|ಗಿರೀಶ್ ಗರಗ ಬೆಂಗಳೂರು
ಕರೊನಾ ಸಂಕಷ್ಟದಿಂದ ಕುಸಿದಿರುವ ಆಟೋಮೊಬೈಲ್ ಉದ್ಯಮದ ಚೇತರಿಕೆಗಾಗಿ ಕೇಂದ್ರ ಸರ್ಕಾರ  ಸ್ಕ್ರ್ಯಾಪಿಂಗ್​​ ಪಾಲಿಸಿಯನ್ನು ಅಕ್ಟೋಬರ್ ಮೊದಲ ವಾರ ಬಿಡುಗಡೆಗೊಳಿಸುತ್ತಿದೆ. ಈ ನೀತಿ ಸಮರ್ಪಕವಾಗಿ ಜಾರಿಯಾದರೆ, ರಾಜ್ಯದಲ್ಲಿ 48 ಲಕ್ಷಕ್ಕೂ ಹೆಚ್ಚಿನ ವಾಹನಗಳು ಗುಜರಿಗೆ ಸೇರುವ ಸಾಧ್ಯತೆಗಳಿವೆ.
ವಾಯುಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಹಳೆಯ ವಾಹನಗಳನ್ನು ಗುಜರಿಗೆ ( ಸ್ಕ್ರ್ಯಾಪ್​​ ) ಹಾಕುವಂತೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಈ ಹಿಂದೆಯೇ ಆದೇಶಿಸಿದೆ. ಅದಕ್ಕೆ ತಕ್ಕಂತೆ ಕೇಂದ್ರ ಸರ್ಕಾರ ಸ್ಕ್ರ್ಯಾಪಿಂಗ್ ಪಾಲಿಸಿ ರೂಪಿಸುತ್ತಿದ್ದು, ಇನ್ನು 25 ದಿನಗಳಲ್ಲಿ ಅದನ್ನು ಪ್ರಕಟಿಸಲಿದೆ. ಕಾರು ಹಾಗೂ ಅದಕ್ಕಿಂತ ಹೆಚ್ಚಿನ ಸಾಮರ್ಥ್ಯದ ವಾಹನಗಳಷ್ಟೇ ಅಲ್ಲದೆ, ದ್ವಿಚಕ್ರ ಮತ್ತು ತ್ರಿಚಕ್ರದ ವಾಹನಗಳೂ ನೀತಿಗೆ ಒಳಪಡುವ ಸಾಧ್ಯತೆಗಳಿವೆ. 15 ವರ್ಷಗಳಿಗಿಂತ ಹಳೆಯ ವಾಹನಗಳ ಫಿಟ್​ನೆಸ್ ಪ್ರಮಾಣಪತ್ರ ರದ್ದು ಮಾಡಿ, ಅವುಗಳನ್ನು ಸರ್ಕಾರದಿಂದಲೇ ಸ್ಕ್ರ್ಯಾಪ್ ಮಾಡಲಾಗುತ್ತದೆ. ಹೀಗೆ ಒಮ್ಮೆ ವಾಹನಗಳ ಸ್ಕ್ರ್ಯಾಪ್ ಮಾಡಲು ಆರಂಭಿಸಿದರೆ ರಾಜ್ಯದಲ್ಲಿನ 48 ಲಕ್ಷಕ್ಕೂ ಹೆಚ್ಚಿನ ವಾಹನಗಳು ಗುಜರಿಗೆ ಸೇರಲಿವೆ.
