|ಮಂಜುನಾಥ ಕೋಳಿಗುಡ್ಡಬೆಳಗಾವಿ
ಅತಿವೃಷ್ಟಿಯಿಂದ ಉಂಟಾದ ಹಾನಿಗೆ ಪರಿಹಾರ ಸಿಗದೆ ಸಂಕಷ್ಟದಲ್ಲಿರುವ ಸಂತ್ರಸ್ತರಿಗೆ ಇದೀಗ ಗ್ರಾಪಂ ಚುನಾವಣೆಯ ಆಕಾಂಕ್ಷಿ ಅಭ್ಯರ್ಥಿಗಳಿಂದ ಭರ್ಜರಿ ಆಫರ್​ಗಳ ಸುರಿಮಳೆಯಗುತ್ತಿದೆ. ಚುನಾವಣೆಯು ಪಕ್ಷಾಧಾರಿತವಲ್ಲವಾದರೂ ಸ್ಪರ್ಧೆಯ ಆಕಾಂಕ್ಷಿಗಳು ಹಾಲಿ ಮತ್ತು ಮಾಜಿ ಶಾಸಕರ ಬೆಂಬಲ ಪಡೆಯಲು ಅವರ ಕಾರ್ಯಾಲಯಕ್ಕೆ ಅಲೆದಾಡುತ್ತಿದ್ದಾರೆ.
ವಿಸ್ತೀರ್ಣದಲ್ಲಿ ದೊಡ್ಡದಾಗಿರುವ ಬೆಳಗಾವಿ ಜಿಲ್ಲೆಯು ಮಳೆ, ಬೆಳೆಯಲ್ಲಿ ವಿಭಿನ್ನ ಸ್ವರೂಪ ಹೊಂದಿದೆ. ಹಾಗಾಗಿ ವಿವಿಧ ತಾಲೂಕುಗಳ ಜನರು ಹಲವು ಸ್ವರೂಪದ ಮೂಲ ಸೌಕರ್ಯಗಳ ಸಮಸ್ಯೆ ಎದುರಿಸುತ್ತಿದ್ದಾರೆ. ಪ್ರವಾಹ, ಅತಿವೃಷ್ಟಿ, ಬರ ಇತ್ಯಾದಿ ಕಾರಣಗಳಿಂದ ನಲುಗಿರುವ ಗ್ರಾಮೀಣ ಜನರಿಗೆ ಗ್ರಾಮ ಪಂಚಾಯಿತಿಗಳೇ ಸಮಸ್ಯೆಗಳಿಗೆ ಪರಿಹಾರದ ಮೂಲವಾಗಿ ಗೋಚರಿಸುತ್ತವೆ. ಹಾಗಾಗಿ, ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧಿಸುವವರು ಜನರ ಮೂಲ ಸೌಕರ್ಯ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡುವುದು ಸಹಜ. ಕಳೆದ ಎರಡು ವರ್ಷಗಳಲ್ಲಿ ಮಳೆ ಹಾಗೂ ಪ್ರವಾಹದಿಂದ ಜಿಲ್ಲೆಯ ಬಹುತೇಕ ತಾಲೂಕಿನ ಜನರು ಸಮಸ್ಯೆ ಎದುರಿಸಿದ್ದಾರೆ. ಸಹಜವಾಗಿ ಪರಿಹಾರದ ನಿರೀಕ್ಷೆಯಲ್ಲಿರುವ ಜನರಿಗೆ ಚುನಾವಣೆಯ ಹುರಿಯಾಳುಗಳು ಹಲವು ಆಶ್ವಾಸನೆ ನೀಡುತ್ತಿದ್ದಾರೆ.
