ಉಡುಪಿ:ಇತ್ತೀಚೆಗೆಷ್ಟೇ ಬಿಡುಗಡೆಯಾದ ಕನ್ನಡದ ಕಾಂತಾರ ಸಿನಿಮಾ ರಾಜ್ಯ ಸೇರಿದಂತೆ ಇಡೀ ಭಾರತದಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದೆ. ಮೊದಲಿಗೆ ಕನ್ನಡ ಭಾಷೆಯಲ್ಲಿ ಮಾತ್ರವೇ ತೆರೆಕಂಡ ಈ ಸಿನಿಮಾ ನಂತರ ಜನಪ್ರಿಯತೆಯ ಆಧಾರದ ಮೇಲೆ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಿಗೂ ಡಬ್​​ ಆಗಿದ್ದು, ಎಲ್ಲಾ ಕಡೆಗಳಿಂದ ಅತ್ಯುತ್ತಮ ಪ್ರತಿಕ್ರಿಯೆ ದೊರೆತಿದ್ದು, ಉತ್ತಮ ಪ್ರದರ್ಶನ ಕಾಣುತ್ತಿದೆ. ಕಾಂತಾರ ಸಿನಿಮಾವನ್ನು ಕೇವಲ ಸ್ಯಾಂಡಲ್​ವುಡ್​​ ನಟರು ಮಾತ್ರವಲ್ಲದೇ, ಎಲ್ಲಾ ಭಾಷೆಯ ಕಲಾವಿದರು ಹಾಡಿ ಹೊಗಳಿದ್ದಾರೆ. ಚಿತ್ರದ ಕಥೆ, ನಿರ್ದೇಶನ, ಮತ್ತು ನಟನೆ ಹಾಗೂ ಕಥೆಯಲ್ಲಿ ಬರುವ ದೈವಾರಾಧನೆಯನ್ನು ಮೆಚ್ಚಿಕೊಂಡಿದ್ದಾರೆ. ಆದರೆ ಸದಾ ವಿವಾದಾತ್ಮಕ ಹೇಳಿಕೆಗಳಿಗೆಂದೇ ಜನಪ್ರಿಯವಾಗಿರುವ ನಟ ಚೇತನ್​​ ಈ ಸಿನಿಮಾ ಕುರಿತು ಮಾತನಾಡಿ, ಇದೀಗ ಪೇಚಿಗೆ ಸಿಲುಕಿದ್ದಾರೆ.
ಕಾಂತಾರ ಸಿನಿಮಾದ ಕಥೆಯಲ್ಲಿ ಭೂತಕೋಲ, ದೈವಾರಾಧನೆ ಇದೆ. ಇದು ಹಿಂದೂ ಸಂಸ್ಕೃತಿಯ ಪ್ರತೀಕ ಎಂದು ನಟ ರಿಷಬ್​​ ಶೆಟ್ಟಿ ಹೇಳಿಕೊಂಡಿದ್ದರು. ಆದರೆ ರಿಷಬ್​​ ಶೆಟ್ಟಿ ಮಾತಿಗೆ ನಟ ಚೇತನ್​ ಆಕ್ಷೇಪ ವ್ಯಕ್ತಪಡಿಸಿ, ಭೂತಕೋಲ ಹಿಂದೂ ಸಂಸ್ಕೃತಿಯಲ್ಲ ಎಂದಿದ್ದರು. ನಟ ಚೇತನ್​​ನ ಈ ಹೇಳಿಕೆಗೆ ಕರಾವಳಿ ಸೇರಿದಂತೆ ಹಲವೆಡೆ ವ್ಯಾಪಕ ಟೀಕೆಗಳು ಕೇಳಿಬಂದವು.
