ವಿಜಯಪುರ:ಕರೊನಾ ಸೋಂಕು ಇರುವ ಶಂಕಿತರನ್ನು ಕ್ವಾರಂಟೈನ್ ಇರಿಸುವ ಕೇಂದ್ರಗಳು ಸುಸಜ್ಜಿತವಾಗಿರಬೇಕಾದ್ದು ಅಗತ್ಯ. ಆದರೆ, ವಿಜಯಪುರ ಜಿಲ್ಲೆಯ ಕ್ವಾರಂಟೈನ್ ಕೇಂದ್ರವೊಂದರಲ್ಲಿ ಮೂಲಸೌಕರ್ಯವೇ ಸರಿಯಾಗಿ ಇಲ್ಲ. ನೀರಿನ ಪೂರೈಕೆಯ ಕಡೆಗೆ ಜಿಲ್ಲಾಡಳಿತವೂ ಗಮನಕೊಟ್ಟಿಲ್ಲ ಎಂಬ ದೂರು ಕೇಳಿಬಂದಿದೆ.
ಇದನ್ನೂ ಓದಿ:1974ರಿಂದ ತಿಮ್ಮಪ್ಪನ 126 ಆಸ್ತಿ ಮಾರಾಟ
ಬಸವನಬಾಗೇವಾಡಿ ತಾಲೂಕಿನ ಟಕ್ಕಳಕಿ ಗ್ರಾಮದ ಹೊರ ಭಾಗದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿರುವ ಕ್ವಾರಂಟೈನ್ ಕೇಂದ್ರ ಇದಾಗಿದೆ. ಇಲ್ಲಿ ನೀರಿನ ಸೌಲಭ್ಯ ಇಲ್ಲದ ಕಾರಣ ಕ್ವಾರಂಟೈನ್​ಗಾಗಿ ಬಂದವರಿಗೆ ಇದು ಶಿಕ್ಷೆ ಎಂಬಂತಾಗಿದೆ. ಸ್ವಚ್ಛತೆ, ನೈಮರ್ಲ್ಯದ ಕಡೆಗೆ ಹೆಚ್ಚಿನ ಗಮನಹರಿಸಬೇಕು. ಇಲ್ಲದಿದ್ದರೆ ಕೋವಿಡ್ 19 ವೈರಸ್ ಕಾಡುತ್ತದೆ ಎಂದು ಡಂಗೂರ ಸಾರಿರುವ ಸರ್ಕಾರವೇ ಇದೀಗ ಅದರ ಕಡೆಗೆ ಗಮನಹರಿಸದಿರುವುದು ದುರದೃಷ್ಟ ಎಂದು ಕ್ವಾರಂಟೈನ್​ನಲ್ಲಿ ಇರುವವರು ವಿಷಾದ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಎಸ್ಸೆಸ್ಸೆಲ್ಸಿ ಎಕ್ಸಾಂ ಕಸಿವಿಸಿ
ಈ ಕ್ವಾರಂಟೈನ್​ ಕೇಂದ್ರದಲ್ಲಿ ನೀರಿನ ಸಮಸ್ಯೆ ತೀವ್ರವಾಗಿರುವ ಕಾರಣ ಇಲ್ಲಿದ್ದವರು ಬಯಲು ಶೌಚದ ಮೊರೆ ಹೋಗಿದ್ದಅರೆ. ಅಲ್ಲದೆ, ನಿತ್ಯ ಸ್ನಾನ ಇತ್ಯಾದಿಯೂ ಮಾಡುತ್ತಿಲ್ಲ. ಇಲ್ಲಿ ಇರುವವರಲ್ಲಿ ಅನೇಕರು ಕಾರ್ಮಿಕರು. ಅವರು ಕ್ವಾರಂಟೈನ್​ನಲ್ಲಿ ಇರದೇ ಊರೆಲ್ಲ ತಿರುಗಾಡುತ್ತಿದ್ದಾರೆ ಎಂಬ ಆರೋಪವೂ ಇದೆ. ಕ್ವಾರಂಟೈನ್ ಕೇಂದ್ರದಲ್ಲಿ ನಿಗಾ ವ್ಯವಸ್ಥೆಯೂ ಸರಿಯಾಗಿಲ್ಲದಿರುವುದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಸರ್ಕಾರ, ಅಧಿಕಾರಿಗಳು ಇನ್ನಾದರೂ ಈ ಕೇಂದ್ರ ಗಮನಹರಿಸುವುದೇ ಎಂಬ ನಿರೀಕ್ಷೆಯಲ್ಲಿದ್ದಾರೆ ಕ್ವಾರಂಟೈನ್ ಕೇಂದ್ರದಲ್ಲಿರುವ ಕಾರ್ಮಿಕರು.
https://www.facebook.com/VVani4U/videos/595162674690312/
ಕೊನೆಗೂ ಬಯಲಾಯಿತು ವಾರಂಗಲ್ ಕೃಷಿ ಹೊಂಡದ 9 ಶವಗಳ ರಹಸ್ಯ!

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:7 + three =
Remember me
