ಬೆಂಗಳೂರು:ಶತಶತಮಾನಗಳಿಂದ ಶೇ.90 ಜನ ಶಿಕ್ಷಣದಿಂದ ವಂಚಿತರಾಗಿದ್ದರು. ಅವರಿಗೆ ಡಾ.ಬಿ.ಆರ್.ಅಂಬೇಡ್ಕರ್, ಬುದ್ಧ, ಬಸವ ಪ್ರೇರಣೆ. ಹೀಗಾಗಿ ಈ ದೇಶದ ಸಾಮಾಜಿಕ ವ್ಯವಸ್ಥೆಗೆ ಅನುಗುಣವಾಗಿ ಸಂವಿಧಾನ ಇದೆ. ಸಂವಿಧಾನಕ್ಕೆ ವಿರುದ್ಧವಾಗಿ ಕಾನೂನು ಮಾಡಲು ಸಾಧ್ಯವಿಲ್ಲ.‌ ಒಂದು ವೇಳೆ ಸಂವಿಧಾನ ಇಲ್ಲದೇ ಹೋಗಿದ್ದರೆ ನಾವ್ಯಾರು ಶಾಸಕರಾಗುತ್ತಿರಲಿಲ್ಲ. ನಾನು, ಸಿ.ಟಿ ರವಿ, ಕೆ.ಎಸ್.ಈಶ್ವರಪ್ಪ ಕುರಿ, ಎಮ್ಮೆ, ದನ ಮೇಯಿಸಿಕೊಂಡು ಇರಬೇಕಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನೂತನ ಶಾಸಕರಿಗೆ ಹಮ್ಮಿಕೊಂಡಿರುವ ತರಬೇತಿ ಶಿಬಿರದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡುತ್ತಾ, ಪ್ರತಿಯೊಬ್ಬರೂ ಸದನ ನಡೆಯುವಾಗ ನಿಯಮಾವಳಿ ತಪ್ಪದೇ ಓದಬೇಕು. ಅಸೆಂಬ್ಲಿಯನ್ನು ದೇಗುಲ ಎನ್ನುತ್ತೇವೆ. ಜನರ ಜತೆ ಚೆನ್ನಾಗಿದ್ದು, ಅವರ ಸಮಸ್ಯೆಯನ್ನು ಸದನದಲ್ಲಿ ಚರ್ಚಿಸಬೇಕು. ನಾನು ಕಾಂಗ್ರೆಸ್ ಮುಖ್ಯಮಂತ್ರಿಯಲ್ಲ, ರಾಜ್ಯಕ್ಕೆ ಮುಖ್ಯಮಂತ್ರಿ. ಮತ ಹಾಕದವರಿಗೂ ಮುಖ್ಯಮಂತ್ರಿ. ಈ ಭಾವನೆ ನಮ್ಮಲ್ಲಿರಬೇಕು. ಸಂವಿಧಾನವನ್ನು ಎಲ್ಲರೂ ತಿಳಿದುಕೊಳ್ಳಿ, ಇಲ್ಲದೇ ಹೋದರೆ ಒಳ್ಳೆಯ ಸಂಸದೀಯ ಪಟುವಾಗಲು ಸಾಧ್ಯವಿಲ್ಲ ಎಂದರು.
ಇದನ್ನೂ ಓದಿ:ಪದವಿ ವ್ಯಾಸಂಗ ಮುಗಿಯುತ್ತಿದ್ದಂತೆ ಒಂದು ವರ್ಷ ರಾಜಕೀಯ ತರಬೇತಿ ನೀಡಲು ಚಿಂತನೆ
ರಾಜಕಾರಣ ಇರುವುದು ಜನ ಸೇವೆಗಾಗಿಯೇ ಹೊರತು, ಧಿಮಾಕು ತೋರಿಸಲು ಅಲ್ಲ‌. ರಾಜಕಾರಣಿ ಜನ ಸೇವಕ. ಇದು ಮನಸ್ಸಿನಲ್ಲಿ ಇಲ್ಲದಿದ್ದರೆ ಮಾತ್ರ ಸಾರ್ವಜನಿಕ ಕ್ಷೇತ್ರದಲ್ಲಿ ಉಳಿಯಲು ಸಾಧ್ಯ. ಒಂದು ಬಾರಿಯಾದರೂ ವಿಧಾನಸೌಧದ ಮೆಟ್ಟಿಲು ಹತ್ತಬೇಕು ಎನ್ನುವವರು, ಹತ್ತಿದ ಮೇಲೆ ಒಳಗೆ ಬರುವುದಿಲ್ಲ. ‌ಈ ಆಟಿಟ್ಯೂಡ್ ಬಿಡಬೇಕು. ಅಧಿವೇಶನ ನಡೆಯುವಾಗ ಶಾಸಕರು ವಿಧಾನಸಭೆಯಲ್ಲಿ ಇರಬೇಕು.