ಇದೀಗ ಈ ವಿಚಾರದ ಕುರಿತು ಉಡುಪಿಯಲ್ಲಿ ಹಿರಿಯ ದೈವರಾಧಕ ಕುಮಾರ ಪಂಬದ ಹೇಳಿಕೆ ನೀಡಿದ್ದಾರೆ. “ಚೇತನ್​​ರವರು ಕೊಟ್ಟ ಹೇಳಿಕೆ ತಪ್ಪು. ಇಂತಹ ಹೇಳಿಕೆಗಳು ನಮ್ಮ ಮೂಲ ಸಂಸ್ಕೃತಿಗೆ ಮತ್ತು ಅಭಿಮಾನಕ್ಕೆ ಧಕ್ಕೆ ತರುವಂತದ್ದಾಗಿದೆ. ನಮ್ಮ ತುಳುನಾಡಿನ ಎಲ್ಲಾ ಆಚರಣೆಗಳು ಹಿಂದೂ ಪರಂಪರೆಯಲ್ಲಿ ಬಂದದ್ದು ಎಂದು ನಮ್ಮ ಪೂರ್ವಜರು ನಮಗೆ ಹೇಳಿ ಕೊಟ್ಟಿದ್ದಾರೆ. ಭೂತಾರಾಧನೆಯು ಹಿಂದೂ ಸಂಸ್ಕೃತಿಯನ್ನು ಹೊರತುಪಡಿಸಿ ಇಲ್ಲ. ಎಲ್ಲವೂ ಹಿಂದೂ ಸಂಸ್ಕೃತಿಯ ಒಳಗಿದೆ. ಅದರಲ್ಲಿಯೂ ಭೂತಾರಾಧನೆಯು ಒಂದು ವಿಶಿಷ್ಟ ಆಚರಣೆ. ಇಲ್ಲಿ ಯಾವುದೇ ಜಾತಿ ಮತಗಳ ಭೇದ ಎಂಬುದಿರುವುದಿಲ್ಲ ” ಎಂದಿದ್ದಾರೆ.
ಇನ್ನೂ ನಾವು ಈ ಹೇಳಿಕೆ ಕುರಿತು ವ್ಯಕ್ತಿಗತವಾಗಿ ಅವರಿಗೆ ಉತ್ತರಿಸುವುದಿಲ್ಲ. ಬದಲಾಗಿ ನಾವು ನಂಬಿಕೊಂಡು ಬಂದ ದೈವಗಳ ಸಮ್ಮುಖದಲ್ಲಿ ಇದರ ಕುರಿತಾಗಿ ಪ್ರಾರ್ಥಿಸುತ್ತೇವೆ. ಈ ಹಿಂದೆಯೂ ಈ ರೀತಿಯಾದಾಗ ನಾವು ಪ್ರಾರ್ಥಿಸಿದ್ದೆವು. ಅದಕ್ಕೆ ನಮ್ಮ ದೈವ ತಕ್ಕ ರೀತಿಯಲ್ಲಿ ಉತ್ತರ ನೀಡಿದೆ. ಆದ್ದರಿಂದ ನಾನು ಚೇತನ್​ಗೆ ಹೇಳುವುದೇನೆಂದರೆ, ನಮ್ಮ ತುಳುನಾಡಿನ ಸಂಸ್ಕತತಿಯನ್ನು ಯಾವುದೋ ಒಂದು ಪುಸ್ತಕದಲ್ಲಿ ಓದಿ, ಈ ರೀತಿ ಹೇಳುವುದು ತಪ್ಪು. ಹಾಗಾಗಿ ಚೇತನ್​​​ ಹೇಳಿಕೆಯನ್ನು ನಾನು ಖಡಾಖಂಡಿತವಾಗಿ ಖಂಡಿಸುತ್ತೇನೆ ಎಂದು ಎಂದು ಮಾಧ್ಯಮಗಳೊಂದಿಗೆ ತಿಳಿಸಿದ್ದಾರೆ.
ಸದ್ಯ ಈ ವಿಷಯದ ಕುರಿತಾಗಿ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಚೇತನ್​​ ಹೇಳಿಕೆಯ ವಿರುದ್ಧ ಹಲವು ರೀತಿಯ ಟ್ರೋಲ್​ಗಳು, ಟೀಕೆಗಳು ವ್ಯಾಪಕವಾಗಿ ಕಂಡು ಬರುತ್ತಿವೆ. ಆದರೆ ಈ ವಿಚಾರದ ಕುರಿತಾಗಿ ನಟ ರಿಷಬ್​​ ಶೆಟ್ಟಿ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 8 =
Remember me
