ಹುಬ್ಬಳ್ಳಿ:ಇಂದು ಸುದ್ದಿಗೋಷ್ಠಿ ನಡೆಸಿದ ವಿ.ಆರ್.ಎಲ್. ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಡಾ. ವಿಜಯ ಸಂಕೇಶ್ವರ ಅವರು ಕರೊನಾ ವೈರಸ್​ನಿಂದ ಪಾರಾಗಲು ಏನೆಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬುದನ್ನು ವಿವರಿಸಿದರು. ಈ ಸಂದರ್ಭದಲ್ಲಿ ನಾವು ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದಕ್ಕೆ ಸಲಹೆ ನೀಡಿದರು.
ಈಗ ಮಾಸ್ಕ್​ಗಳನ್ನು ಧರಿಸಲೇಬೇಕಾದ ಅನಿವಾರ್ಯತೆ ಇದೆ. ನಾನು ಬಳಸುವ ಮಾಸ್ಕ್​​ 10 ರೂಪಾಯಿಯದ್ದು. ದಿನಕ್ಕೆ ಎರಡು ಮಾಸ್ಕ್​ಗಳನ್ನು ಬಳಸುತ್ತೇನೆ. ಆದರೆ ಇಂಥ ಮಾಸ್ಕ್​ಗಳನ್ನು ಬಳಸುವುದರಿಂದ ವೈರಸ್​ ಭೀತಿ ಕಟ್ಟಿಟ್ಟಬುತ್ತಿ. ಉಸಿರಾಡಲು ಸಹಾಯ ಆಗುತ್ತದೆ ಆದರೆ ವೈರಸ್​ನಿಂದ ಬಚಾವಾಗಲು ಸಾಧ್ಯವಿಲ್ಲ. ಕರೊನಾ ವೈರಸ್​ನಿಂದ ಪಾರಾಗಲು ಎನ್​95 ಮಾಸ್ಕ್​ ಸಹಕಾರಿ. ಆದರೆ ಎನ್​95 ಮಾಸ್ಕ್​ ಧರಿಸಿದರೆ ಆಮ್ಲಜನಕದ ಕೊರತೆ ಉಂಟಾಗುತ್ತದೆ. ಎನ್​95 ಮಾಸ್ಕ್​ ಧರಿಸಿ ವರ್ಕೌಟ್​ನಂತಹ ವ್ಯಾಯಾಮ ಮಾಡಬಾರದು. ಇದೇ ಕಾರಣದಿಂದ ಸಾವನ್ನಪ್ಪಿದ್ದವರೂ ಇದ್ದಾರೆ. ಹಾಗಾಗಿ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.
ನಾವು ಪ್ರಾಣಾಯಾಮ ರೂಢಿಸಿಕೊಳ್ಳಬೇಕು. ಸರ್ಜರಿಗಳನ್ನು ಮಾಡುವ ಅನೇಕ ವೈದ್ಯರು ಇದೇ ಮಾಸ್ಕ್​ ಧರಿಸುತ್ತಾರೆ. ನಾನೂ ಹಲವರ ಬಳಿ ಕೇಳಿದ್ದೇನೆ. ಅವರು ತಮ್ಮ ಉಸಿರಾಟ ನಿಯಂತ್ರಣದ ಸಲುವಾಗಿ ಪ್ರತಿದಿನ ಪ್ರಾಣಾಯಾಮ ಮತ್ತಿತರ ವ್ಯಾಯಾಮಗಳನ್ನು ರೂಢಿಸಿಕೊಂಡಿರುತ್ತಾರೆ ಎಂದು ವಿಜಯ ಸಂಕೇಶ್ವರ ಅವರು ತಿಳಿಸಿದರು.
