| ಶಿವಮೂರ್ತಿ ಹಿರೇಮಠ ರಾಯಚೂರು
ಸಾವಿನಂಚಿನಲ್ಲಿರುವವರ ರಕ್ಷಣೆಗೆ ಆಂಬುಲೆನ್ಸ್ ಕರೆದರೆ ಸತ್ತಮೇಲೆಯೇ ಬರುವುದೆಂಬ ಅಪವಾದವಿದೆ. ಆದರೆ ಕಳೆದ 10 ತಿಂಗಳ (ಜನವರಿಯಿಂದ ಅಕ್ಟೋಬರ್)ಅವಧಿಯಲ್ಲಿ ರಾಜ್ಯದ ಹಲವೆಡೆ ಹೆರಿಗೆ ನೋವು ಕಾಣಿಸಿಕೊಂಡ 635 ಮಹಿಳೆಯರಿಗೆ ಮಾರ್ಗಮಧ್ಯೆ ವಾಹನದಲ್ಲೇ ಹೆರಿಗೆ ಮಾಡಿಸಿ ಜೀವ ಉಳಿಸುವ ಮೂಲಕ ಆರೋಗ್ಯ ಕವಚ ಸಿಬ್ಬಂದಿ ಸಮಯಪ್ರಜ್ಞೆ ಮೆರೆದಿದ್ದಾರೆ. ವಿಶೇಷವೆಂದರೆ ಲಾಕ್​ಡೌನ್ ಸಮಯದಲ್ಲೇ ಆಂಬುಲೆನ್ಸ್​ಗಳಲ್ಲಿ ಹೆಚ್ಚಿನ ಹೆರಿಗೆಗಳಾಗಿವೆ.
ಗರ್ಭಿಣಿಯರಿಗೆ ಹೆರಿಗೆ ನೋವು ಕಾಣಿಸಿದ ತಕ್ಷಣ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗದಿದ್ದಲ್ಲಿ ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಕುತ್ತು ಬರುವಂತಹ ಸಾಧ್ಯತೆಗಳಿರುತ್ತವೆ. ಹೀಗಾಗಿ ಆಂಬುಲೆನ್ಸ್​ನಲ್ಲೇ ಹೆರಿಗೆ ಮಾಡಿಸಿ ತಾಯಿ, ಮಗುವಿನ ಜೀವ ರಕ್ಷಿಸಿರುವ ಆರೋಗ್ಯ ಕವಚ ಸಿಬ್ಬಂದಿ ಕಾರ್ಯ ಶ್ಲಾಘನೆಗೊಳಗಾಗಿದೆ. ಹೆರಿಗೆ ಬಳಿಕವೂ ಸರಿಸಮಯಕ್ಕೆ ಆಸ್ಪತ್ರೆಗೆ ಸೇರಿಸುವ ಕಾರ್ಯದಲ್ಲೂ ಇವರು ಮುಂದಿದ್ದಾರೆ.
ಒಟ್ಟಾರೆ ಪ್ರಕರಣಗಳಲ್ಲಿ ರಾಯಚೂರು ಜಿಲ್ಲೆಯಲ್ಲೇ 81 ಹೆರಿಗೆ ಮಾಡಿಸಲಾಗಿದೆ. 76 ಹೆರಿಗೆ ಪ್ರಕರಣಗಳೊಂದಿಗೆ ಕಲಬುರಗಿ 2ನೇ ಸ್ಥಾನದಲ್ಲಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಆಸ್ಪತ್ರೆಗಳು ಹತ್ತಿರವೇ ಸಿಗುವುದರಿಂದ ಇಂತಹ 11 ಪ್ರಕರಣಗಳಷ್ಟೇ ವರದಿಯಾಗಿವೆ. ಬಳ್ಳಾರಿಯಲ್ಲಿ 54, ಬೆಳಗಾವಿಯಲ್ಲಿ 59, ವಿಜಯಪುರದಲ್ಲಿ 64, ಉತ್ತರ ಕನ್ನಡದಲ್ಲಿ 33 ಹೆರಿಗೆಗಳನ್ನು ಆಂಬುಲೆನ್ಸ್​ನಲ್ಲಿ ಮಾಡಿಸಲಾಗಿದೆ.
ರಾಜ್ಯದಲ್ಲಿ 714 ಆಂಬುಲೆನ್ಸ್
ರಾಜ್ಯದಲ್ಲಿ ಆರೋಗ್ಯ ಕವಚ ಯೋಜನೆಯಡಿ 714 ಆಂಬುಲೆನ್ಸ್​ಗಳು ಕಾರ್ಯನಿರ್ವಹಿಸುತ್ತಿವೆ. 3,500ಕ್ಕೂ ಹೆಚ್ಚು ಶುಶ್ರೂಷಕರು ಹಾಗೂ ಚಾಲಕರು ಕೆಲಸ ಮಾಡುತ್ತಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ 23 ಆಂಬುಲೆನ್ಸ್​ಗಳಿದ್ದು, 94 ಸಿಬ್ಬಂದಿಯಿದ್ದಾರೆ. ಗ್ರಾಮಾಂತರ ಪ್ರದೇಶದಲ್ಲಿ ಆರೋಗ್ಯ ಕವಚ ಯೋಜನೆಯ ಆಂಬುಲೆನ್ಸ್​ಗಳು ತಕ್ಷಣಕ್ಕೆ ಲಭ್ಯವಾಗುತ್ತಿದ್ದು, ಹಲವರ ಪ್ರಾಣ ಉಳಿಸುವಲ್ಲಿ ಹಾಗೂ ಶೀಘ್ರಗತಿಯಲ್ಲಿ ಚಿಕಿತ್ಸೆ ಸಿಗುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಅದರಲ್ಲೂ ಕೋವಿಡ್ ಸಂದರ್ಭದಲ್ಲೂ ಸಿಬ್ಬಂದಿ ಸೋಂಕಿಗೆ ಹೆದರದೆ ಪಿಪಿಇ ಕಿಟ್ ಹಾಕಿಕೊಂಡು ಹೆರಿಗೆ ಮಾಡಿಸಿದ್ದಾರೆ.
ಗರ್ಭಿಣಿಯರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಾಗ ಗರ್ಭಿಣಿಯರ ಕುಟುಂಬಸ್ಥರ ಸಹಾಯ ಪಡೆದು ತಾಯಿ, ಮಗುವಿನ ಆರೋಗ್ಯದ ದೃಷ್ಟಿಯಿಂದ ಸಿಬ್ಬಂದಿ ಅನಿವಾರ್ಯವಾಗಿ ಆಂಬುಲೆನ್ಸ್​ನಲ್ಲಿಯೇ ಹೆರಿಗೆ ಮಾಡಿಸುತ್ತಾರೆ. ಸಿಬ್ಬಂದಿ ಸಮಯಪ್ರಜ್ಞೆಯಿಂದ ಸಾಕಷ್ಟು ಜನರ ಪ್ರಾಣ ಉಳಿಯುವಂತಾಗಿದೆ.
| ಗಣಪತಿ, ಜಿಲ್ಲಾ ವ್ಯವಸ್ಥಾಪಕಆರೋಗ್ಯ ಕವಚ ಯೋಜನೆ, ರಾಯಚೂರು.
Web Exclusive| ಸದ್ದುಮಾಡುತ್ತಿರುವ ಬ್ಯಾಗ್ ಸಂಸ್ಥೆಗಳು: ಚುನಾವಣೆ ಸಮಯದಲ್ಲಷ್ಟೇ ಸಕ್ರಿಯ, ವಹಿವಾಟು ಶೂನ್ಯ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:14 − eight =
Remember me