ರಾಜ್ಯದಲ್ಲಿ ಸಾರಿಗೆ ಇಲಾಖೆ ಗುರುತಿಸಿರುವಂತೆ 2019ರ ಮಾರ್ಚ್​ವರೆಗೆ 47,49,996 ವಾಹನಗಳು 15 ವರ್ಷ ಮೀರಿವೆ. ಅದರಲ್ಲಿ ಸಾರಿಗೆಯೇತರ ವಾಹನಗಳೇ ಹೆಚ್ಚಿದ್ದು, ಆ ಪೈಕಿ 43.20 ಲಕ್ಷ ಬೈಕ್, ಕಾರು, ಜೀಪ್, ಟ್ಯಾ›ಕ್ಟರ್, ಟ್ರೖೆಲರ್ಸ್, ಕಟ್ಟಡ ನಿರ್ಮಾಣ ವಾಹನಗಳು ಸೇರಿವೆ. ಅದರಲ್ಲಿ 34.81 ಲಕ್ಷ ದ್ವಿಚಕ್ರ ವಾಹನಗಳು, 6.52 ಲಕ್ಷ ಕಾರುಗಳಿವೆ. ಈ ಸಂಖ್ಯೆ ಇದೀಗ ಇನ್ನಷ್ಟು ಹೆಚ್ಚಾಗಿದೆ. ಉಳಿದಂತೆ ಮಲ್ಟಿಆಕ್ಸಲ್ ವಾಹನ, ಟ್ರಕ್, ಲಾರಿಗಳು 1.25 ಲಕ್ಷ, ಲಘು ಗೂಡ್ಸ್ ವಾಹನಗಳು 1.54 ಲಕ್ಷ, ಸ್ಟೇಜ್ ಕ್ಯಾರೇಜ್, ಕಾಂಟ್ರ್ಯಾಕ್ಟ್​​ ಕ್ಯಾರೇಜ್, ಶಿಕ್ಷಣ ಸಂಸ್ಥೆಗಳ ಬಸ್​ಗಳು ಸೇರಿ ಇನ್ನಿತರ ವಾಹನಗಳು 29,560, ಮೋಟಾರ್ ಕ್ಯಾಬ್, ಮ್ಯಾಕ್ಸಿ ಕ್ಯಾಬ್​ಗಳು 69,123, ಆಂಬುಲೆನ್ಸ್ 1,706, ಮೂರು ಮತ್ತು ಆರು ಆಸನದ ವಾಹನಗಳು 1.26 ಲಕ್ಷ ಹಾಗೂ ಇನ್ನಿತರ ವಾಹನಗಳು 15,809 ಇವೆ. ಒಟ್ಟಾರೆ 4.83 ಲಕ್ಷ ಸಾರಿಗೆ ವಾಹನಗಳು 15 ವರ್ಷ ಮೀರಿವೆ.
ಬೆಂಗಳೂರಿನಲ್ಲಿ 13 ಲಕ್ಷ:ರಾಜ್ಯದಲ್ಲಿನ 48 ಲಕ್ಷಕ್ಕೂ ಹೆಚ್ಚಿನ ವಾಹನಗಳ ಪೈಕಿ ಬೆಂಗಳೂರಿನಲ್ಲೇ 13 ಲಕ್ಷ ವಾಹನಗಳು ಗುಜರಿಗೆ ಸೇರುತ್ತಿವೆ. ಇಲ್ಲೂ ಸಾರಿಗೆಯೇತರ ವಾಹನಗಳೇ ಹೆಚ್ಚಿದ್ದು, ಬೈಕ್, ಕಾರುಗಳು ಸೇರಿ ಇನ್ನಿತರ 11.77 ಲಕ್ಷ ವಾಹನಗಳನ್ನು ಸ್ಕ್ರ್ಯಾಪ್​​ ಮಾಡಬೇಕಿದೆ.