ಮಂಡ್ಯ:ಹೆದ್ದಾರಿಯಲ್ಲಿ ಸೃಷ್ಟಿಯಾದ ಕಾರಂಜಿಯಿಂದಾಗಿ ರಸ್ತೆಯೂ ನದಿಯಂತಾಗಿ ಅಪಾರ ಪ್ರಮಾಣದ ಕುಡಿಯುವ ನೀರು ಪೋಲಾದ ಪ್ರಕರಣವೊಂದು ವರದಿಯಾಗಿದೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಲೋಕಪಾವನಿ ನದಿ ಸೇತುವೆ ಬಳಿ ಈ ಕಾರಂಜಿ ಉಂಟಾಗಿದೆ. ಕಾವೇರಿ ನದಿಯಿಂದ ಮಂಡ್ಯಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಪೈಪ್​ನಲ್ಲಿ ಒಡಕು ಕಾಣಿಸಿಕೊಂಡಿದ್ದರಿಂದ ಅದರೊಳಗಿಂದ ನೀರು ಕಾರಂಜಿಯಂತೆ ಚಿಮ್ಮಿ ಹರಿದಿದೆ.
ನೀರಿನ ಒತ್ತಡಕ್ಕೆ ಅದು ಕೊಳವೆಯಿಂದ ಮೇಲಕ್ಕೆ ಕಾರಂಜಿಯಂತೆಯೇ ಚಿಮ್ಮಿದ್ದು, ಸುಮಾರು 30 ನಿಮಿಷಗಳ ಕಾಲ ನೀರು ಪೋಲಾಗಿದೆ. ಉಕ್ಕಿ ಹರಿದ ನೀರೆಲ್ಲ ರಸ್ತೆಯಲ್ಲಿ ನದಿಯಂತೆ ಹರಿದುಹೋಗಿದೆ. ಪರಿಣಾಮವಾಗಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರು ಕೆಲಕಾಲ ಅಡಚಣೆ ಎದುರಿಸುವಂತಾಗಿತ್ತು. ಜಲಮಂಡಳಿ ಸಿಬ್ಬಂದಿ ಪೈಪ್ ಸರಿಪಡಿಸಿ ನೀರು ಪೋಲಾಗುವುದನ್ನು ನಿಲ್ಲಿಸಿದ್ದಾರೆ.
ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಕಾವೇರಿ ಕಾರಂಜಿ.ಚಿಮ್ಮಿ ಹರಿಯುತ್ತಲೇ ಇದ್ದ ನೀರಿನಿಂದಾಗಿ ನದಿಯಂತಾದ ರಸ್ತೆ.ವಿವರಗಳಿಗೆhttps://t.co/YaFZZbZDD9ನೋಡಿ.pic.twitter.com/ZJFijlWzdf
— Vijayavani (@VVani4U)August 20, 2021

ಟೇಬಲ್ ಮೇಲಿತ್ತು ಮೂರು ಟೀ ಕಪ್​; ದಂಪತಿಯನ್ನು ಪರಿಚಿತರೇ ಕೊಂದರಾ?

ಕಷ್ಟ ಎಂದು ಕಿಡ್ನಿ ಮಾರಲಿಕ್ಕೆ ಮುಂದಾದ ಮಹಿಳೆಗೇ ಮೋಸ ಮಾಡಿದ್ರು; ನಯವಾಗೇ 7.97 ಲಕ್ಷ ರೂ. ಪಡೆದ ಸೈಬರ್ ವಂಚಕರು

ಚಿತ್ರನಟಿಗೆ ಮನೆಯಲ್ಲೇ ತಾಳಿ ಕಟ್ಟಿ ಗಂಡನಂತೆ ನಟಿಸಿದ; ಬಳಿಕ ನಗ-ನಗದಿನೊಂದಿಗೆ ಪರಾರಿಯಾದ ರೌಡಿಯ ಅಣ್ಣ..

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:16 − 1 =
Remember me