ಲಾಕ್​ಡೌನ್​ನಿಂದ ವಾತಾವರಣದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಪರಿಸರ ಶುದ್ಧವಾಗಿದೆ. ಆಮ್ಲಜನಕದ ಪ್ರಮಾಣ ಹೆಚ್ಚಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಅಗ್ನಿಹೋತ್ರಿ ಮಾಡುವುದರಿಂದ ರೋಗರುಜಿನಗಳನ್ನು ತಡೆಯಬಹುದು. ಅದಕ್ಕೆಲ್ಲ ಅದರದ್ದೇ ಆದ ಪ್ರಕ್ರಿಯೆಗಳು ಇವೆ. ಹಾಗೇ ಮನೆಯ ಅಲ್ಲಲ್ಲಿ ಕತ್ತರಿಸಿದ ಈರುಳ್ಳಿಗಳನ್ನು ಇಡಬೇಕು. ಈರುಳ್ಳಿ ಕೆಟ್ಟ ಬ್ಯಾಕ್ಟೀರಿಯಾಗಳನ್ನು ತನ್ನೆಡೆಗೆ ಸೆಳೆದು ಕೊಲ್ಲುತ್ತದೆ. ನಮ್ಮ ಮನೆಯಲ್ಲೂ ಈ ಕ್ರಮವನ್ನು ಅನುಸರಿಸುತ್ತೇವೆ ಎಂದರು.ಸರ್ಕಾರಿ ಕಚೇರಿ, ವಿಧಾನಸೌಧ ಹಾಗೂ ಪಾರ್ಲಿಮೆಂಟ್​ಗಳಲ್ಲಿ ಕಾರ್ಪೆಟ್ ಹಾಕಿರುತ್ತಾರೆ. ಇದರಲ್ಲಿ ಫಂಗಸ್​ ಇರುವುದರಿಂದ ಅದನ್ನು ತೆಗೆಯುವುದು ಉತ್ತಮ. ಕಾರ್ಪೆಟ್​ಗಳನ್ನು ತೆಗೆಸುವಂತೆ ಸರ್ಕಾರಕ್ಕೆ ಕೂಡಲೇ ಪತ್ರ ಬರೆಯುತ್ತೇನೆ ಎಂದು ತಿಳಿಸಿದರು.
ಸಧ್ಯದ ಪರಿಸ್ಥಿತಿಯಲ್ಲಿ ನಮ್ಮ ಜೀವನ ಶೈಲಿ ಬದಲಾಗಬೇಕು. ಇನ್ನು ಮುಂದೆ ಯಾವುದೇ ಕಾರಣಕ್ಕೂ ವಿದೇಶೀ ವಸ್ತುಗಳನ್ನು ಬಳಸಬಾರದು. ವಿಟಮಿನ್ ಸಿ ಅಂಶವನ್ನು ಹೆಚ್ಚಿಸಿಕೊಳ್ಳಲು, ಕಿತ್ತಳೆ, ನೆಲ್ಲಿಕಾಯಿಗಳ ಬಳಸಬೇಕು. ಕಣ್ಣು, ಮೂಗು, ಬಾಯಿಗಳನ್ನು ಸ್ವಚ್ಛವಾಗಿಟ್ಟುಕೊಂಡರೆ ಅನೇಕ ರೋಗಗಳಿಂದ ಮುಕ್ತಿ ಪಡೆಯಬಹುದು ಎಂದು ತಿಳಿಸಿದರು.
ತುಪ್ಪ ಮತ್ತು ಕೊಬ್ಬರಿ ಎಣ್ಣೆಯ ಬಳಕೆ ಹೆಚ್ಚಾಗಬೇಕು. ಬಿಸಿ ನೀರಿನಲ್ಲಿ ಅರಿಶಿಣ, ಉಪ್ಪು ಬೆರೆಸಿ ಬಾಯಿ ಮುಕ್ಕಳಿಸಬೇಕು. ಸ್ಯಾನಿಟೈಸರ್​ಗಳಿಂದ ಆರೋಗ್ಯಕ್ಕೆ ತುಂಬ ತೊಂದರೆಯಿದೆ. ಅದನ್ನೂ ಗಮನದಲ್ಲಿ ಇಟ್ಟುಕೊಳ್ಳಬೇಕು ಎಂದು ಹೇಳಿದರು.
ರಾಜ್ಯಸಭಾ ಚುನಾವಣೆ: ಪಕ್ಷದಿಂದ ಯಾವ ಆದೇಶ ಬರುತ್ತದೋ ಅದನ್ನು ಪಾಲಿಸುತ್ತೇನೆ- ಡಾ. ವಿಜಯ ಸಂಕೇಶ್ವರ

ಕರೊನಾ ವೈರಸ್​ ಬಿಕ್ಕಟ್ಟನ್ನು ಪ್ರಧಾನಿ ಮೋದಿ ಉತ್ತಮವಾಗಿ ನಿಭಾಯಿಸಿದ್ದಾರೆ: ಡಾ. ವಿಜಯ ಸಂಕೇಶ್ವರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + eight =
Remember me
