ಶಿವಮೊಗ್ಗ:ಟಿಪ್ಪು ಸುಲ್ತಾನ್ ಪ್ರತಿಮೆ ನಿರ್ಮಾಣದ ವಿರುದ್ಧ ಕಾನೂನಾತ್ಮಕ ಮತ್ತು ಸಾಮಾಜಿಕವಾಗಿ ಹೋರಾಟ ಮಾಡುತ್ತೇವೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಿನಲ್ಲಿ ಟಿಪ್ಪು ಪ್ರತಿಮೆ ನಿರ್ಮಾಣ ಮಾಡ್ತೇವೆ ಎಂಬ ಶಾಸಕ ತನ್ವೀರ್ ಸೇಠ್ ಹೇಳಿಕೆ ಖಂಡನೀಯ. ಒಂದು ವೇಳೆ ಪ್ರತಿಮೆ ನಿರ್ಮಾಣಕ್ಕೆ ಮುಂದಾದರೆ ಮೈಸೂರು ಚಲೋಗೆ ಕರೆ ಕೊಡುತ್ತೇವೆ. ಬಾಬರ್ ಮಸೀದಿ ಧ್ವಂಸ ಮಾಡಿದಂತೆ ಟಿಪ್ಪು ಸುಲ್ತಾನ್ ಪ್ರತಿಮೆಯನ್ನು ಧ್ವಂಸಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಟಿಪ್ಪು ಸುಲ್ತಾನ್ ಮತಾಂಧ, ಒಬ್ಬ ನಾಡ ದ್ರೋಹಿ ಮತ್ತು ಕನ್ನಡ ವಿರೋಧಿಯಾಗಿದ್ದು ಸಾವಿರಾರು ದೇವಸ್ಥಾನ ಭಗ್ನಗೊಳಿಸಿ ಮಸೀದಿ ಕಟ್ಟಿಸಿದ ಧೂರ್ತ. ಲಕ್ಷಾಂತರ ಹಿಂದುಗಳನ್ನು ಕ್ರೌರ್ಯ, ಮೋಸದಿಂದ ಮತಾಂತರ ಮಾಡಿದ ವ್ಯಕ್ತಿ. ಅಂತಹವನ ಮೂರ್ತಿ ಪ್ರತಿಷ್ಠಾಪನೆ ಮಾಡಲು ಎಲ್ಲಿಯೂ ಮಾಡಲು ಅವಕಾಶ ಕೊಡಲ್ಲ ಎಂದು ಎಚ್ಚರಿಕೆ ನೀಡಿದರು.
ಹಠಕ್ಕೆ ಬಿದ್ದು ಸ್ವಂತ ಜಾಗದಲ್ಲಿ ಪ್ರತಿಮೆ ನಿರ್ಮಾಣ ಮಾಡುತ್ತೇವೆ ಎಂದರೂ ಬಿಡುವುದಿಲ್ಲ. ಮುಸ್ಲಿಮರದ್ದು ಸ್ವಂತ ಜಾಗ ಯಾವುದೂ ಇಲ್ಲ. ಎಲ್ಲ ಈ ದೇಶಕ್ಕೆ ಸೇರಿದ್ದು. ಎಲ್ಲ ಜಾಗ ಹಿಂದುಗಳದ್ದು, ಭಾರತ ದೇಶದ್ದು. ಈಗ ಟಿಪ್ಪು ಸುಲ್ತಾನ್‌ಗೆ ಕೊಟ್ಟರೆ ಮುಂದೆ ಔರಂಗಜೇಬ್, ಬಾಬರ್ ಪ್ರತಿಮೆ ಕಟ್ಟುತ್ತಾರೆ ಎಂದು ಕಿಡಿಕಾರಿದರು.
ಇಸ್ಲಾಂನಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ಇಲ್ಲ. ಮುಸ್ಲಿಂ ಸಮುದಾಯದವರೇ ಅದನ್ನು ಒಪ್ಪುವುದಿಲ್ಲ. ಮೂರ್ತಿ ಪೂಜೆಗೆ ಅವಕಾಶವಿಲ್ಲ ಎಂದಾದರೆ ಮುಸ್ಲಿಂ ಮುಖಂಡರು ತನ್ವೀರ್ ಸೇಠ್ ವಿರುದ್ದ ಫತ್ವಾ ಹೊರಡಿಸಬೇಕು. ಅವರ ವಿರುದ್ಧ ಬಹಿಷ್ಕಾರ ಹಾಕಬೇಕು ಎಂದು ಆಗ್ರಹಿಸಿದರು.
ಮುಸ್ಲಿಮರೇ ಈ ಬಾರಿ ಅವರಿಗೆ ತನ್ವೀರ್ ಸೇಠ್‌ಗೆ ಓಟ್ ಹಾಕುವುದಿಲ್ಲ. ಅವರ ಕ್ಷೇತ್ರದಲ್ಲಿ ಎಸ್‌ಡಿಪಿಐ ಬೆಳೆದು ನಿಂತಿದೆ. ಕಳೆದ ಬಾರಿಯೇ ಸಾಕಷ್ಟು ಮತ ಪಡೆದಿದೆ. ಈ ಬಾರಿ ಅವರನ್ನು ಸೋಲಿಸುತ್ತಾರೆ. ಈ ಕಾರಣಕ್ಕೆ ಕಟ್ಟರ್ ಮುಸ್ಲಿಂವಾದಿ, ಕಟ್ಟರ್ ಟಿಪ್ಪುವಾದಿ ಎಂದು ತೋರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − five =
Remember me
