|ಇಂದುಧರ ಹಳಕಟ್ಟಿಹಿರೇಕೆರೂರ
ಕೇಂದ್ರ ಸರ್ಕಾರ ಜಾರಿಗೆ ತರಲು ಇಚ್ಛಿಸಿರುವ ಹೊಸ ಶಿಕ್ಷಣ ನೀತಿಯ ಕುರಿತು ವಿದ್ಯಾರ್ಥಿಗಳು ಮತ್ತು ಅವರ ಪಾಲಕರಿಗೆ ಅರಿವು ಮೂಡಿಸಲು ಶಿಕ್ಷಕ ನಾಗರಾಜ ಹೆಗ್ಗೇರಿ ನಿರ್ವಿುಸಿರುವ 12 ನಿಮಿಷದ ಕಿರು ಚಿತ್ರಕ್ಕೆ ಸಾಮಾಜಿಕ ಜಾಲತಾಣ ಹಾಗೂ ಯೂಟ್ಯೂಬ್​ನಲ್ಲಿ ವ್ಯಾಪಕ ಸ್ಪಂದನೆ ಸಿಕ್ಕಿದ್ದು, ಶಿಕ್ಷಕರ ವಿನೂತನ ಪ್ರಯತ್ನ ಭಾರಿ ಮೆಚ್ಚುಗೆ ಪಡೆದಿದೆ.
ಆಲದಕಟ್ಟಿ ಸರ್ಕಾರಿ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ, ಸಾಹಿತಿ ನಾಗರಾಜ ಹೆಗ್ಗೇರಿ ಅವರು, ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿಯೂ ಆಗಿದ್ದಾರೆ. ಶಾಲೆಯ ಆವರಣದಲ್ಲಿ ಅನೇಕ ಗಿಡ ಮರಗಳನ್ನು ನೆಟ್ಟು ಹಸಿರೇ ಉಸಿರು ಎಂಬ ಗಾದೆ ಮಾತಿನಂತೆ ಉತ್ತಮ ವಾತಾವರಣ ಕಲ್ಪಿಸಿದ್ದಾರೆ. ಈಗಾಗಲೇ ಶಿಕ್ಷಣದ ವಿಚಾರವಾಗಿ ಸ್ಪೂರ್ತಿ, ಜ್ಞಾನ ಸಿಂಚನ ಪುಸ್ತಕ ರಚಿಸಿದ್ದಾರೆ. ಸಂಸ್ಕಾರವೇ ಸ್ವರ್ಗ, ಮುಚ್ಚ ಬ್ಯಾಡ್ರೀ ಕನ್ನಡ ಶಾಲೆ ಹಾಗೂ ಪ್ರಸಕ್ತ ಸಾಲಿನಲ್ಲಿ ರಾಷ್ಟ್ರೀಯ ಹೊಸ ಶಿಕ್ಷಣ ನೀತಿ 2020 ಸೇರಿದಂತೆ ಮೂರು 12 ನಿಮಿಷದ ಕಿರು ಚಿತ್ರ ನಿರ್ವಿುಸಿದ್ದಾರೆ.
