|ಮಂಜುನಾಥ ಎಂ.ಎನ್.ಚಿಕ್ಕಮಗಳೂರು
ಕಳೆದೆರಡು ವರ್ಷಗಳಿಂದ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ, ನಂತರ ಕರೊನಾ ಲಾಕ್​ಡೌನ್​ನಿಂದ ತತ್ತರಿಸಿದ್ದ ಕಾಫಿ ಬೆಳೆಗಾರರಿಗೆ ಈಗ ಅಕಾಲಿಕ ಮಳೆ ಗಾಯದ ಮೇಲೆ ಬರೆ ಎಳೆದಿದೆ. ಕಾಫಿ ಬೆಳೆಯುವ ಪ್ರದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಜನವರಿ ಸಮಯದಲ್ಲಿ ಇಷ್ಟೊಂದು ಮಳೆಯಾಗಿರಲಿಲ್ಲ. ಸರಾಸರಿ ಒಂದು ಇಂಚಿನಿಂದ ಎರಡು ಇಂಚು ಮಳೆಯಾಗುತ್ತಿದ್ದರೆ, ಕೆಲವು ಕಡೆಗಳಲ್ಲಿ ಮೂರರಿಂದ ನಾಲ್ಕು ಇಂಚುಗಳಷ್ಟೂ ಮಳೆಯಾಗಿದೆ. ಇನ್ನೂ ಎರಡು ದಿನ ಮಳೆಯಾಗುತ್ತದೆ ಎನ್ನುವ ವರದಿಯಿಂದ ಬೆಳೆಗಾರರು ದಿಗಿಲುಗೊಂಡಿದ್ದಾರೆ.
ಮಳೆಯಿಂದ ಕಾಫಿ ಒಣಗಿಸಲು ಸಾಧ್ಯವಾಗುತ್ತಿಲ್ಲ. ಅನೇ ಕಡೆ ಕೊಯ್ದಿಟ್ಟ ಕಾಫಿ ಕೊಚ್ಚಿ ಹೋಗಿದೆ. ಗಿಡದಲ್ಲಿ ಉಳಿದಿರುವ ಕಾಫಿ ಹಣ್ಣನ್ನು ಕೊಯ್ಯಲು ಆಗುತ್ತಿಲ್ಲ. ಕಾಫಿ ಉದುರಿರುವುದರಿಂದ ಅವುಗಳನ್ನು ಹೆಕ್ಕಲು ಸಾಧ್ಯವಾಗದೇ ಕಾಫಿಯು ಗುಣಮಟ್ಟ ಕಳೆದುಕೊಳ್ಳುವ ಸಾಧ್ಯತೆ ಇದೆ. ನಡುವೆ ಪರ್ಯಾಯ ವ್ಯವಸ್ಥೆ ಇಲ್ಲದೆ ಬೆಳೆಗಾರರು ಅತಂತ್ರ ಸ್ಥಿತಿ ಅನುಭವಿಸುತ್ತಿದ್ದಾರೆ.
ಕಾಫಿ ಕೊಯ್ಯುವ ಈ ಹಂತದಲ್ಲೇ ಮಳೆ ಹೊಡೆತದಿಂದ ಬೆಳೆಗಾರರು ತತ್ತರಿಸಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಅರೇಬಿಕಾ ಕಾಫಿಯ ಶೇ.50ರಷ್ಟು ಕೊಯ್ಲು ಮುಗಿದಿದೆ. ರೋಬಸ್ಟಾ ಫಸಲಂತೂ ಗಿಡದಲ್ಲೇ ಉಳಿದಿದೆ. ಮೂರು ದಿನಗಳಿಂದ ಸತತವಾಗಿ ಬೀಳುತ್ತಿರುವ ಮಳೆಯ ತೀವ್ರತೆಯಿಂದ ಎರಡೂ ಫಸಲು ಉದುರುತ್ತಿದೆ. ಕಾರ್ವಿುಕರ ಕೊರತೆ ಕಳೆದ ಹಲವಾರು ವರ್ಷಗಳಿಂದ ಕಾಡುತ್ತಲೇ ಇರುವುದರಿಂದ ಕೊಯ್ಲು ಸಮಯದಲ್ಲಿ ಉದುರಿದ ಕಾಫಿಯನ್ನು ಮೊದಲಿನಂತೆ ಹೆಕ್ಕುವುದನ್ನು ಕೈಬಿಟ್ಟಿದ್ದಾರೆ. ಅಕಾಲಿಕ ಮಳೆಯಿಂದ ಕಾಫಿ ಗಿಡಗಳಲ್ಲೂ ಮೊಗ್ಗು-ಹೂವು ಅರಳುವುದರಿಂದ ಅವು ಉಳಿಯದೆ ಮುಂದಿನ ವರ್ಷದ ಇಳುವರಿ ಮೇಲೆ ತೀವ್ರ ದುಷ್ಪರಿಣಾಮವಾಗಲಿದೆ ಎನ್ನುವ ಅಭಿಪ್ರಾಯ ಕೇಳಿಬಂದಿದೆ.
