| ಮಂಜುನಾಥ ಕೋಳಿಗುಡ್ಡ ಬೆಳಗಾವಿ
ರಾಜ್ಯ ಚುನಾವಣೆ ಆಯೋಗವು ಅವಧಿ ಮುಗಿದಿರುವ ಗ್ರಾಪಂಗಳಿಗೆ ಚುನಾವಣೆ ನಡೆಸಲು ಸಿದ್ಧತೆಯಲ್ಲಿ ತೊಡಗಿಕೊಂಡಿದ್ದರೆ ಇತ್ತ ರಾಜಕೀಯ ಪಕ್ಷಗಳು ತಮ್ಮ ಬೆಂಬಲಿತ ಅಭ್ಯರ್ಥಿಗಳ ಅವಿರೋಧ ಆಯ್ಕೆಗೆ ಕಸರತ್ತು ಆರಂಭಿಸಿವೆ. ಇವುಗಳ ಮಧ್ಯೆಯೇ ಸ್ಪರ್ಧೆಗೆ ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿಯೂ ಏರ್ಪಟ್ಟಿದೆ.
ಕೋವಿಡ್-19, ಖರ್ಚು-ವೆಚ್ಚಗಳಿಗೆ ಕಡಿವಾಣ ಹಾಕುವುದು, ತಳಮಟ್ಟದಲ್ಲಿ ಪಕ್ಷ ಸಂಘಟನೆ ಮಾಡುವ ಉದ್ದೇಶ ಮತ್ತು ಪಕ್ಷದ ಕಾರ್ಯಕರ್ತರಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಬಿಜೆಪಿ, ಕಾಂಗ್ರೆಸ್​ನ ಸ್ಥಳೀಯ ಪ್ರಮುಖರು ನಿರ್ಧರಿಸಿದ್ದಾರೆ. ಹೀಗಾಗಿ ಗ್ರಾಪಂಗಳಿಗೆ ಚುನಾವಣೆ ಘೊಷಣೆಯಾಗುವ ಮುನ್ನವೇ ಆಯಾ ವಾರ್ಡ್​ಗಳಲ್ಲಿ ಮತದಾರರ ಸಂಖ್ಯೆ, ಜಾತಿವಾರು ಆಧಾರದ ಮೇಲೆ ಬೆಂಬಲಿತ ಅಭ್ಯರ್ಥಿಗಳನ್ನು ಗುರುತಿಸಿ ಅವಿರೋಧವಾಗಿ ಆಯ್ಕೆ ಮಾಡಲು ತೆರೆಮರೆಯಲ್ಲಿ ಯತ್ನ ನಡೆಸಿದ್ದಾರೆ. ಈ ವಿಚಾರವಾಗಿಯೇ ವಾರ್ಡ್​ಗಳಲ್ಲಿ ಸಭೆ ನಡೆಸುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಸ್ಥಾನಗಳು ಅದಲು-ಬದಲು:ಈಗಾಗಲೇ ಜಿಲ್ಲೆಯ 506 ಗ್ರಾಪಂಗಳ ಪೈಕಿ 484 ಗ್ರಾಪಂ ಸದಸ್ಯರ 5 ವರ್ಷದ ಅವಧಿ 2020 ಮೇ ಮತ್ತು ಅಗಸ್ಟ್​ನ್​ನಲ್ಲಿ ಪೂರ್ಣಗೊಂಡಿದೆ. ಹೀಗಾಗಿ ಚುನಾವಣಾ ಆಯೋಗವು ವಾರ್ಡ್ ಮೀಸಲಾತಿ, ಮತದಾರರ ಪಟ್ಟಿ, ಮತಗಟ್ಟೆಗಳನ್ನು ಅಂತಿಮಗೊಳಿಸಿದೆ. ಅಲ್ಲದೆ, 2015ರ ಚುನಾವಣೆಯಲ್ಲಿನ ವಾರ್ಡ್ ಮೀಸಲಾತಿ ಯಥವಾತ್ತಾಗಿದ್ದು, ವಾರ್ಡ್​ಗಳಲ್ಲಿ ಮಹಿಳೆ ಮತ್ತು ಪುರುಷ ಸ್ಥಾನಗಳು ಮಾತ್ರ ಅದಲು-ಬದಲಾಗಿದೆ.
25,70,790 ಮತದಾರರು:ಸದ್ಯ 484 ಗ್ರಾಪಂ ವ್ಯಾಪ್ತಿಯ 8,416 ವಾರ್ಡ್​ಗಳಿಗೆ ಚುನಾವಣೆ ನಡೆಯಲಿದೆ. 2,937 ಮೂಲ ಮತಗಟ್ಟೆ ಹಾಗೂ 912 ಉಪ ಮತಗಟ್ಟೆ ಗುರುತಿಸಲಾಗಿದೆ. ಅಲ್ಲದೆ, ಈ ವಾರ್ಡ್​ಗಳ ವ್ಯಾಪ್ತಿಯಲ್ಲಿ 3.66 ಲಕ್ಷ ಯುವ ಮತದಾರರು ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದು ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ. ಒಟ್ಟು 13.07 ಲಕ್ಷ ಪುರುಷ, 12.62 ಲಕ್ಷಮಹಿಳೆಯರು ಸೇರಿ ಒಟ್ಟು 25,70,790 ಮತದಾರರು ಹಕ್ಕು ಚಲಾಯಿಸಲಿದ್ದಾರೆ.
ಗ್ರಾಪಂ ಚುನಾವಣೆ ದಿನಾಂಕ ಘೊಷಣೆಯಾದ ಬಳಿಕ ಸಾಧ್ಯವಾದಷ್ಟು ಕಡೆ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲು ಪ್ರಯತ್ನಿಸಲಾಗುವುದು. ಈಗಾಗಲೇ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಆರಂಭವಾಗಿದ್ದರಿಂದ, ಚುನಾವಣೆ ವೇಳೆ ಉತ್ತಮ ಫಲಿತಾಂಶಕ್ಕೆ ಅನುಕೂಲವಾಗಲಿದೆ.
|ಸಂಜಯ ಪಾಟೀಲಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ, ಬೆಳಗಾವಿ
ಮುಂಬರುವ ಗ್ರಾಪಂ, ತಾಪಂ ಹಾಗೂ ಜಿಪಂ ಚುನಾವಣೆ ಎದುರಿಸಲು ತಯಾರಿ ಆರಂಭಿಸಲಾಗಿದೆ. ಗ್ರಾಪಂ ಚುನಾವಣೆಯಲ್ಲಿ ಬೆಂಬಲಿತ ಅಭ್ಯರ್ಥಿಗಳನ್ನು ಅವಿರೋಧವಾಗಿ ಗೆಲ್ಲಿಸಲು ಪ್ರಯತ್ನಿಸಲಾಗುವುದು. ಅಲ್ಲದೆ, ಆಯಾ ಗ್ರಾಪಂ ವಾರ್ಡ್​ಗಳಲ್ಲಿ ಸ್ಥಳೀಯರೇ ಅಭ್ಯರ್ಥಿಗಳನ್ನು ಅವಿರೋಧ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ. ಇದರಲ್ಲಿ ಪಕ್ಷಗಳ ಪಾತ್ರ ಪ್ರಮುಖವಲ್ಲ.
|ವಿನಯ ನಾವಲಗಟ್ಟಿಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ, ಬೆಳಗಾವಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 6 =
Remember me
