ಬೆಳಗಾವಿ:ಬೆಳಗಾವಿ ಮಹಾನಗರದಲ್ಲಿ ಉದ್ಭವಿಸಿರುವ ಕುಡಿಯುವ ನೀರಿನ ಸಮಸ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಅನಿಲ್ ಬೆನಕೆ ಅಧಿಕಾರಿಗಳ ಜತೆಗೆ ಸಭೆ ನಡೆಸಿ, ಸಮಸ್ಯೆ ಪರಿಹರಿಸಬೇಕೆಂದು ಎಚ್ಚರಿಕೆ ನೀಡಿದರು.
ನೀರು ಪೂರೈಕೆಯಲ್ಲಿ ವ್ಯತ್ಯಯ ಮಾಡುತ್ತಿರುವ ಎಲ್ ಅಂಡ್​ ಟಿ ಕಂಪನಿ ಮತ್ತು ಪಾಲಿಕೆ ಸಿಬ್ಬಂದಿ ಜತೆಗೆ ಶಾಸಕ ಅನಿಲ್ ಬೆನಕೆ ಚರ್ಚಿಸಿದರು. ನಗರದಲ್ಲಿ ನಿರಂತರ ಕುಡಿಯುವ ನೀರು ಪೂರೈಕೆ ಯೋಜನೆ ಜಾರಿಗೆಯ ಟೆಂಡರ್ ಎಲ್ ಅಂಡ್ ಟಿ ಕಂಪನಿ ಪಡೆದಿದೆ. ಬೆಳಗಾವಿ ಮಹಾನಗರ ಪಾಲಿಕೆ ಕಚೇರಿಯಲ್ಲಿ ನಡೆಯುತ್ತಿರುವ ಸಭೆಯಲ್ಲಿ ಎಲ್‌ ಆ್ಯಂಡ್ ಟಿ ಕಂಪನಿ ಅಧಿಕಾರಿಗಳಿಗೆ ಶಾಸಕ ಅನಿಲ್ ಬೆನಕೆ ಕ್ಲಾಸ್ ತೆಗೆದುಕೊಂಡರು. ನಗರದಲ್ಲಿ ನಿಯಮಿತವಾಗಿ ನೀರು ಪೂರೈಸದಿದ್ದರೆ ಕ್ರಮಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ‌ನೀಡಿದರು.
ನಿಮ್ಮ‌ ತಪ್ಪು ಮುಚ್ಚಿಕೊಳ್ಳಲು ಕಾರಣ ನೀಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಾಂತ್ರಿಕ ಸಮಸ್ಯೆ ಬಗೆಹರಿಯುವವರೆಗೆ ಟ್ಯಾಂಕರ್ ಮೂಲಕವಾದರೂ ಜನರಿಗೆ ನೀರು ಪೂರೈಸಬೇಕು. ಒಂದು ವಾರದೊಳಗೆ ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಿದರು.
ಹೇಗಿದ್ದ ಲಾರಿ ಹೇಗಾಯ್ತು ನೋಡಿ; ಒಂದೇ ರಾತ್ರೀಲಿ ಎಲ್ಲಾ ಪೀಸ್ ಪೀಸ್!
Sign in to your account
Please enter an answer in digits:3 + fourteen =
Remember me