2015ರಿಂದ 2018ರವರೆಗೆ ಅನಾವೃಷ್ಟಿಯಿಂದ ಕಾಫಿ ಇಳುವರಿ ಕುಸಿದಿದೆ. ಕಳೆದ ವರ್ಷ ಅತಿವೃಷ್ಟಿಯಿಂದ ಅನೇಕ ಕಡೆ ಭೂಕುಸಿತ ಸಂಭವಿಸಿ ತೋಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳೇ ನಾಮಾವಶೇಷವಾಗಿದ್ದವು. 2018-19ರಲ್ಲಿ ಶೇ.35 ರಷ್ಟು ಕಾಫಿ ಉತ್ಪಾದನೆ ಕುಂಠಿತವಾಗಿದ್ದರೆ, 2019-20ರಲ್ಲಿ ಸರಾಸರಿ ಶೇ.50ರಷ್ಟು ಇಳುವರಿ ಪ್ರಮಾಣ ಕುಸಿದಿತ್ತು. ಕಳೆದ ಮಳೆಗಾಲದ ಹೊಡೆತಕ್ಕೆ ಅರ್ಧದಷ್ಟು ಬೆಳೆ ನಾಶವಾಗಿದೆ. ಕಾಡಾನೆಗಳ ಹಾವಳಿ ಕೂಡ ಬೆಳೆಗಾರರನ್ನು ಹೈರಾಣಾಗಿಸಿದೆ.
ಕರೊನಾ ಹಿನ್ನೆಲೆಯಲ್ಲಿ ಸಭೆ ಕರೆದು ರ್ಚಚಿಸಲಾಗದ ಕಾರಣಕ್ಕೆ ಸೆ.4ರಂದು ಆಯೋಜಿಸಿದ್ದ ವೆಬಿನಾರ್​ನಲ್ಲಿ ಚಿಕ್ಕಮಗಳೂರು, ಕೊಡಗು, ಹಾಸನ ಜಿಲ್ಲೆಯ ಬೆಳೆಗಾರ ಮುಖಂಡರು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಜತೆ ಸಮಸ್ಯೆ ಬಗ್ಗೆ ರ್ಚಚಿಸಿದ್ದು, ಸಕಾರಾತ್ಮಕ ಭರವಸೆಯೂ ಸಿಕ್ಕಿತ್ತು. ಸಂಸದರಾದ ಶೋಭಾ ಕರಂದ್ಲಾಜೆ ಹಾಗೂ ಪ್ರತಾಪ ಸಿಂಹ ಸಂಸತ್ತಿನಲ್ಲಿ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದ್ದರು. ಕೇಂದ್ರದ ಪರಿಹಾರ ನಿರೀಕ್ಷಿಸಿದ್ದ ಬೆಳೆಗಾರರಿಗೆ ನಿರಾಸೆಯೇ ಕಾದಿತ್ತು. ಇದೀಗ ಮುಂದಿನ ಬಜೆಟ್​ನತ್ತ ಬೊಟ್ಟು ಮಾಡಿ ತೋರಿಸಲಾಗುತ್ತಿದೆ.
