|ಸುಭಾಸ ಧೂಪದಹೊಂಡಕಾರವಾರ
ಕರಾವಳಿ ನಿಯಂತ್ರಣ ವಲಯ (ಸಿಆರ್​ಝಡ್) ಕಾಯ್ದೆಗೆ ತಿದ್ದುಪಡಿಯಾಗಿ ಎರಡು ವರ್ಷವಾದರೂ ಹೊಸ ನಕ್ಷೆ (ಸಿಝುಡ್​ಎಂಪಿ) ಸಿದ್ಧವಾಗದ ಕಾರಣ ಹೊಸ ಯೋಜನೆಗಳ ಜಾರಿಗೆ ತೊಡಕುಂಟಾಗಿದೆ. ಸಿಆರ್​ಝಡ್ ಕಾಯ್ದೆಗೆ 2019 ರಲ್ಲಿ ತಿದ್ದುಪಡಿ ತರಲಾಗಿತ್ತು. ಹಲವು ನಿಯಮಾವಳಿಗಳನ್ನು ಸರಳೀಕರಣಗೊಳಿಸಲಾಗಿದೆ. ಮೀನುಗಾರರ ಮನೆ ನಿರ್ವಣಕ್ಕೆ, ಪರಿಸರ ಪ್ರವಾಸೋದ್ಯಮ ಅಭಿವೃದ್ಧಿಗೆ ಅನುಕೂಲವಾಗುವಂಥ ಅಂಶಗಳು ತಿದ್ದುಪಡಿಯಲ್ಲಿವೆ. ಆದರೆ, ಇದುವರೆಗೂ ಹೊಸ ಕಾಯ್ದೆಯಂತೆ ನಕ್ಷೆ ಸಿದ್ಧವಾಗಿ ಅನುಮೋದನೆಯಾಗಿಲ್ಲ. ಇದರಿಂದ ಹಲವು ಹೊಸ ಕಾಮಗಾರಿಗಳ ಜಾರಿಗೂ ಅಡಚಣೆ ಉಂಟಾಗುತ್ತಿದೆ.
2011ರಲ್ಲಿ ತಿದ್ದುಪಡಿ ಮಾಡಿದ ಸಿಆರ್​ಝಡ್ ಕಾಯ್ದೆಗೆ ಸಂಬಂಧಿಸಿದಂತೆ 7 ವರ್ಷಗಳ ನಂತರ ಎಂದರೆ 2018 ರಲ್ಲಿ ನಕ್ಷೆ ಸಿದ್ಧವಾಗಿ ಅನುಮೋದನೆಯಾಗಿತ್ತು. ಹೊಸ ನಕ್ಷೆ ಬಂದ ಒಂದೇ ವರ್ಷಕ್ಕೆ ಕಾಯ್ದೆಯಲ್ಲಿ ಮತ್ತೆ ಬದಲಾವಣೆಯಾಗಿದೆ. ಆದರೆ, ನಕ್ಷೆ ಬಂದ ಹೊರತು ಹೊಸ ಕಾಯ್ದೆ ಜಾರಿ ಮಾಡಬಾರದು ಎಂಬ ನಿಯಮ ಇರುವುದರಿಂದ ಹಲವು ಪ್ರವಾಸೋದ್ಯಮ ಕಾಮಗಾರಿಗಳು ಅನುಮೋದನೆಗೆ ಬಾಕಿ ಉಳಿದಿವೆ.
