ಮಂಡ್ಯ:ಇತ್ತೀಚೆಗೆ ಸುಮಲತಾ, ರಮ್ಯಾ ಪಕ್ಷಕ್ಕೆ ಬರುವ ಕುರಿತು ಚರ್ಚೆಗಳು ಸಾಕಷ್ಟು ನಡೆಯುತ್ತಿವೆ.ಈ ಕುರಿತು ಬಿಜೆಪಿಗೆ ಸುಮಲತಾ ಬರಲಿ, ರಮ್ಯಾ ಬರಲಿ ಕರೆದುಕೊಳ್ಳೋದಕ್ಕೆ ರೆಡಿ ಇದ್ದೀವಿ ಎಂದು ಸಚಿವ ಕೆ.ಸಿ.ನಾರಾಯಣಗೌಡ ಹೇಳಿದ್ದಾರೆ.
ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಮಾತನಾಡಿದ ಅವರು, ಪಕ್ಷ ಸ್ಟ್ರಾಂಗ್ ಆದಾಗ ಎಲ್ಲರೂ ಬರೋದಕ್ಕೆ ಪ್ರಯತ್ನ ಮಾಡುತ್ತಾರೆ.ನಮ್ಮ ಪಕ್ಷದ ನಾಯಕರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ಅದಕ್ಕೆ ಬದ್ಧ ಇದ್ದೀವಿ ಎಂದು ಹೇಳಿದರು.
ರಮ್ಯಾ ಬಿಜೆಪಿ ಸಂಪರ್ಕದಲ್ಲಿ ಇದ್ದಾರೊ, ಇಲ್ವೊ ಎಂದು ಬಿಡಿಸಿ ಹೇಳಲು ಸಾಧ್ಯವಿಲ್ಲ.ಪಕ್ಷದಲ್ಲಿ ಏನೇನೋ ನಡೆಯತ್ತೆ ಅದನ್ನ ಹೇಳೋಕೆ ಆಗಲ್ಲ.ನಮ್ಮ ಪಕ್ಷ ಮಂಡ್ಯದಲ್ಲಿ ಹಾಗೂ ರಾಜ್ಯದಲ್ಲಿ ಭದ್ರವಾಗಿದೆ.ಪಕ್ಷ ಸ್ಟ್ರಾಂಗ್ ಇದ್ದಾಗ ಪಕ್ಷಕ್ಕೆ ಬೇರೆಯವರು ಬರುವುದು ಸಹಜ ಎಂದರು.
ನಮ್ಮ ಪಕ್ಷ ಮುಂಬರುವ ಚುನಾವಣೆಯಲ್ಲಿ 140 ರಿಂದ 150 ಸ್ಥಾನ ಗೆಲ್ಲಲಿದೆ.ಅವರು ಪಕ್ಷ ಸೇರ್ಪಡೆ ವಿಚಾರವಾಗಿ ನಮ್ಮನ್ನ ಇಕ್ಕಟ್ಟಿಗೆ ಸಿಲುಕಿಸಬೇಡಿ.ನಮ್ಮ ಪಕ್ಷದ ಮುಖಂಡರು ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.(ದಿಗ್ವಿಜಯ ನ್ಯೂಸ್​)
ಕರೀನಾ ಕಪೂರ್​ ಕುರಿತು ಈ ಹೇಳಿಕೆ ಕೊಟ್ಟು ಟ್ರೋಲ್​​ಗೊಳಗಾದ ಪಾಕ್​ ನಟಿ!

ಸಲ್ಲು ಮನೆಯಲ್ಲಿ ಮತ್ತೊಂದು ವಿಚ್ಚೇದನ: ಕೋರ್ಟ್​ಗೆ ಅರ್ಜಿ ಸಲ್ಲಿಸಿದ ಸೊಹೈಲ್​ ದಂಪತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + twelve =
Remember me