ಬೆಳೆಗಾರರು ಯಾವು ರೀತಿಯಲ್ಲೂ ನಷ್ಟ ಭರಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿಯಲ್ಲಿರುವಾಗಲೇ ಮತ್ತೊಮ್ಮೆ ಕಾಫಿ ಮಂಡಳಿ, ತೋಟಗಾರಿಕೆ ಇಲಾಖೆಗಳು ನಷ್ಟದ ಸಮೀಕ್ಷೆ ನಡೆಸಿ ಕೇಂದ್ರಕ್ಕೆ ವರದಿ ನೀಡುವ ಕಾಲ ಸನ್ನಿಹಿತವಾಗಿದೆ. ಶುಕ್ರವಾರ ಹಾಸನದಲ್ಲಿ ಕೆಜಿಎಫ್ ಮುಖಂಡರು ಜಿಲ್ಲಾಧಿಕಾರಿ ಭೇಟಿ ಮಾಡಿ ಸಮೀಕ್ಷೆ ಹಾಗೂ ಪರಿಹಾರ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕೋರಿದ್ದು, ಸಮೀಕ್ಷೆ ನಡೆಸುವ ಭರವಸೆ ದೊರಕಿದೆ. ಈ ಜಿಲ್ಲೆ ಹಾಗೂ ಕೊಡಗಿನಲ್ಲೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ. ಎನ್​ಡಿಆರ್​ಎಫ್ ಸ್ಕೀಮ್ಲ್ಲಿ ಹೆಕ್ಟೇರ್​ಗೆ 18 ಸಾವಿರ ರೂ.ನಂತೆ ಗರಿಷ್ಠ ಎರಡು ಹೆಕ್ಟೇರ್​ಗೆ ಪರಿಹಾರ ನೀಡಲಾಗುತ್ತಿದೆ. ಇದು ಅವೈಜ್ಞಾನಿಕವಾಗಿದ್ದು, ವೈಜ್ಞಾನಿಕ ಪರಿಹಾರ ನೀಡಬೇಕು ಎಂದು ಕೆಜಿಎಫ್ ಕೇಂದ್ರದ ಮುಂದೆ ಬೇಡಿಕೆ ಇಟ್ಟಿದೆ.
ಬೆಳೆಗಾರರ ಸಮಸ್ಯೆ ಪರಾಕಾಷ್ಠೆ ತಲುಪಿದ್ದರೂ ಕೇಂದ್ರ ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ಬೆಳೆಗಾರರು ಗತ್ಯಂತರವಿಲ್ಲದೆ ಪ್ರತಿಭಟನೆ ಹಾದಿ ಹಿಡಿಯುತ್ತಿದ್ದಾರೆ. ಕಾಫಿ ವಲಯದ ಪುನಶ್ಚೇತನಕ್ಕೆ ಪೂರಕವಾಗಿ ಸರ್ಕಾರ ಸೂಕ್ತ ರೀತಿಯಲ್ಲಿ ಪ್ಯಾಕೇಜ್ ಘೊಷಣೆ ಮಾಡುವ ಮೂಲಕ ಸ್ಪಂದಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ.
ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಶೇ.98.8ರಷ್ಟು ಸಣ್ಣ ಕಾಫಿ ಬೆಳೆಗಾರರಿದ್ದು, ಶೇ.1.2ರಷ್ಟು ಮಂದಿ ಮಾತ್ರ ದೊಡ್ಡ ಬೆಳೆಗಾರರು. ಕಾಫಿ ಕೃಷಿ ವಲಯ ದೇಶಾದ್ಯಂತ 6.6 ಲಕ್ಷ ಮಂದಿಗೆ ಉದ್ಯೋಗ ನೀಡಿದ್ದರೆ, ಅದರಲ್ಲಿ ಕರ್ನಾಟಕದ ಕಾರ್ವಿುಕರೇ 5 ಲಕ್ಷದಷ್ಟಿದ್ದಾರೆ. ತೋಟಗಳ ನಿರ್ವಹಣೆ ವೆಚ್ಚವೂ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ಅರೇಬಿಕಾ ಬೆಳೆಯಲ್ಲಿ ಆದಾಯಕ್ಕಿಂತ ನಿರ್ವಹಣಾ ವೆಚ್ಚವೇ ಹೆಚ್ಚಾಗಿದೆ. ಕಾಫಿ ಬೆಳೆಗಾರರೆಲ್ಲ ಸಿರಿವಂತರು ಎನ್ನುವ ಮನಸ್ಥಿತಿ ಮೊದಲಿನಿಂದ ಇದೆ. ಇಡೀ ವಲಯವೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರೂ ಯಾವುದೇ ಸ್ಪಂದನೆ ದೊರೆಯದಿರಲು ಇದೇ ಕಾರಣ ಎಂದು ಹೇಳಲಾಗುತ್ತಿದೆ.