ಪರಿಸರ ಹಾಗೂ ಅರಣ್ಯ ಮಂತ್ರಾಲಯದ ಅಡಿ ಇರುವ ಚೆನ್ನೈನ ರಾಷ್ಟ್ರೀಯ ಸುಸ್ಥಿರ ಕರಾವಳಿ ನಿರ್ವಹಣಾ ಕೇಂದ್ರಕ್ಕೆ (ಎನ್​ಸಿಎಸ್​ಸಿಎಂ) ರಾಜ್ಯದ ಸಿಆರ್​ಝಡ್ ನಕ್ಷೆ ಸಿದ್ಧ ಮಾಡುವ ಜವಾಬ್ದಾರಿ ವಹಿಸಲಾಗಿದೆ. ಉತ್ತರ ಕನ್ನಡದ 150 ಕಿಮೀ, ಉಡುಪಿಯ 98 ಕಿಮೀ ಹಾಗೂ ದಕ್ಷಿಣ ಕನ್ನಡದ 42 ಕಿಮೀ ಕಡಲ ತೀರ ಪ್ರದೇಶದ ಕರಡು ನಕ್ಷೆಯನ್ನು ಅದೇ ಸಂಸ್ಥೆ ಸಿದ್ಧ ಮಾಡಿ ಕೊಡಬೇಕು. ನಂತರ ಅದಕ್ಕೆ ಆಕ್ಷೇಪಣೆಗಳನ್ನು ಆಹ್ವಾನಿಸಲಾಗುತ್ತದೆ. ಕೊನೆಯಲ್ಲಿ ನಕ್ಷೆಗೆ ಅನುಮೋದನೆ ದೊರೆಯುತ್ತದೆ.
ಕರಾವಳಿಯ ಜೀವ ವೈವಿಧ್ಯ ರಕ್ಷಣೆಗಾಗಿ ಜಾರಿಗೆ ತಂದಿರುವುದು ಸಿಆರ್​ಝಡ್ ಕಾಯ್ದೆ. ಮೊದಲಿನಿಂದಲೇ ಇದ್ದ ಕಾಯ್ದೆಗೆ ಕಾಲಕ್ಕೆ ತಕ್ಕಂತೆ ಕೆಲ ತಿದ್ದುಪಡಿಗಳನ್ನು ತರಲಾಗುತ್ತಿದೆ. ಸಿಆರ್​ಝಡ್ ಕಾಯ್ದೆಯ ಬಗ್ಗೆ ಜನರಲ್ಲಿ ಹಲವು ಗೊಂದಲಗಳಿವೆ. ಆಡಳಿತ ತನಗೆ ಬೇಕಾದ ರೀತಿಯಲ್ಲಿ ಕಾಯ್ದೆಯನ್ನು ಬಳಸಿಕೊಳ್ಳುತ್ತದೆ ಎಂಬ ದೂರುಗಳಿವೆ. ಬಂದರುಗಳ ಅಭಿವೃದ್ಧಿ, ಪ್ರವಾಸೋದ್ಯಮ ಅಭಿವೃದ್ಧಿ ಹೀಗೆ ಪ್ರತಿಯೊಂದು ಕಾಮಗಾರಿಗಳಿಗೂ ಸಿಆರ್​ಝಡ್ ವಿಷಯ ಪ್ರಸ್ತಾಪವಾಗುತ್ತಿದೆ. ಕಾಯ್ದೆಯ ಬಗ್ಗೆ ಸ್ಪಷ್ಟತೆ ಮೂಡಿಸುವ ನಕ್ಷೆಯೂ ಸಿದ್ಧವಾಗದೇ ಇರುವುದು ಇನ್ನಷ್ಟು ಗೊಂದಲಕ್ಕೆ ಕಾರಣವಾಗಿದೆ.
2019ರ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ನಕ್ಷೆ ತಯಾರು ಮಾಡಲು ಬೇಕಾದ ಎಲ್ಲ ಔಟ್​ಪುಟ್​ಗಳನ್ನು ನಾವು ಸರ್ಕಾರದಿಂದ ಅನುಮೋದಿತ ನಕ್ಷೆಯನ್ನು ಸಿದ್ಧ ಮಾಡುವ ಸಂಸ್ಥೆ ಚೆನ್ನೈನ ಎನ್​ಸಿಎಸ್​ಸಿಎಂಗೆ ನೀಡಿದ್ದೇವೆ. ಶೀಘ್ರ ನಕ್ಷೆ ಸಿದ್ಧವಾಗಿ ಬರುವ ನಿರೀಕ್ಷೆ ಇದೆ.
|ಪ್ರಸನ್ನ ಪಟಗಾರಸಿಆರ್​ಝಡ್ ಅಧಿಕಾರಿ, ಕಾರವಾರ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 8 =
Remember me
