್ಯಕ್ತಿಯೊಬ್ಬ ಆಡಿದ ಮಾತು ಕೇಳಿ ಕೆರಳಿದ ಉರ್ಫಿ: ಮುಂಬೈ ಏರ್ಪೋರ್ಟ್​ನಲ್ಲಿ ಹೈಡ್ರಾಮ!
ಇನ್ನು ಡ್ಯಾಂ ಭರ್ತಿಯತ್ತ ಸಾಗುತ್ತಿರುವುದಕ್ಕೆ ಮಂಡ್ಯ ಜಿಲ್ಲೆ ರೈತರಲ್ಲಿ ಸಂತಸ ಮನೆ ಮಾಡಿದೆ. ಒಂದೂವರೆ ತಿಂಗಳಿಂದ‌ ಮಳೆಯಿಲ್ಲದೇ ಸಕ್ಕರೆ ನಾಡಿನ ಅನ್ನದಾತರು ಕಂಗಾಲಾಗಿದ್ದರು. ಇದೀಗ ಮಳೆ ಹಿನ್ನೆಲೆಯಲ್ಲಿ ರೈತರು ಮತ್ತೆ ಕೃಷಿ ಚಟುವಟಿಕೆಗಳತ್ತ ಮುಖ ಮಾಡಿದ್ದಾರೆ.
ಸದ್ಯ ಕೆಆರ್​ಎಸ್​ ಡ್ಯಾಂಗೆ 48,025 ಕ್ಯೂಸೆಕ್ ಒಳ ಹರಿವು ಇದೆ. ಮಧ್ಯಾಹ್ನದ ವೇಳೆಗೆ ಒಳ ಹರಿವಿನ ಪ್ರಮಾಣ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. 48 ಗಂಟೆಯಲ್ಲಿ 5 ಟಿಎಂಸಿ ನೀರು ಡ್ಯಾಂಗೆ ಹರಿದು ಬಂದಿದೆ. ಗರಿಷ್ಠ 49.452 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿರುವ ಕೆಆರ್​ಎಸ್​ ಡ್ಯಾಂನಲ್ಲಿ ಸದ್ಯ 22.809 ಟಿಎಂಸಿ ನೀರು ಶೇಖರಣೆಯಾಗಿದೆ. ಇದೇ ರೀತಿ ಒಳಹರಿವು ಬಂದಲ್ಲಿ, ಮುಂದಿನ 10 ದಿನದಲ್ಲಿ ಡ್ಯಾಂ ಸಂಪೂರ್ಣ ಭರ್ತಿಯಾಗುವ ಸಾಧ್ಯತೆ ಇದೆ.(ದಿಗ್ವಿಜಯ ನ್ಯೂಸ್​)
ಬೆಳ್ಳಂಬೆಳಗ್ಗೆಯೇ ತಂದೆಯ ಜತೆ ಕೃಷಿ ಹೊಂಡದಲ್ಲಿ ಈಜಲು ಹೋದ ಯುವತಿ ದುರಂತ ಸಾವು

ಮಣಿಪುರ ಕಲಹಕ್ಕೆ ಸಂಸತ್ ಕಲಾಪ ಬಲಿ: ಉಭಯ ಸದನ ಮುಂದೂಡಿಕೆ; ಆಪ್ ಸಂಸದ ಅಮಾನತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 17 =
Remember me
