|ಗೋವಿಂದರಾಜು ಚಿನ್ನಕುರ್ಚಿಬೆಂಗಳೂರುರಾಜ್ಯ ಸರ್ಕಾರಕ್ಕೆ ಹೆಚ್ಚು ಆದಾಯ ತಂದು ಕೊಡುವ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ನಕಲಿ ‘ಕೆ2 ಚಲನ್’ ಸೇವೆ ದೊಡ್ಡ ತಲೆನೋವಾಗಿದ್ದು, ಸರ್ಕಾರದ ಬೊಕ್ಕಸಕ್ಕೆ ಹೆಚ್ಚು ನಷ್ಟ ತರುತ್ತಿದೆ. ಬ್ಯಾಂಕ್ ಅಥವಾ ಆನ್​ಲೈನ್​ನಲ್ಲಿ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪಾವತಿಸಿ ಕೆ2 ಚಲನ್ ಪಡೆಯಲಾಗುತ್ತದೆ. ಅಸಲಿ ಕೆ2 ಚಲನ್​ನಂತೆ ಮತ್ತೊಂದು ಚಲನ್ ಮುದ್ರಿಸಿ ಅಥವಾ ಕೆ2 ಚಲನ್​ಗಳ ಹೆಚ್ಚುವರಿ ಪ್ರಿಂಟ್ ಪಡೆದು ಬ್ಯಾಂಕಿನ ನಕಲಿ ಸೀಲು, ಸಹಿ ಮಾಡಿ ಮರು ಬಳಕೆ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಲೋಪದೋಷ ಸರಿಪಡಿಸುವಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ.
ದಾವಣಗೆರೆ ಜಿಲ್ಲೆ ಹೊನ್ನಾಳಿ ಉಪ ನೋಂದಣಿ ಕಚೇರಿಯಲ್ಲೇ 34 ನಕಲಿ ಕೆ2 ಚಲನ್ ಪತ್ತೆ ಆಗಿದ್ದು, 5.85 ಲಕ್ಷ ರೂ. ಸರ್ಕಾರಕ್ಕೆ ನಷ್ಟ ಉಂಟಾಗಿತ್ತು. ಇದೇ ರೀತಿ ರಾಜ್ಯದ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ನಕಲಿ ಕೆ2 ಚಲನ್ ಹಾವಳಿ ಹೆಚ್ಚಾಗಿದೆ. ಸಬ್ ರಿಜಿಸ್ಟ್ರಾರ್​ಗಳಿಗೆ ಅಕ್ರಮ ಪತ್ತೆಹಚ್ಚುವುದು ಕಷ್ಟಸಾಧ್ಯವಾಗಿದೆ. ಸರ್ಕಾರದ ಖಜಾನೆಗೆ ಕೋಟ್ಯಂತರ ರೂ. ನಷ್ಟ ಉಂಟಾಗುತ್ತಿದೆ.
ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪಾವತಿಸಲು ಜನರ ಅನುಕೂಲಕ್ಕೆ ಆನ್​ಲೈನ್ ಸೇವೆಯನ್ನು (ಕೆ2 ಚಲನ್) 2018ರಲ್ಲಿ ಜಾರಿಗೆ ತರಲಾಗಿದೆ. ಆಸ್ತಿ ಕ್ರಯ, ಮಾರಾಟ, ವರ್ಗಾವಣೆ, ಅಡಮಾನ, ದಾನ ಇನ್ನಿತರ ನೋಂದಣಿ ವೇಳೆ ಸರ್ಕಾರಕ್ಕೆ ಶುಲ್ಕ ಪಾವತಿಗೆ ಡಿಮ್ಯಾಂಡ್ ಡ್ರಾಫ್ಟ್ (ಡಿಡಿ) ಜತೆಗೆ ಆನ್​ಲೈನ್​ನಲ್ಲಿ ಶುಲ್ಕ ಪಾವತಿಸಿ ಕೆ2 ಚಲನ್ ಮೂಲಕ ನೋಂದಣಿ ಮಾಡಿಸಬಹುದಾಗಿದೆ.