ಕಿರುಚಿತ್ರವನ್ನು ಯೂಟ್ಯೂಬ್​ನಲ್ಲಿ ಪ್ರಣಮ್ಯ ಕ್ರಿಯೇಶನ್ ಲಿಂಕ್ ಆಪ್ ಮೂಲಕ ಬಿಡುಗಡೆ ಮಾಡಿದ್ದಾರೆ. ರಾಷ್ಟ್ರೀಯ ಹೊಸ ಶಿಕ್ಷಣ ನೀತಿಯ ಕುರಿತು ಮನೆ ಮನೆಗೆ ತೆರಳಿ ಪಾಲಕರಿಗೆ ಹಾಗೂ ಮಕ್ಕಳಿಗೆ ಮಾಹಿತಿ ನೀಡುವುದಲ್ಲದೆ, ಇದನ್ನು ಯೂಟ್ಯೂಬ್​ನಲ್ಲಿ ಮತ್ತು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡುತ್ತಿದ್ದಾರೆ. ಶಿಕ್ಷಣ ನೀತಿಯಲ್ಲಿ ಈ ಹಿಂದೆ ಇದ್ದ 10+2 ರ ಬದಲಾಗಿ, 5+3+3+4 ಆಗಿ ಮಾರ್ಪಡಿಸಲಾಗಿದೆ. 6ನೇ ತರಗತಿಯಿಂದಲೇ ಮಕ್ಕಳಿಗೆ ಐಚ್ಛಿಕ ವಿಷಯವನ್ನಾಯ್ದುಕೊಂಡು ತಮಗಿಷ್ಟವಾದ ವಿಷಯದಲ್ಲಿ ಅಧ್ಯಯನ ಮಾಡಲು ಅವಕಾಶ ನೀಡಲಾಗಿದೆ. ಈ ಹಿಂದೆ ಇದ್ದ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು 10ನೇ ತರಗತಿಯ ಬದಲಾಗಿ 12ನೇ ತರಗತಿಯವರೆಗೆ ವಿಸ್ತರಿಸಲಾಗಿದೆ. ಇನ್ನೂ ಹಲವು ಬದಲಾವಣೆ ಮಾಡಿರುವ ಕುರಿತು ಸಂಕ್ಷಿಪ್ತವಾಗಿ ಗ್ರಾಮಾಂತರ ಪ್ರದೇಶದ ಜನರಿಗೆ ಮನಮುಟ್ಟುವಂತೆ ಶಿಕ್ಷಕ ನಾಗರಾಜ ತಿಳಿಸುತ್ತಿದ್ದಾರೆ.
ಶಾಲೆಯ ದಾಖಲಾತಿ, ಹಾಜರಾತಿ ಕಡಿಮೆಯಾಗದಂತೆ ಮಕ್ಕಳ ಮನೆಗೆ ತೆರಳಿ ಪಾಲಕರಿಗೆ, ಮಕ್ಕಳಿಗೆ ಬುದ್ಧಿ ಹೇಳಿ ತಪ್ಪದೆ ಶಾಲೆಗೆ ಬರುವಂತೆ ನೋಡಿಕೊಳ್ಳುತ್ತಿದ್ದಾರೆ. ತಮ್ಮ ಕಾರ್ಯದ ಮೂಲಕ ಶಾಲೆ ಹಾಗೂ ಸುತ್ತಮುತ್ತಲ ಗ್ರಾಮಗಳ ಜನತೆಗೆ, ಮಕ್ಕಳಿಗೆ ಬಹು ಅಚ್ಚುಮೆಚ್ಚಿನ ಶಿಕ್ಷಕ ಎನೆಸಿಕೊಂಡಿರುವ ಶಿಕ್ಷಕ ನಾಗರಾಜ ಹೆಗ್ಗೇರಿ, 2019-20ರಲ್ಲಿ ಅತ್ಯುತ್ತಮ ಜಿಲ್ಲಾ ಶಿಕ್ಷಕ ಪ್ರಶಸ್ತಿ ಪಡಿದಿದ್ದಾರೆ.
ಗ್ರಾಮಗಳಿಗೆ ತೆರಳಿ, ಪಾಲಕರು, ಮಕ್ಕಳು ಮತ್ತು ಜನರನ್ನು ಕೂರಿಸಿಕೊಂಡು ರಾಷ್ಟ್ರೀಯ ಹೊಸ ಶಿಕ್ಷಣ ನೀತಿ 2020ರಲ್ಲಿನ ಅಂಶಗಳ ಬಗ್ಗೆ ಮನದಟ್ಟಾಗುವಂತೆ ಎಳೆಎಳೆಯಾಗಿ ಬಿಡಿಸಿ ಹೇಳುತ್ತಿದ್ದಾರೆ. ಶಿಕ್ಷಣ ನೀತಿ ಕುರಿತು ಮಾಹಿತಿ ನೀಡುವ ಅವರ ಕಿರುಚಿತ್ರ ಭಾರಿ ಮೆಚ್ಚುಗೆಗೆ ಪಾತ್ರವಾಗಿದ್ದು ಇದನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗಿದೆ.