2019-20 ಮತ್ತು 2020-21ನೇ ಸಾಲಿನ ಅವಧಿಯಲ್ಲಿ ಸಂಭವಿಸಿದ ಧಾರಾಕಾರ ಮಳೆ ಮತ್ತು ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿಗಳು ಮತ್ತು ಬಳ್ಳಾರಿ ನಾಲಾ ಪ್ರವಾಹದಿಂದ ಗೋಕಾಕ, ಮೂಡಲಗಿ, ಬೆಳಗಾವಿ, ರಾಮದುರ್ಗ, ಸವದತ್ತಿ, ಅಥಣಿ, ಕಾಗವಾಡ, ಹುಕ್ಕೇರಿ, ಚಿಕ್ಕೋಡಿ ಸೇರಿ ವಿವಿಧ ಭಾಗಗಳಲ್ಲಿ ಸುಮಾರು 1.10 ಲಕ್ಷಕ್ಕೂ ಅಧಿಕ ಮನೆಗಳಿಗೆ ಹಾನಿ ಉಂಟಾಗಿದೆ. 3.50 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆ ಜಲಾವೃತಗೊಂಡು ಹಾನಿಯಾಗಿದೆ. ಆದರೆ, 1ಲಕ್ಷಕ್ಕೂ ಅಧಿಕ ಸಂತ್ರಸ್ತರಿಗೆ ಪರಿಹಾರ ಸಿಕ್ಕಿಲ್ಲ. ಈಗಲೂ ಮನೆ ಹಾನಿ ಪರಿಹಾರಕ್ಕಾಗಿ ಸಂತ್ರಸ್ತರು ಗ್ರಾಪಂ, ತಾಲೂಕು ತಹಸೀಲ್ದಾರ್ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಇದನ್ನೇ ದಾಳವಾಗಿಸಿಕೊಂಡಿರುವ ಸ್ಪರ್ಧಾಳುಗಳು ಜನರಿಗೆ ಭರವಸೆ ನೀಡುತ್ತ ಚುನಾವಣೆಯಲ್ಲಿ ಗೆಲ್ಲಲು ತಂತ್ರ ಹೂಡುತ್ತಿದ್ದಾರೆ.
ಗ್ರಾಪಂ ಚುನಾವಣೆಗೆ ತಯಾರಿ ನಡೆಸುತ್ತಿರುವ ಆಕಾಂಕ್ಷಿಗಳು ಸಂತ್ರಸ್ತರಿಗೆ ಪರಿಹಾರ ಜತೆಗೆ ವಸತಿ ಯೋಜನೆಗಳಲ್ಲಿ ಮನೆ ಕಲ್ಪಿಸಿಕೊಡುವ ಭರವಸೆ ನೀಡುತ್ತಿದ್ದಾರೆ. ಮತ್ತೊಂದೆಡೆ, ಹಾಲಿ ಮತ್ತು ಮಾಜಿ ಶಾಸಕರ ಬೆಂಬಲಿತ ಅಭ್ಯರ್ಥಿಗಳು ಮತ್ತು ಗ್ರಾಪಂನ ಮಾಜಿ ಸದಸ್ಯರು ತಾವು ಮಾಡಿದ ಕೆಲಸ ಮುಂದಿಟ್ಟುಕೊಂಡು ಮತದಾರರನ್ನು ಹಿಡಿದಿಟ್ಟುಕೊಳ್ಳಲು ಹವಣಿಸುತ್ತಿದ್ದಾರೆ. ಜಿಲ್ಲೆಯ 481 ಗ್ರಾಪಂಗಳ 8,347 ಸದಸ್ಯ ಸ್ಥಾನಗಳಿಗೆ ಚುನಾವಣೆ ಘೊಷಣೆಯಾಗಿರುವ ಬೆನ್ನಲ್ಲೇ ಕಾಂಗ್ರೆಸ್ ಮತ್ತು ಬಿಜೆಪಿಯ ತಳಮಟ್ಟದ ಕಾರ್ಯಕರ್ತರು ಗ್ರಾಪಂ ಚುನಾವಣೆಗೆ ಸ್ಪರ್ಧಿಸಲು ಕಸರತ್ತು ನಡೆಸಿದ್ದಾರೆ. ಇನ್ನೂ ಕೆಲ ಕಾರ್ಯಕರ್ತರು ಹಾಲಿ ಮತ್ತು ಮಾಜಿ ಶಾಸಕರ ಬೆಂಬಲಕ್ಕಾಗಿ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಮತ್ತೊಂದೆಡೆ ಯಾರದೇ ಬೆಂಬಲ ಪಡೆಯದೆ ಸ್ವತಂತ್ರವಾಗಿ ಸ್ಪರ್ಧಿಸಲು ಅಭ್ಯರ್ಥಿಗಳು ತಮ್ಮ ವಾರ್ಡ್​ಗಳಲ್ಲಿನ ಮತದಾರರಿಗೆ ನಾನಾ ರೀತಿಯ ಭರವಸೆ ನೀಡುತ್ತಿದ್ದಾರೆ.