ಇದನ್ನೂ ಓದಿ:ಮುಂಬೈ ಬಿಡುತ್ತಿದ್ದಂತೆ ಆದಿತ್ಯ ಠಾಕ್ರೆ ವಿರುದ್ಧ ಗಂಭೀರ ಆರೋಪ ಮಾಡಿದ ಕಂಗನಾ
ರಾಜ್ಯ ಸರ್ಕಾರವು ಕೇಂದ್ರ ಸರ್ಕಾರ ರೂಪಿಸಲಿರುವ ಸ್ಕ್ರ್ಯಾಪಿಂಗ್​​ ಪಾಲಿಸಿ ಜಾರಿ ಮಾಡಬೇಕೆಂದರೆ ವಾಹನಗಳನ್ನು ಸ್ಕ್ರಾ್ಯಪ್ ಮಾಡಲು ಬೇಕಾಗುವ ಯಂತ್ರಗಳನ್ನು ಅಳವಡಿಸಬೇಕು. ಅದಾದ ನಂತರ 15 ವರ್ಷದ ಹಳೆಯ ವಾಹನಗಳನ್ನು ಗುರುತಿಸಿ, ಅವುಗಳ ಫಿಟ್​ನೆಸ್ ಸರ್ಟಿಫಿಕೇಟ್ ರದ್ದು ಮಾಡಿ ವಶಕ್ಕೆ ಪಡೆಯಬೇಕು. ನಂತರ ಅವುಗಳನ್ನು ಸರ್ಕಾರ ನಿರ್ವಿುಸಿದ ಕೇಂದ್ರಗಳಲ್ಲಿ ಒಂದೊಂದೇ ಬಿಡಿಭಾಗ ಬೇರ್ಪಡಿಸಿ ಸ್ಕ್ರಾ್ಯಪ್ ಮಾಡಬೇಕಿದೆ. ಹೀಗೆ ಸ್ಕ್ರಾ್ಯಪ್ ಮಾಡುವಾಗ ವಾಹನಗಳ ಮೌಲ್ಯಮಾಪನ ಮಾಡಿ, ಆ ಮೊತ್ತವನ್ನು ವಾಹನ ಮಾಲೀಕರಿಗೆ ನೀಡಬೇಕಿದೆ.
ಆದರೆ, ರಾಜ್ಯದಲ್ಲಿ ಕೆಲವೆಡೆ ಮಾತ್ರ ಸ್ಕ್ರ್ಯಾಪಿಂಗ್​​ ಕೇಂದ್ರಗಳನ್ನು ಆರಂಭಿಸಲಾಗಿದೆ. ಜತೆಗೆ ವಾಹನಗಳ ಮೌಲ್ಯಮಾಪನ ಸಂಬಂಧ ಸಮರ್ಪಕ ನಿಯಮ ರೂಪಿಸಿಲ್ಲ. ಹೀಗಾಗಿ ನೀತಿ ಪ್ರಕಟಗೊಂಡರೂ, ವಾಹನಗಳನ್ನು ಸ್ಕ್ರಾ್ಯಪ್ ಮಾಡುವ ಪ್ರಕ್ರಿಯೆಗೆ ಸದ್ಯಕ್ಕೆ ಚಾಲನೆ ನೀಡುವುದು ಸಾಧ್ಯವಿಲ್ಲ ಎನ್ನುವುದು ಸಾರಿಗೆ ಇಲಾಖೆ ಅಧಿಕಾರಿಗಳ ಅನಿಸಿಕೆ.
