ಮೊಳಕಾಲ್ಮೂರು:ನಿಮ್ಮ ಊಟ ಬೇಡ, ವಸತಿ ಬೇಡ, ನಮ್ಮೂರಿಗೆ ನಮ್ಮನ್ನು ಕಳುಹಿಸಿಬಿಡಿ ಎಂದು ಚಿಕ್ಕ ಮಕ್ಕಳಿಗೆ ಹಾಲನ್ನೂ ಕುಡಿಸದೆ ಉಪವಾಸದ ಹಠಕ್ಕೆ ಬಿದ್ದಿರುವ ಯಾದಗಿರಿಯ 126 ಕೂಲಿಕಾರರು, ಜಿಲ್ಲಾಡಳಿತವನ್ನು ಭಾವನಾತ್ಮಕವಾಗಿ ಕಟ್ಟಿಹಾಕಲು ಮುಂದಾಗಿದ್ದಾರೆ.
ಇವರಲ್ಲಿ 1-3 ವರ್ಷದೊಳಗಿನ 22 ಮಕ್ಕಳು, ಒಬ್ಬರು ಗರ್ಭಿಣಿ ಇದ್ದಾರೆ. ಲಾಕ್​ಡೌನ್ ಹಿನ್ನೆಲೆಯಲ್ಲಿ ಇವರೆಲ್ಲ ಮಂಗಳವಾರ ಬೆಂಗಳೂರು ಬಿಟ್ಟು ಮಿನಿ ಬಸ್, ಟೆಂಪೋ, ಎರಡು ಕಾರುಗಳಲ್ಲಿ ಯಾದಗಿರಿಗೆ ಪ್ರಯಾಣ ಬೆಳೆಸಿದ್ದರು. ಮಾರ್ಗಮಧ್ಯೆ ಮೊಳಕಾಲ್ಮೂರು ಸಮೀಪ ತಮ್ಮೇನಹಳ್ಳಿ ಚೆಕ್​ಪೋಸ್ಟ್ ನಲ್ಲಿ ಅಧಿಕಾರಿಗಳು ಇವರನ್ನು ತಡೆದು ವೈದ್ಯಕೀಯ ಪರೀಕ್ಷೆಗೆ ವಶಕ್ಕೆ ಪಡೆದು ರಾಂಪುರದ ಆಶ್ರಮ ಶಾಲೆಯಲ್ಲಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿದರು.
ಪರೀಕ್ಷೆ ಬಳಿಕ ಕಳುಹಿಸುತ್ತೇವೆ ಎಂದು ಊಟ ಕೊಟ್ಟರೆ ಬೇಡ ಎಂದರು. ಚಿಕ್ಕಮಕ್ಕಳಿಗೆ ಹಾಲು ಕೊಟ್ಟರೆ ಕುಡಿಸದೆ ಉಪವಾಸದ ಹಠಕ್ಕೆ ಬಿದ್ದರು. ಅಧಿಕಾರಿ ವರ್ಗ ಎಷ್ಟೇ ಮನವಿ ಮಾಡಿದರೂ ಜಪ್ಪಯ್ಯ ಎನ್ನಲಿಲ್ಲ. ನಮ್ಮ ಜೀವ ಇಲ್ಲೇ ಹೊದ್ರೂ ಪರವಾಗಿಲ್ಲ. ನಮ್ಮಷ್ಟಕ್ಕೆ ನಮ್ಮನ್ನು ಬಿಟ್ಟುಬಿಡಿ. ಹೇಗೋ ಊರು ಸೇರ್ತೀವಿ ಎಂದರು. ಕೊನೆಗೆ ಜಿಲ್ಲಾಧಿಕಾರಿ ಆರ್.ವಿನೋತ್​ಪ್ರಿಯಾ ಕೂಲಿಕಾರರ ಜತೆ ದೂರವಾಣಿಯಲ್ಲಿ ಮಾತನಾಡಿ, ಗಾಬರಿ ಪಡಬೇಡಿ. ನಿಮ್ಮೂರಿಗೆ ಕಳುಹಿಸುತ್ತೇವೆ ಮೊದಲು ಊಟ ಮಾಡಿ, ಅದಕ್ಕೂ ಮುಂಚೆ ಮಕ್ಕಳಿಗೆ ಹಾಲು ಕುಡಿಸಿ ಎಂದು ಮನವೊಲಿಸುವಲ್ಲಿ ಸಫಲರಾದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 1 =
Remember me
