ಬೆಂಗಳೂರು: ರಾಜ್ಯದಲ್ಲಿ ಎಸ್​ಡಿಪಿಐ, ಪಿಎಫ್​ಐ, ಕೆಎಫ್​ಡಿ ಸಂಘಟನೆಗಳ ನಿಷೇಧಕ್ಕೆ ಅಗತ್ಯವಾದ ಸಾಕ್ಷ್ಯ ಸಂಗ್ರಹಕ್ಕಾಗಿ ಸರ್ಕಾರ ಹರಸಾಹಸ ಪಡುತ್ತಿರುವಂತೆಯೇ ಶನಿವಾರ ರಾತ್ರಿ ಬೆಂಗಳೂರಿನ ಹೆಗ್ಗಡೆನಗರದ ಎಸ್​ಡಿಪಿಐ ಕಚೇರಿ ಮೇಲೆ ನಡೆದ ಸಿಸಿಬಿ ಪೊಲೀಸರ ದಾಳಿ ವೇಳೆ ಕಬ್ಬಿಣದ ರಾಡ್, ಬ್ಯಾಟ್ ಸಮೇತ ಹಲವು ಮಾರಕಾಸ್ತ್ರಗಳು ಪತ್ತೆಯಾಗಿವೆ. ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ದಾಂಧಲೆಯಲ್ಲಿ ಭಾಗಿಯಾಗಿದ್ದ 8 ದಾಳಿಕೋರರೂ ಇದೇ ಸಂದರ್ಭದಲ್ಲಿ ಸೆರೆ ಸಿಕ್ಕಿದ್ದಾರೆ. ಇದು ರಾಜ್ಯ ಸರ್ಕಾರಕ್ಕೆ ಮಹತ್ವದ ಪುರಾವೆಗಳಾಗುವ ಸಾಧ್ಯತೆ ಇದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಗಲಭೆ ಪ್ರಕರಣದಲ್ಲಿ ಈಗಾಗಲೇ ಬಂಧಿತರಾಗಿರುವ ಆರೋಪಿಗಳು ಕೊಟ್ಟ ಮಾಹಿತಿ, ಮೊಬೈಲ್ ಕರೆಗಳ ವಿವರ ಹಾಗೂ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಗಲಭೆಕೋರರ ಬಂಧನಕ್ಕೆ ಬಲೆ ಬೀಸಲಾಗಿದೆ. ಈವರೆಗೂ ಬಂಧಿತರಾದ ಪ್ರತಿಯೊಬ್ಬನ ಹೆಸರಲ್ಲಿರುವ ಫೇಸ್​ಬುಕ್, ಟ್ವಿಟರ್ ಹಾಗೂ ಇನ್​ಸ್ಟಾಗ್ರಾಂ ಖಾತೆಯನ್ನು ಪರಿಶೀಲಿಸಲಾಗುತ್ತಿದೆ.
ಇದರ ಮಾಹಿತಿ ಆಧರಿಸಿಯೇ ಶನಿವಾರ ತಡರಾತ್ರಿ ಕಾರ್ಯಾಚರಣೆ ಕೈಗೊಂಡ ಸಿಸಿಬಿ ಡಿಸಿಪಿ ರವಿ ಕುಮಾರ್ ನೇತೃತ್ವದ ಪೊಲೀಸರ ತಂಡ ಹೆಗ್ಗಡೆನಗರದಲ್ಲಿರುವ ಎಸ್​ಡಿಪಿಐ ಕಚೇರಿ ಮೇಲೆ ದಾಳಿ ನಡೆಸಿತು. ಈ ವೇಳೆ ಕಚೇರಿಯಲ್ಲಿ ಅವಿತಿದ್ದ 8 ಗಲಭೆಕೋರರನ್ನು ಬಂಧಿಸಲಾಯಿತು.
ಕಚೇರಿಯಲ್ಲೇ ಸಭೆ:ಎಸ್​ಡಿಪಿಐ ಮುಖಂಡ ಮುಜಾಮಿಲ್ ಪಾಷಾ ಹಾಗೂ ಇತರರು ಗಲಭೆ ನಡೆಸುವುದಕ್ಕೆ ಮೊದಲೇ ಹೆಗ್ಗಡೆ ನಗರದ ಕಚೇರಿಯಲ್ಲೇ ಹಲವು ಬಾರಿ ಸಭೆ ನಡೆಸಿದ್ದರು. ಗಲಭೆ ನಡೆದ ಆ.11ರಂದು ಕಚೇರಿಯಲ್ಲಿ ಹಲವರು ಸೇರಿದ್ದರು. ಅವರಲ್ಲಿ ಕೆಲವರು ಡಿ.ಜೆ.ಹಳ್ಳಿ ಪೊಲೀಸ್ ಠಾಣೆ ಬಳಿ ಗಲಭೆ ಎಬ್ಬಿಸಿದ್ದರು. ಠಾಣೆ ಬಳಿ ಬರಲು ಇತರರಿಗೆ ಸಂದೇಶ ಕಳುಹಿಸಿ ಪ್ರಚೋದನೆ ನೀಡಲಾಗಿತ್ತೆಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಭಾರತದಲ್ಲಿ ಬಿಜೆಪಿ, ಆರ್​ಎಸ್​ಎಸ್​ ನಿಯಂತ್ರಣದಲ್ಲಿದೆಯೇ ಫೇಸ್​ಬುಕ್..? ಕೆಸರೆರಚಾಟಕ್ಕೆ ಕಾರಣವೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 1 =
Remember me
