ಬೆಂಗಳೂರು:ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಪರಿಣಾಮ ಶನಿವಾರ ರಾತ್ರಿ ಹಾಗೂ ಭಾನುವಾರ ಸುರಿದ ಧಾರಾಕಾರ ಮಳೆಯಿಂದಾಗಿ ಅಪಾರ್ಟ್​ಮೆಂಟ್​ಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.
ಯಲಹಂಕದ ನಾರ್ತ್​ಹುಡ್​ ಅಪಾರ್ಟ್​ಮೆಂಟ್​ ಸುತ್ತಮುತ್ತ ಸಾಕಷ್ಟು ಪ್ರಮಾಣದಲ್ಲಿ ನೀರು ನಿಂತಿದೆ. ಒಳಚರಂಡಿ ದುರಸ್ತಿಪಡಿಸದ ಪರಿಣಾಮ ರಾಜಕಾಲುವೆಯಲ್ಲಿ ಹರಿಯುವ ಕೊಳಚೆ ನೀರು ವಿಲ್ಲಾ,ಅಪಾರ್ಟ್​ಮೆಂಟ್​ಗೆ ನುಗ್ಗಿದೆ. ಮನೆಯಿಂದ ಹೊರಬರಲಾಗದೆ ನಿವಾಸಿಗಳು ಜಲದಿಗ್ಬಂಧನಕ್ಕೆ ಒಳಗಾಗಿದ್ದಾರೆ. ಕೊಳಚೆ ನೀರಿನ ಕೆಟ್ಟವಾಸನೆಯಿಂದ ಕಂಗಾಲಾಗಿದ್ದಾರೆ. ಅಪಾರ್ಟ್​ಮೆಂಟ್​ ಕೆಳ ಭಾಗದ ಮನೆಗಳಿಗೆ ಸಂಗ್ರಹವಾದ ನೀರುನ್ನು ಹೊರಹಾಕಲು ನಿವಾಸಿಗಳು ಪರದಾಡಿದ್ದಾರೆ. ಲಾಂತರ ರೂ.ಮೌಲ್ಯದ ಗೃಹೋಪಯೋಗಿ ವಸ್ತುಗಳು ಹಾಳಾಗಿವೆ. ವಾಹನ ನಿಲುಗಡೆ ಜಾಗದಲ್ಲೂ ಸಾಕಷ್ಟು ಪ್ರಮಾಣದ ನೀರು ನುಗ್ಗಿವೆ. ಇದರಿಂದಾಗಿ ಹತ್ತಾರು ವಾಹನಗಳು ಕೆಟ್ಟು ನಿಂತಿವೆ. ಕರೆ ಮಾಡಿದರೂ ಸ್ಥಳಕ್ಕೆ ಯಾವೊಬ್ಬ ಅಧಿಕಾರಿಗಳು ಆಗಮಿಸಿಲ್ಲ. ಪ್ರತಿ ಬಾರಿ ಮಳೆ ಸುರಿದಾಗಲೂ ಇದೇ ಸಮಸ್ಯೆ ಉಂಟಾಗುತ್ತಿದೆ. ರಾಜಕಾಲುವೆ ಸ್ವಚ್ಛಗೊಳಿಸುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ವಾರದ ಹಿಂದೆಯೂ ಒಳಚರಂಡಿ, ರಾಜಕಾಲುವೆ ಕುರಿತು ಬಿಬಿಎಂಪಿ ಗಮನಕ್ಕೆ ತಂದರೂ ಸರಿಪಡಿಸಿಲ್ಲ ಎಂದು ನಾರ್ಥ್​ವುಡ್​ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂದ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗ್ಗೆಯಿಂದ ಹಲವು ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣ ಇತ್ತು. ಕೆಲವಡೆ ತುಂತುರು ಮಳೆ ಸುರಿದರೆ ಇನ್ನೂ ಕೆಲವೆಡೆ ಬಿರುಸಾಗಿ ವರ್ಷಧಾರೆಯಾಯಿತು. ಕೆಲ ಬಡಾವಣೆಗಳಲ್ಲಿ ಸಂಜೆ ಬಳಿಕ ಭರ್ಜರಿ ವರ್ಷಧಾರೆಯಾಗಿದೆ. ವಿದ್ಯಾರಣ್ಯಪುರ, ನಂದಿನಿಲೇಔಟ್​, ಶೆಟ್ಟಿಹಳ್ಳಿ, ಚೌಂಡೇಶ್ವರಿ ನಗರ,  ಬಾಗಲಕುಂಟೆ, ಮಾರಪ್ಪನಪಾಳ್ಯ, ನಾಗಪುರ, ಪೀಣ್ಯ ಕೈಗಾರಿಕಾ ಪ್ರದೇಶ, ಕೊಡಿಗೆಹಳ್ಳಿ, ಕೊಟ್ಟಿಗೆಪಾಳ್ಯ, ಚೊಕ್ಕಸಂದ್ರ, ಜಕ್ಕೂರು, ರಾಜಾಜಿನಗರ, ಕಾಟನ್​ಪೇಟೆ, ರಾಜಮಹಲ್​ ಗುಟ್ಟಹಳ್ಳಿ, ಚಾಮರಾಜಪೇಟೆ ಸೇರಿ ನಗರದ ವಿವಿಧ ಭಾಗಗಳಲ್ಲಿ ಮಳೆ ಬಿದ್ದಿದೆ. ಯಲಹಂಕ, ದಾಸರಹಳ್ಳಿ, ಪೂರ್ವ ವಲಯ ವ್ಯಾಪ್ತಿಯ ಪ್ರದೇಶಗಳಲ್ಲಿ ಬಿರುಸಾಗಿ ಮಳೆಯಾಗಿದೆ.