ಕರ್ನಾಟಕದಲ್ಲಿ ಕಳೆದ 11 ವರ್ಷಗಳಲ್ಲಿ ವಾಹನಗಳ ಸಂಖ್ಯೆ ಶೇ. 150 ಹೆಚ್ಚಾಗಿದೆ. ಸಾರಿಗೆ ಇಲಾಖೆ ಮಾಹಿತಿಯಂತೆ 2008-09ನೇ ಸಾಲಿನಲ್ಲಿ ರಾಜ್ಯದಲ್ಲಿ 82,94,202 ವಾಹನಗಳಿದ್ದವು. ಅದೇ 2020ರ ಮೇ ಅಂತ್ಯದವರೆಗೆ ರಾಜ್ಯದಲ್ಲಿ 2,46,07,104 ವಾಹನಗಳು ನೋಂದಣಿಯಾಗಿವೆ. ಬೆಂಗಳೂರಿನಲ್ಲೇ 94,59,376 ವಾಹನಗಳಿವೆ.ಇದನ್ನೂ ಓದಿ:Web Exclusive: ಪೊಲೀಸ್ ಠಾಣೆಗಳಿಗೂ ಸಿಕ್ತು ಬಡ್ತಿ!; ರಾಜ್ಯದ 56 ಠಾಣೆಗಳಿಗೆ ಮೇಲ್ದರ್ಜೆ ಭಾಗ್ಯ
ದ್ವಿಚಕ್ರ ವಾಹನಗಳನ್ನೂ ಸೇರಿ ಸ್ಕ್ರಾ್ಯಪಿಂಗ್ ಪಾಲಿಸಿ ಜಾರಿಗೆ ತಂದರೆ, ಆಟೋಮೊಬೈಲ್ ಉದ್ಯಮಕ್ಕೆ ಅನುಕೂಲವಾಗಲಿದೆ. ಕರೊನಾ ಸೋಂಕಿನ ಭೀತಿಯಿಂದಾಗಿ ಉಂಟಾಗಿರುವ ಆರ್ಥಿಕ ನಷ್ಟವನ್ನು ನೂತನ ನೀತಿ ಸರಿದೂಗಿಸುವ ನಿರೀಕ್ಷೆ ಹೊಂದಲಾಗಿದೆ. ಅಂಕಿ-ಅಂಶದ ಪ್ರಕಾರ ಕಳೆದ 5 ತಿಂಗಳಲ್ಲಿ ಆಟೋಮೊಬೈಲ್ ಮತ್ತು ಅದಕ್ಕೆ ಸಂಬಂಧಿತ ಉದ್ಯಮಗಳಲ್ಲಿ 2.3 ಲಕ್ಷ ಉದ್ಯೋಗ ನಷ್ಟವುಂಟಾಗಿದೆ. ಅದರ ಜತೆಗೆ 5 ಸಾವಿರ ಕೋಟಿ ರೂ.ಗೂ ಹೆಚ್ಚಿನ ನಷ್ಟವಾಗಿದೆ.
ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿರುವ ಸ್ಕ್ರಾ್ಯಪಿಂಗ್ ಪಾಲಿಸಿ ಉತ್ತಮ ಬೆಳವಣಿಗೆ. ಆದರೆ, ನೀತಿಯಲ್ಲಿ ವಾಹನ ಮಾಲೀಕರಿಗೆ ಅನುಕೂಲವಾಗುವಂಥ ಅಂಶಗಳನ್ನು ಸೇರಿಸಬೇಕು. ತೆರಿಗೆ ಪಾವತಿಯಲ್ಲಿನ ವಿನಾಯಿತಿ ಸೇರಿ ಇನ್ನಿತರ ಸೌಲಭ್ಯ ನೀಡಬೇಕು. ಅದೇ ರೀತಿ ವಾಹನಗಳನ್ನು ಸ್ಕ್ರಾ್ಯಪ್ ಮಾಡುವಾಗ ಪ್ರತಿ ವಸ್ತುವನ್ನೂ ಬೇರ್ಪಡಿಸಿ ವಿಲೇವಾರಿ ಮಾಡುವ ಅಂಶ ಅಳವಡಿಸಬೇಕು.
| ಕೆ.ರಾಧಾಕೃಷ್ಣ ಹೊಳ್ಳರಾಜ್ಯ ಟ್ರಾವೆಲ್ ಆಪರೇಟರ್​ಗಳ ಸಂಘದ ಅಧ್ಯಕ್ಷ.

Web Exclusive: ಲಾಕ್​ಡೌನ್ ಬಳಿಕ ರಿಯಾಲ್ಟಿ ಚೇತರಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 1 =
Remember me