ಅಂದರೆ 2 ಮಾದರಿಯಲ್ಲಿ ಕೆ2 ಚಲನ್ ಪಡೆಯಬಹುದು. ಸಂಬಂಧಪಟ್ಟ ಸಬ್ ರಿಜಿಸ್ಟ್ರಾರ್ ಕಚೇರಿ ಹೆಸರಿಗೆ ಬ್ಯಾಂಕಿನಲ್ಲಿ ನೇರವಾಗಿ ಶುಲ್ಕ ಪಾವತಿ ಕೆ2 ಚಲನ್ ಪಡೆಯಬಹುದು. ಮತ್ತೊಂದು ಆನ್​ಲೈನ್​ನಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ಗ್ರಾಹಕರೇ ಶುಲ್ಕ ಪಾವತಿಸಿ ಕೆ2 ಚಲನ್ ಪಡೆಯುವ ಅವಕಾಶವಿದೆ. ಬ್ಯಾಂಕಿನಲ್ಲಿ ಪಡೆಯುವ ಕೆ2 ಚಲನ್​ಗೆ ಅಧಿಕಾರಿಗಳ ಸೀಲು, ಸಹಿ ಇರುತ್ತದೆ. ಆನ್​ಲೈನ್​ನಲ್ಲಿ ಪಡೆಯುವ ಕೆ2 ಚಲನ್ ಯಾವುದೇ ಅಧಿಕೃತ ಸಹಿ, ಸೀಲು ಇರುವುದಿಲ್ಲ. ಎಷ್ಟು ಬೇಕಾದರೂ ಪ್ರಿಂಟ್ ಪಡೆಯಬಹುದು. ಈ ಕೆ2 ಚಲನ್​ಗಳನ್ನು ಉಪ ನೋಂದಣಿ ಕಚೇರಿಗೆ ಸಲ್ಲಿಸಿ ನೋಂದಣಿ ಮಾಡಿಸಬಹುದು.
ಎರಡು ಮಾದರಿ ಕೆ2 ಚಲನ್​ನಲ್ಲಿ ಕೋಡ್ ನಂಬರ್ ಬಿಟ್ಟರೇ ಮತ್ಯಾವುದೇ ಭದ್ರತೆ ಇರುವುದಿಲ್ಲ. ಇದನ್ನೇ ದುರ್ಬಳಕೆ ಮಾಡಿಕೊಳ್ಳುವ ವಂಚಕರು ಬ್ಯಾಂಕಿನ ನಕಲಿ ಸೀಲು ತಯಾರಿಸಿಕೊಂಡು ಅಥವಾ ಆನ್​ಲೈನ್​ನಲ್ಲಿ ಪಡೆಯುವ ಕೆ2 ಚಲನ್​ಗಳನ್ನು ಹೆಚ್ಚಾಗಿ ಪ್ರಿಂಟ್ ಪಡೆದು ಅಥವಾ ಬೇರೊಂದು ಚಲನ್​ಗೆ ಹೆಸರು ತಿದ್ದಿ ನಕಲಿ ಚಲನ್ ಸೃಷ್ಟಿಸಿ ಸಬ್ ರಿಜಿಸ್ಟ್ರಾರ್ ಕಚೇರಿಗೆ ಸಲ್ಲಿಸಿ ಆಸ್ತಿ ಕ್ರಯ, ಮಾರಾಟ, ವರ್ಗಾವಣೆ, ಅಡಮಾನ ಇನ್ನಿತ್ತರ ಸೇವೆಗಳನ್ನು ಪಡೆಯುತ್ತಾರೆ. ಇಂತಹ ನಕಲಿ ಕೆ2 ಚಲನ್​ನಲ್ಲಿ ಸ್ವೀಕರಿಸುವ ಸಬ್ ರಿಜಿಸ್ಟ್ರಾರ್​ಗಳು ಸರ್ಕಾರದ ಖಜಾನೆ-2 ಸಲ್ಲಿಸಲಿದ್ದಾರೆ. ನಕಲಿ ಕೆ2 ಚಲನ್​ಗಳನ್ನು ಪತ್ತೆಹಚ್ಚಲು ಸಬ್ ರಿಜಿಸ್ಟ್ರಾರ್ ಬಳಿ ಯಾವುದೇ ತಂತ್ರಜ್ಞಾನ ಇರುವುದಿಲ್ಲ. ಇದರಿಂದ ಸರ್ಕಾರಕ್ಕೆ ನಷ್ಟ ಉಂಟಾಗುತ್ತಿದೆ ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಅಧಿಕಾರಿಗಳು ಅಸಹಾಯಕತೆ ತೋಡಿಕೊಂಡಿದ್ದಾರೆ.