ಚಿಕ್ಕಮಗಳೂರು, ಕೊಡಗು, ಹಾಸನ ಜಿಲ್ಲೆಯ ಪಶ್ಚಿಮಘಟ್ಟ ಪ್ರದೇಶದ ಅತ್ಯಂತ ಪರಿಸರ ಸೂಕ್ಷ್ಮ ಹಾಗೂ ಅಪರೂಪದ ಜೀವವೈವಿಧ್ಯತಾ ತಾಣದಲ್ಲೇ ಹೆಚ್ಚಾಗಿ ಕಾಫಿ ಬೆಳೆಯಲಾಗುತ್ತಿದೆ. ಈ ಮೂರು ಜಿಲ್ಲೆಗಳಲ್ಲಿ ಒಟ್ಟು 1,09,128 ಹೆಕ್ಟೇರ್ ಪ್ರದೇಶದಲ್ಲಿ ಅರೇಬಿಕಾ ಬೆಳೆಯುತ್ತಿದ್ದರೆ, 1,41,175 ಹೆ. ಪ್ರದೇಶದಲ್ಲಿ ರೋಬಸ್ಟಾ ಬೆಳೆಯಲಾಗುತ್ತಿದೆ. ದೇಶದ ಉತ್ಪಾದನೆಯಲ್ಲಿ ಶೇ.70ರಷ್ಟು ಕಾಫಿಯನ್ನು ಕರ್ನಾಟಕವೇ ಉತ್ಪಾದನೆ ಮಾಡುತ್ತಿದೆ. ಶೇ.30 ಭಾಗದ ಕೊಡುಗೆ ಕೇರಳ, ತಮಿಳುನಾಡು, ಈಶಾನ್ಯ ಭಾಗದ ರಾಜ್ಯಗಳದ್ದು. ಪ್ರತಿವರ್ಷ ಕೇಂದ್ರ ಸರ್ಕಾರಕ್ಕೆ 6 ಸಾವಿರ ಕೋಟಿ ರೂ. ವಿದೇಶಿ ವಿನಿಮಯ ತಂದುಕೊಡುತ್ತಿದೆ. ಇಷ್ಟಾಗಿಯೂ ಕೇಂದ್ರ ಸ್ಪಂದಿಸದಿರುವುದು ಬೆಳೆಗಾರರಿಗೆ ಅರ್ಥವಾಗದ ಪ್ರಶ್ನೆಯಾಗಿದೆ.
ಅಕಾಲಿಕ ಮಳೆಯಿಂದ ಕಾಫಿ ಬೆಳೆಗಾರರ ಸ್ಥಿತಿ ಶೋಚನೀಯವಾಗಿದ್ದು, ಸರ್ಕಾರ ತಕ್ಷಣ ಸೂಕ್ತ ಪ್ಯಾಕೇಜ್ ಘೊಷಣೆ ಮಾಡಿ ಬೆಳೆಗಾರರ ನೆರವಿಗೆ ಧಾವಿಸಬೇಕು. ಇಲ್ಲದಿದ್ದಲ್ಲಿ 5ರಿಂದ 6 ಕೋಟಿ ರೂ. ವಿದೇಶಿ ವಿನಿಮಯ ತಂದುಕೊಡುವ ಕಾಫಿ ಕೃಷಿ ವಲಯ ಚೇತರಿಸಿಕೊಳ್ಳಲು ಸಾಧ್ಯವೇ ಇಲ್ಲ ಎನ್ನುವ ಸ್ಥಿತಿ ತಲೆದೋರಬಹುದು.
|ಎಚ್.ಟಿ.ಮೋಹನ್​ಕುಮಾರ್ಕರ್ನಾಟಕ ಬೆಳೆಗಾರರ ಒಕ್ಕೂಟ ಅಧ್ಯಕ್ಷ
ಟ್ರಿಲಿಯನ್ ಆಸೆ ತೋರಿಸಿ ವಂಚಿಸಿದ ಚೈನ್‌ಲಿಂಕ್ ಕಂಪನಿ ಮಾಲೀಕ ಸೆರೆ

ಸೆಕ್ಸ್​ ಮಾಡುವಾಗ ಉಸಿರುಗಟ್ಟಿ ಸತ್ತೇ ಹೋದಳು… ಬ್ಯಾಚಲರ್​ ಮನೆಯಲ್ಲಿ ವಿವಾಹಿತೆ ಸಾವು!

ಸನ್ನಿ ಲಿಯೋನ್​ ಸಾಹಸಗಳ ಹಿಂದಿರುವ ಆ ಟ್ಯಾಲೆಂಟೆಡ್​ ಯಂಗ್​ಮ್ಯಾನ್​ ಇವರೇ..

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:13 − five =
Remember me