ನಾಳೆಯಿಂದ ಆರು ಜಿಲ್ಲೆಗಳಿಗೆ ಆರೆಂಜ್​ ಎಚ್ಚರಿಕೆ:ಹಲವೆಡೆ ಮಳೆ ಬಿರುಸು
ಸವಾರರ ಪರದಾಟಮುಂಗಾರು ಪೂರ್ವ ವರ್ಷಧಾರೆಗೆ ರಸ್ತೆಗಳೆಲ್ಲವೊ ಹೊಳೆ ರೂಪ ತಾಳಿತ್ತು. ನೀರಿನ ರಭಸಕ್ಕೆ ಕಾರು, ಬೈಕ್​ ಸವಾರರು ತೊಂದರೆ ಎದುರಿಸುವಂತಾಯಿತು. ಹಲವು ಬಡಾವಣೆಗಳಲ್ಲಿ ರಸ್ತೆಗಳ ಮೇಲೆ ನೀರು ಹರಿದ ಪರಿಣಾಮ ವಾಹನ ಚಲಾಯಿಸಲು ಪರದಾಡುವಂತಾಯಿತು. ಪ್ರಮುಖ ರಸ್ತೆಗಳು, ಅಂಡರ್​ಪಾಸ್​ ಹಾಗೂ ಜಂಕ್ಷನ್​ಗಳು ಹೊಂಡಗಳಾಗಿ ಮಾರ್ಪಟ್ಟವು.ಪ್ರಮುಖ ರಸ್ತೆಗಳಲ್ಲಿರುವ ಮರದ ಕೊಂಬೆಗಳು ಬಿದ್ದಿದ್ದರಿಂದ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಯಿತು. ಪ್ರಮುಖ ರಸ್ತೆಗಳಲ್ಲೆಲ್ಲ ಟ್ರಾಫಿಕ್​ ಜಾಮ್​ ಉಂಟಾಯಿತು. ಮ್ಯಾನ್​ಹೋಲ್​ಗಳು ಹುಕ್ಕಿ ಹರಿದವು. ಒಳಚರಂಡಿಗಳೆಲ್ಲ ತುಂಬಿ ರಸ್ತೆಗಳ ಮೇಲೆಯೇ ಕೊಳಚೆ ನೀರು ಹರಿಯುತ್ತಿತ್ತು. ವಾರಾಂತ್ಯ ಹಿನ್ನೆಲೆಯಲ್ಲಿ ಹೊರಗಡೆ ತೆರಳಿದ್ದ ಜನರು ತೊಂದರೆಗೆ ಒಳಗಾಗಬೇಕಾಯಿತು. ಮಳೆಯಿಂದ ವಿವಿಧ ಭಾಗಗಳಲ್ಲಿ ವಿದ್ಯುತ್​ ಕಂಬಗಳಿಗೆ ಹಾನಿಯಾಗಿವೆ. ವಿದ್ಯುತ್​ ಪೂರೈಕೆಯಲ್ಲಿ ವ್ಯತ್ಯಯ ಉಂಟಾಯಿತು.
ಇಂದು ಯೆಲ್ಲೋ ಅರ್ಲಟ್​ನಗರದಲ್ಲಿ ಸುರಿಯುತ್ತಿರುವ ಮಳೆ ಮುಂದಿನ ಐದು ದಿನ ಮುಂದುವರಿಯಲಿದೆ. ಮೇ 20ರಂದು ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಯೆಲ್ಲೋ ಅರ್ಲಟ್​ ಘೋಷಿಸಿದೆ. ಮೇ 21ರಿಂದ ಮುಂದಿನ 4 ದಿನ ಬಿರುಗಾಳಿ, ಗುಡುಗು ಸಹಿತ ಸಾಧಾರಣ ವರ್ಷಧಾರೆಯಾಗಲಿದೆ.
ಎಲ್ಲೆಲ್ಲಿ ಎಷ್ಟು ಮಳೆಪ್ರದೇಶ                           ಮಿಮೀಮಂಡೂರು                        68ನಾಗೇನಹಳ್ಳಿ                      60ಮಾರೇನಹಳ್ಳಿ                     51ಹೆಬ್ಬಾಳ                           50ಮಾದನಾಯಕನಹಳ್ಳಿ              46ಪೀಣ್ಯ ಕೈಗಾರಿಕಾ ಪ್ರದೇಶ         44ಚಿಕ್ಕಬಿದಿರೆಕಲ್ಲು                    42ಬಾಗಲೂರು                       43ಮಾರುತಿ ಮಂದಿರ                34ಬಾಣಸವಾಡಿ                     22ಕಾಟನ್​ಪೇಟೆ                     20ನಾಯಂಡಹಳ್ಳಿ                   20
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + 20 =
Remember me