2007ರಿಂದ ಇಲ್ಲಿಯವರೆಗೆ ಶಾಲೆಯ ಶೇ. 99ರಷ್ಟು ಮಕ್ಕಳು ಸತತವಾಗಿ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಆಯ್ಕೆಯಾಗಿದ್ದಾರೆ. ಮೂರು ವರ್ಷದಿಂದ ಮೂರು ಮಕ್ಕಳು ನವೋದಯ ಶಾಲೆಗೆ ಆಯ್ಕೆಯಾಗಿದ್ದಾರೆ. 2018-19ರಲ್ಲಿ ಪರಿಸರ ಮಿತ್ರ ಪ್ರಶಸ್ತಿ ಪಡೆದಿದೆ. ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಶಾಲೆಯ ಮಕ್ಕಳು ತಾಲೂಕು, ಜಿಲ್ಲಾ ಮಟ್ಟದಲ್ಲಿ ಭಾಗವಹಿಸಿ ಅನೇಕ ಸಾಧನೆ ಮಾಡಿದ್ದಾರೆ.
ನನಗೆ ಶಿಕ್ಷಕ ಕಾಯಕ ದೊರೆತಿರುವುದು ಹೆಮ್ಮೆಯ ವಿಷಯ. ಮಕ್ಕಳ ಕಲಿಕೆಗೆ ಅನುಗುಣವಾಗಿ ವಾತಾವರಣ ಸೃಷ್ಟಿಸುವ ಮೂಲಕ ಗ್ರಾಮೀಣ ಮಕ್ಕಳನ್ನು ಪೋ›ತ್ಸಾಹಿಸಿದರೆ ಅಸಾಧ್ಯವಾದುದನ್ನು ಸಾಧಿಸಿ ತೋರಿಸುತ್ತಾರೆ. ನನಗೆ ಮುಖ್ಯಶಿಕ್ಷಕಿ ಪುಷ್ಪಾ ಮಕರಿ, ಶಾಲಾ ಎಸ್​ಡಿಎಂಸಿ ಹಾಗೂ ವಿಶೇಷವಾಗಿ ಇಲಾಖೆಯವರು ಸಹಾಯ, ಸಹಕಾರ ನೀಡುತ್ತಿದ್ದು ಇದು ಮತ್ತಷ್ಟು ಪ್ರೇರಣೆಯಾಗಿದೆ.
|ನಾಗರಾಜ ಹೆಗ್ಗೇರಿಸಹ ಶಿಕ್ಷಕ
ಸಹ ಶಿಕ್ಷಕ ನಾಗರಾಜ ಹೆಗ್ಗೇರಿ ಅವರು ತುಂಬಾ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುತ್ತಿದ್ದು, ಜತೆಗೆ ಆಧುನಿಕ ತಂತ್ರಜ್ಞಾನದಲ್ಲಿ ಮಕ್ಕಳಿಗೆ ಏನೇನು ಬೇಕು ಎಂಬುದರ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಎಲ್ಲರೊಂದಿಗೆ ಬೆರೆತು, ಚರ್ಚೆ ಮಾಡಿ ಮುಂಬರುವ ತಾಂತ್ರಿಕ ಜ್ಞಾನ ಹೇಗೆ ಅಳವಡಿಸಿಕೊಳ್ಳಬೇಕು ಎಂಬುದನ್ನು ಅತಿ ವ್ಯವಸ್ಥಿತವಾಗಿ ಯೋಜನೆ ರೂಪಿಸಿದ್ದಾರೆ.
|ಸಿದ್ಧಲಿಂಗಪ್ಪ ಎಲ್.ಬಿಇಒ
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twenty − nine =
Remember me
