ಬೆಳಗಾವಿ:‘ನಿಮ್ಮೊಂದಿಗೆ ನಾವು…’ ಎಂಬ ಬರಹದ ಜತೆಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ‌ ಭಾವಚಿತ್ರವುಳ್ಳ ಫ್ಲೆಕ್ಸ್​ಗಳು ಗೋಕಾಕ್ ನಗರದಲ್ಲಿನ ಬಹುತೇಕ ಆಟೋಗಳಲ್ಲಿ ರಾರಾಜಿಸುತ್ತಿವೆ.
ನಿಮ್ಮೊಂದಿಗೆ ನಾವು… ಹಮ್ ತುಮ್ಹಾರೇ ಸಾಥ್ ಹೈ… ವಿ ಆರ್​ ವಿಥ್​ ಯೂ.. ಗೋಕಾಕ್​… ರಮೇಶ ಅಣ್ಣಾ ಅಭಿಮಾನಿ’ ಎಂಬ ಬರಹದ ಫ್ಲೆಕ್ಸ್​ಗಳನ್ನು ಬಹುತೇಕ ಚಾಲಕರು ತಮ್ಮ ಆಟೋಗಳಿಗೆ ಅಂಟಿಸಿಕೊಂಡಿದ್ದಾರೆ. ಈ ಫ್ಲೆಕ್ಸ್​ನಲ್ಲಿ ರಮೇಶ್ ಜಾರಕಿಹೊಳಿಯ ಭಾವಚಿತ್ರವೂ ಇದೆ. ಆಟೋ ಚಾಲಕರು ಗೋಕಾಕ್​ನಲ್ಲಿ ವಿನೂತನ ಅಭಿಯಾನ ಶುರು ಮಾಡಿದ್ದಾರೆ.ಇದನ್ನೂ ಓದಿರಿತಾಯಿಯ ಅಕ್ರಮ ಸಂಬಂಧಕ್ಕೆ ಬೇಸತ್ತ ಬಾಲಕಿ ಆತ್ಮಹತ್ಯೆ?
ರಮೇಶ್ ಜಾರಕಿಹೊಳಿ ಯುವತಿಯೊಬ್ಬಳಿಗೆ ಕೆಪಿಟಿಸಿಎಲ್​ನಲ್ಲಿ ಉದ್ಯೋಗ ಕೊಡಿಸುವ ಆಮಿಷವೊಡ್ಡಿ ಲೈಂಗಿಕವಾಗಿ ಬಳಸಿಕೊಂಡು ಅನ್ಯಾಸವೆಸಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಅಲ್ಲದೆ, ಅಲ್ಲದೆ ರಮೇಶ್​ ಜಾರಕಿಹೊಳಿಯದ್ದು ಎನ್ನಲಾದ ಸೆಕ್ಸ್​ ಸಿಡಿ ವೈರಲ್​ ಆಗಿತ್ತು. ಈ ಪ್ರಕರಣ ರಾಜ್ಯ ರಾಜಕೀಯದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಸಿತ್ತು. ಕೊನೆಗೆ ನೈತಿಕ ಹೊಣೆಹೊತ್ತು ರಮೇಶ್​ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ದೂರುದಾರ ದಿನೇಶ್​ ಕಲ್ಲಹಳ್ಳಿ ಕೇಸ್​ ಹಿಂಪಡೆಯುವುದಾಗಿ ಹೇಳುವ ಮೂಲಕ ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟರು.
ಆರಂಭದಿಂದಲೂ ಇದೊಂದು ರಾಜಕೀಯ ಷಡ್ಯಂತರ, ನಾನು ನಿರಪರಾಧಿ. ಆ ಯುವತಿ ಯಾರೆಂದು ನನಗೆ ಗೊತ್ತೇ ಇಲ್ಲ ಎಂದಿದ್ದ ರಮೇಶ್​ ಜಾರಕಿಹೊಳಿ, ನಿನ್ನೆ ಸುದ್ದಿಗೋಷ್ಠಿ ನಡೆಸಿ ಆ ಸಿಡಿ ನೂರಕ್ಕೆ ನೂರರಷ್ಟು ನಕಲಿ. ನಾನು ನಿರಪರಾಧಿ. ಈ ವಿಷಯ ನನಗೆ ನಾಲ್ಕು ತಿಂಗಳು ಮೊದಲೇ ತಿಳಿದಿತ್ತು. 26 ಗಂಟೆ ಮೊದಲೇ ಹೈಕಮಾಂಡ್ ಇದರ ಬಿಡುಗಡೆ ಬಗ್ಗೆ ಮಾಹಿತಿ ನೀಡಿದ್ದರು. ಆದರೆ ಆ ಕ್ಷಣದಲ್ಲಿ ನಾನು ಧೈರ್ಯ ಕಳೆದುಕೊಳ್ಳಲಿಲ್ಲ. ಕಾನೂನು ಹೋರಾಟಕ್ಕೆ ಹೋಗಲಿಲ್ಲ. 2+3+4 ಸೇರಿ ಈ ಕೆಲಸ ಮಾಡಿದ್ದಾರೆ. ಓರಿಯನ್ ಮಾಲ್ ಅಕ್ಕಪಕ್ಕ ಕೆಲಸ ಆಗಿದೆ. ನನ್ನ ವಿರುದ್ಧ ಷಡ್ಯಂತ್ರ ಮಾಡಿದವರನ್ನ ಕೈಬಿಡಲ್ಲ. ಅವರನ್ನು ಜೈಲಿಗೆ ಹಾಕಿಸುವುದು ನನ್ನ ಗುರಿ ಎಂದು ಎಚ್ಚರಿಸಿದ್ದರು.
ಇನ್ನು ಈ ಪ್ರಕರಣ ಬೆಳಕಿಗೆ ಬಂದಾಗಿನಿಂದಲೂ ರಮೇಶ್​ರ ಅಭಿಮಾನಿಗಳು ಇದೊಂದು ಷಡ್ಯಂತ್ರ ಎಂದು ಬೀದಿಗಿಳಿದು ಹೋರಾಟ ಮಾಡಿದ್ದರು. ಇದೀಗ ನಿಮ್ಮೊಂದಿಗೆ ನಾವಿದ್ದೇವೆ ಎಂದು ರಮೇಶ್​ರ ಅಭಿಮಾನಿಗಳು ಅಭಿಯಾನ ಆರಂಭಿಸಿದ್ದಾರೆ.
ಸಿಐಡಿಗೆ ಸಿಡಿ ಕೇಸ್​! ಷಡ್ಯಂತ್ರ ಮಾಡಿದ್ದವರನ್ನ ಜೈಲಿಗೆ ಕಳಿಸೋದೇ ನನ್ನ ಗುರಿ: ಜಾರಕಿಹೊಳಿ

ಸೊಸೆಯನ್ನ ಕೊಂದು ಮಾವ ಆತ್ಮಹತ್ಯೆ! ಊಟಕ್ಕೆ ಬಂದ ಮಗನಿಗೆ ಕಾದಿತ್ತು ಆಘಾತ…

ಅಕ್ಕನ ಕಣ್ಣೆದುರಲ್ಲೇ ಭಾವನ ಕಿವಿ ಕಚ್ಚಿ ತುಂಡರಿಸಿದ ಬಾಮೈದುನ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 − 4 =
Remember me