ಯಾವುದೇ ಊರಿಗೆ ಕಾಲಿಟ್ಟರೂ ಕೈಯಲ್ಲಿ ಚಂಬು ಹಿಡಿದು ಬಹಿರ್ದೆಸೆ ಹೋಗುವವರು, ರಸ್ತೆಗಳ ಬದಿಯಲ್ಲಿ ನೀರಿಗಾಗಿ ಬಿಂದಿಗೆ ಸಾಲುಗಳು ಕಾಣುತ್ತವೆ. ಇನ್ನೂ ಮನೆಗಳ ಮುಂಭಾಗದಲ್ಲಿ ಚರಂಡಿ ನೀರು ಮಡುಗಟ್ಟಿ ನಿಂತ ದೃಶ್ಯ ಸಾಮಾನ್ಯ. ನಾಲ್ಕೈದು ದಿನಕ್ಕೊಮ್ಮೆ ಮಾತ್ರ ಕುಡಿಯುವ ನೀರು ಸರಬರಾಜು ಆಗುವ ಹಳ್ಳಿಗಳೂ ಇವೆ. ಎರಡು ಕಿ.ಮೀ. ನಡೆದುಕೊಂಡು ಹೋಗಿ ಕುಡಿಯುವ ನೀರು ತರುವ ದುಸ್ಥಿತಿಯೂ ಇದೆ. ಪ್ರತಿಬಾರಿ ಚುನಾವಣೆ ಸಂದರ್ಭದಲ್ಲಿ ಮಾತ್ರ ಎಲ್ಲರೂ ಬಂದು ಸೌಲಭ್ಯ ಕಲ್ಪಿಸುವ ಭರವಸೆ ನೀಡುತ್ತಾರೆ. ಚುನಾವಣೆ ಮುಗಿದ ಬಳಿಕ ಬಹುತೇಕರು ಜನರ ಕಾಳಜಿ ಮಾಡುವುದಿಲ್ಲ. ಹಾಗಾಗಿ, ಯೋಗ್ಯ ವ್ಯಕ್ತಿಗಳನ್ನು ಗೆಲ್ಲಿಸುವ ನಿಟ್ಟಿನಲ್ಲಿ ಗ್ರಾಪಂ ಚುನಾವಣೆಯನ್ನು ಮೆಟ್ಟಿಲು ಮಾಡಿಕೊಳ್ಳುವ ತವಕದಲ್ಲಿ ಗ್ರಾಮೀಣ ಜನರಿದ್ದಾರೆ.
ಗ್ರಾಪಂ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಸ್ಥಳೀಯ ವ್ಯವಸ್ಥೆಗೆ ಅನುಗುಣವಾಗಿ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲು ಯೋಜನೆ ರೂಪಿಸಲಾಗಿದೆ. ಕೆಲ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಪೆನಲ್​ಗಳಿರುವುದರಿಂದ ಅಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದು ಅವಿರೋಧ ಆಯ್ಕೆ ಕಷ್ಟವಾಗಲಿದೆ. ಡಿ. 5ರ ಕಾರ್ಯಕಾರಣಿ ಸಭೆ ಬಳಿಕ ಸದಸ್ಯರ ಅವಿರೋಧ ಆಯ್ಕೆ ವಿಷಯ ಚರ್ಚೆ ಆಗಲಿದೆ.
|ಈರಣ್ಣ ಅಂಗಡಿರಾಜ್ಯ ಬಿಜೆಪಿ ಕಾರ್ಯದರ್ಶಿ
ಕಾಂಗ್ರೆಸ್​ಅನ್ನು ತಳಮಟ್ಟದಿಂದ ಗಟ್ಟಿಗೊಳಿಸಲು ಗ್ರಾಪಂ ಚುನಾವಣೆ ಅಡಿಪಾಯವಾಗಲಿದೆ. ಹಾಗಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯರ ಆಯ್ಕೆಗೆ ಕಾರ್ಯತಂತ್ರ ರೂಪಿಸಲಾಗುತ್ತಿದೆ. ಈಗಾಗಲೇ ಶಾಸಕರು, ಪಕ್ಷದ ಮುಖಂಡರು ಮೇಲಿಂದ ಮೇಲೆ ಸಭೆ ನಡೆಸುತ್ತಿದ್ದಾರೆ.
|ಕಲ್ಪಪ್ಪಗೌಡ ಲಕ್ಕಾರಕಾಂಗ್ರೆಸ್ ಕಿಸಾನ್ ಘಟಕದ ಜಿಲ್ಲಾಧ್ಯಕ್ಷ
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eight + 11 =
Remember me