ಕೆ2 ಚಲನ್ ನಕಲಿಯೋ ಅಸಲಿಯೋ ಎಂದು ಪತ್ತೆ ಮಾಡಲು ಸಬ್ ರಿಜಿಸ್ಟ್ರಾರ್​ಗಳ ಬಳಿ ಯಾವುದೇ ತಂತ್ರಾಂಶ ಇಲ್ಲ. ಡಿಡಿ ಆದರೆ ಒಂದೊಂದು ಬ್ಯಾಂಕಿನ ಡಿಡಿ ಒಂದೊಂದು ವಿನ್ಯಾಸದಲ್ಲಿ ಇರುವ ಕಾರಣ ನಕಲಿ ಮಾಡುವುದು ಕಷ್ಟ. ಕೆ2 ಚಲನ್ ಖಾಲಿ ಹಾಳೆ ಮೇಲೆ ಪ್ರಿಂಟ್ ತೆಗೆಯುವ ಕಾರಣ ನಕಲಿ ಮಾಡಲು ಹೆಚ್ಚಿನ ಅವಕಾಶಗಳಿವೆ. ಬ್ಯಾಂಕ್​ನಿಂದ ಪಡೆಯುವ ಕೆ2 ಚಲನ್ ಮೇಲೆ ನಕಲಿ ಸೀಲು, ಸಹಿ ಮಾಡಿ ಮೋಸ ಮಾಡುತ್ತಿದ್ದಾರೆ. ನಕಲಿ ಕೆ2 ಚಲನ್ ಪತ್ತೆಹಚ್ಚಲು ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ.
ಇ-ಸ್ಟ್ಯಾಂಪ್​ಗಳನ್ನು ಒಮ್ಮೆ ಬಳಸಿದರೇ ಅದರನ್ನು ಕಾವೇರಿ ಪೋರ್ಟಾಲ್​ನಲ್ಲಿ ಲಾಕ್ ಮಾಡಲು ಅವಕಾಶವಿದೆ. ಒಂದು ಬಾರಿ ಬಳಸಿದ ಇ-ಸ್ಟ್ಯಾಂಪ್​ಗಳನ್ನು ರಾಜ್ಯದ ಯಾವುದೇ ಮೂಲೆಯಲ್ಲಿ ಬಳಕೆ ಮಾಡಲು ಸಾಧ್ಯವಿಲ್ಲ. ಇದೇ ಮಾದರಿಯಲ್ಲಿ ಕೆ2 ಚಲನ್ ಲಾಕಿಂಗ್ ಮಾಡುವ ತಂತ್ರಾಂಶ ಒದಗಿಸಿದರೆ ಅಕ್ರಮ ತಡೆಗಟ್ಟಬಹುದು ಎಂದು ಹಿರಿಯ ಸಬ್ ರಿಜಿಸ್ಟ್ರಾರ್​ಗಳ ಅಭಿಪ್ರಾಯವಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 6 =
Remember me
