ಬೆಂಗಳೂರು: ಕಳೆದ ನಾಲ್ಕು ದಶಕಗಳಲ್ಲಿ ಕಾಣದ ಬರಗಾಲವನ್ನು ರಾಜ್ಯ ಎದುರಿಸುತ್ತಿದೆ. ಅಲ್ಪಮಟ್ಟಿಗೆ ಕುಡಿಯುವ ನೀರಿನ ಸಮಸ್ಯೆಯಿರುವಾಗ ತಮಿಳುನಾಡಿಗೆ ಕಾವೇರಿ ನೀರು ಬಿಡಲು ಮೂರ್ಖರಲ್ಲ. ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ ಎಂದು ಬೆಂಗಳೂರು ನಗರಾಭಿವೃದ್ಧಿ ಹೊಣೆ ಹೊಂದಿರುವ ಉಪಮುಖ್ಯಮಂತ್ರಿ‌ ಡಿ.ಕೆ.ಶಿವಕುಮಾರ್ ಚಾಟಿ ಬೀಸಿದರು.
ವಿಧಾನಸೌಧದಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾವೇರಿ ಕೊಳ್ಳದಲ್ಲಿ ಹರಿಯುವ ಪ್ರತಿ ಹನಿ ನೀರಿಗೆ ಲೆಕ್ಕವಿದೆ, ಉತ್ತರದಾಯಿತ್ವವಿದೆ. ವಾಸ್ತವಿಕ ವಿಷಯ ತಿಳಿದುಕೊಳ್ಳದೆ ರಾಜಕಾರಣಕ್ಕಾಗಿ ನೀರು ಕೇಳದ ತಮಿಳುನಾಡು ಮುಖ್ಯಮಂತ್ರಿಯನ್ನು ಎಳೆದು ತಂದಿದ್ದಾರೆ  ಎಂದು ಕಿಡಿಕಾರಿದರು.
ಮಳವಳ್ಳಿ ತಾಲೂಕಿನ ಶಿವಾ ಅಣೆಕಟ್ಟೆಯಲ್ಲಿ ನೀರು ಪಂಪ್ ಮಾಡಲು ಬೇಕಾದಷ್ಟು ಜಲ ಸಂಗ್ರಹವಿದ್ದಿಲ್ಲ. ಎರಡು ಅಡಿ ಕಡಿಮೆಯಿದ್ದ ಕಾರಣ ಭರ್ತಿ ಮಾಡುವ ಉದ್ದೇಶದಿಂದ ಕಾವೇರಿ ನೀರು ಹರಿಸಲಾಗಿದೆ. ತಮಿಳುನಾಡಿಗೆ ನೀರು ಬಿಡುವ ಪ್ರಶ್ನೆಯೇ ಇಲ್ಲವೆಂದು ಡಿ.ಕೆ.ಶಿವಕುಮಾರ್ ಬಲವಾಗಿ ತಳ್ಳಿಹಾಕಿದರು.
ಬೆಂಗಳೂರಿನಲ್ಲಿ ಕುಡಿಯುವ ನೀರಿಗಾಗಿ ದೊಡ್ಡಮಟ್ಟದ ಹಾಹಾಕಾರವಿಲ್ಲ. ಬಿಜೆಪಿಯವರು ದೊಡ್ಡದಾಗಿ‌ ಬಿಂಬಿಸುತ್ತಿದ್ದಾರಷ್ಟೇ. ಅವರು ಪ್ರತಿಭಟನೆ ಮಾಡಿಕೊಳ್ಳಲಿ, ರಾಜಕಾರಣ ಮಾಡಲಿ. ಕಾಂಗ್ರೆಸ್ ಸರ್ಕಾರ ತನ್ನ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸುತ್ತಿದೆ. ಯಾವುದೇ ಉದ್ಯಮ, ಹೋಟೆಲ್ ಸಂಘದವರು ಭೇಟಿಯಾಗಿ ನೀರು ಕೊಡಿ ಎಂದು ಕೇಳಿಲ್ಲ. ನಾವೇ ಅಪಾರ್ಟ್ ಮೆಂಟ್ ನವರನ್ನು ಕರೆದು ಮಾತನಾಡಿ ಸಮಸ್ಯೆ ಅರಿತು ಸ್ಪಂದಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಪರಿಸ್ಥಿತಿ ದುರ್ಲಾಭ, ನೀರಿನ ಮಾಫಿಯಾ ನಿಯಂತ್ರಿಸಲು ಅಗತ್ಯ ಕ್ರಮವಹಿಸಿದ್ದೇವೆ. ಬೆಂಗಳೂರಿನಲ್ಲಿ 14,500 ಕೊಳವೆ ಬಾವಿಗಳಿರುವ ಅಂದಾಜಿದೆ. ಈ ಪೈಕಿ 6,900 ಕೊಳವೆ ಬಾವಿಗಳು ಬತ್ತಿ ಹೋಗಿರುವ ಕಾರಣ ಸ್ವಲ್ಪಮಟ್ಟಿಗೆ ತೊಂದರೆಯಾಗಿದೆ. ಯುದ್ಧೋಪಾದಿಯಲ್ಲಿ ಕೊಳವೆ ಬಾವಿ ರಿಡ್ರಿಲ್, ಹೊಸ ಕೊಳವೆ ಬಾವಿ ಕೊರೆಯುವುದು, ಖಾಸಗಿ ಕೊಳವೆಬಾವಿ ಹಾಗೂ ಟ್ಯಾಂಕರ್ ಗಳ ಸ್ವಾಧೀನ, ಸಹಾಯವಾಣಿ ಸ್ಥಾಪನೆ ಮುಂತಾದ ಪರಿಹಾರ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಸಮಜಾಯಿಷಿ ನೀಡಿದರು.
ಮುಂದಿನ ಎರಡು ತಿಂಗಳು ಸವಾಲಿನಿದಾಗಿದ್ದು, ಅದಕ್ಕೂ ಪೂರ್ವ ಸಿದ್ಧತೆ ಮಾಡಿಕೊಂಡು ಕಾವೇರಿ ಕೊಳ್ಳದಲ್ಲಿ ನೀರು ಉಳಿಸಿಕೊಂಡಿದ್ದೇವೆ. ರಾಮನಗರ, ಮಾಗಡಿ ಮತ್ತಿತರೆಡೆ‌ ಕೃಷಿ ಪಂಪ್ ಗಳನ್ನು ಗುರುತಿಸಿದ್ದೇವೆ. ಕಾವೇರಿ ಐದನೇ ಹಂತ ಮೇ ನಲ್ಲಿ ಚಾಲನೆ ಪಡೆಯುತ್ತದೆ. ವಸತಿ, ವಸತಿಯೇತರ, ಉದ್ಯಮ-ವ್ಯವಹಾರ ಸೇರಿ ಯಾರಿಗೂ ನೀರಿನ ಕೊರತೆ ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ವಿವರಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × one =
Remember me