ಅಧಿವೇಶನ ನಡೆಯುವಾಗ ಜನರನ್ನು ಭೇಟಿ ಮಾಡುವುದು, ಸಚಿವರು, ಅಧಿಕಾರಿಗಳನ್ನು ಭೇಟಿ ಮಾಡುವುದನ್ನು ಬಿಡಬೇಕು. ಕ್ಷೇತ್ರದ ಜನರನ್ನು ನೋಡಬೇಕು, ಅಧಿಕಾರಿಗಳನ್ನು ನೋಡಬೇಕೆಂದು ಕೆಲವರು ಅರ್ಧದಿಂದಲೇ ಹೊರಟು ಬಿಡುತ್ತಾರೆ. ಕೆಲವು ಸಚಿವರೇ ಸದನಕ್ಕೆ ಬರುವುದಿಲ್ಲ. ಅಲ್ಲಿಗೆ ಬಂದರೆ ಹಿರಿಯರ ಮಾತು, ಸಂಸದೀಯ ಭಾಷೆ ಅರ್ಥವಾಗುತ್ತದೆ. ನಾವು ತಜ್ಞರಲ್ಲ, ಸತ್ವಜ್ಞರಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಈಗಿನ ಕಾಲದಲ್ಲಿ ಶಾಸಕರಾಗುವುದು ಕಷ್ಟ. ಒಂದು, ಎರಡು ಬಾರಿ ಪ್ರಯತ್ನ ಮಾಡಬೇಕಾಗುತ್ತದೆ. ಕಾಲ ಕಳೆದಂತೆ ಜನರ ನಿರೀಕ್ಷೆ ಹೆಚ್ಚಾಗುತ್ತದೆ. ಅವರ ನಿರೀಕ್ಷೆಗೆ ತಕ್ಕಂತೆ ನಡೆದುಕೊಳ್ಳಬೇಕಾದುದು ಶಾಸಕರ ಕರ್ತವ್ಯ. ಯಾರು ಜನರ ನಡುವೆ ಇರುತ್ತಾರೆ, ಕಷ್ಟಕ್ಕೆ ಸ್ಪಂದಿಸುತ್ತಾರೆ, ಬೆವರು ಸುರಿಸುವ ಜನರ ಬಗ್ಗೆ ಅಸಹ್ಯ ಪಡುವುದಿಲ್ಲವೋ, ಅವರು ಮುಂದಿನ ಚುನಾವಣೆಯಲ್ಲಿ ಆರಿಸಿ ಬರಲು ಕಷ್ಟವಾಗುವುದಿಲ್ಲ.
ದುಡ್ಡಿನಿಂದ ಗೆದ್ದು ಬರುತ್ತೇವೆ ಎಂದುಕೊಂಡರೆ ಮರು ಆಯ್ಕೆ ಆಗುವುದಿಲ್ಲ, ಇದು ನನ್ನ ಅನುಭವ. ಈಗ ಚುನಾವಣೆ ದುಬಾರಿಯಾಗುತ್ತಿದೆ. ಅರ್ಹರು, ಪ್ರಾಮಾಣಿಕರು ಶಾಸಕರಾಗುವುದು ವಿರಳ. ಕೆಲವು ಬಾರಿ ಜನಪರ ಕಾಳಜಿ ಇಲ್ಲದವರು ಗೆದ್ದು ಬರುತ್ತಾರೆ. ಅಂತವರು ಎರಡನೇ ಬಾರಿ ಗೆಲ್ಲುವುದು ಕಷ್ಟವಾಗುತ್ತದೆ. ಜನರ ಪರ ಕೆಲಸ ಮಾಡುವವರು ರಾಜಕಾರಣದಲ್ಲಿ ಉಳಿಯುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − nine =
Remember me
