| ಎ.ಎನ್. ಪ್ರಸನ್ನ ಚಿಕ್ಕಮಗಳೂರು
ಸಹಪಠ್ಯ ಕ್ರಮದ ಚಟುವಟಿಕೆಗಳಾದ ಸಂಗೀತ, ನೃತ್ಯ, ತಾಳವಾದ್ಯ ಪರೀಕ್ಷೆಗಳು ಲಾಕ್​ಡೌನ್​ನಿಂದ ಮುಂದಕ್ಕೆ ಹೋಗಿದ್ದು, ಜಿಲ್ಲೆಯ 500 ಸೇರಿ ರಾಜ್ಯದ 15 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸರ್ಕಾರದ ಹಸಿರು ನಿಶಾನೆಗಾಗಿ ಕಾತರರಾಗಿದ್ದಾರೆ.
ಮೇನಲ್ಲಿ ನಡೆಯಬೇಕಿದ್ದ ಪರೀಕ್ಷೆ ಲಾಕ್​ಡೌನ್​ನಿಂದ ಮುಂದೂಡಿದ್ದರಿಂದ ಶಿಕ್ಷಕರು ನೃತ್ಯದ ಅಭ್ಯಾಸ ನಿಲ್ಲಿಸಿದ್ದಾರೆ. ಕೆಲವು ವಿದ್ಯಾರ್ಥಿಗಳು ಮನೆಗಳಲ್ಲಿ ಅಭ್ಯಾಸ ಮುಂದುವರಿಸಿದ್ದರೆ ಹಲವರು ಕೈಚೆಲ್ಲಿ ಒಂದು ವರ್ಷ ಮುಂದೆ ಹೋಗುತ್ತದೇನೊ ಎನ್ನುವ ಗೊಂದಲದಲ್ಲಿದ್ದಾರೆ.
ಪ್ರತಿ ವರ್ಷ ಶೈಕ್ಷಣಿಕ ವರ್ಷಾಂತ್ಯ ಮೇ ಅಥವಾ ಜೂನ್​ನಲ್ಲಿ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಪರೀಕ್ಷೆ ನಡೆಸುತ್ತಿದ್ದು ಈ ಸಮಯದಲ್ಲಿ ಕರೊನಾ ಲಾಕ್​ಡೌನ್ ಘೊಷಣೆಯಾದ ಕಾರಣ ಮುಂದೂಡಲಾಗಿದೆ. ಅನ್​ಲಾಕ್ ಘೊಷಣೆ ನಂತರ ಎಸ್​ಎಸ್​ಎಲ್​ಸಿ, ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಸರ್ಕಾರ ಯಶಸ್ವಿಯಾಗಿ ನಡೆಸಿ ಪೂರಕ ಪರೀಕ್ಷೆಯೂ ಮುಗಿಯುವ ಹಂತ ತಲುಪಿದೆ. ಆದರೆ ಸಂಗೀತ, ನೃತ್ಯ ಪರೀಕ್ಷೆಗಳನ್ನು ಇನ್ನೂ ನಿಗಿದಪಡಿಸಿಲ್ಲ.
ಕಲಾವಿದರಾಗಿ ರೂಪುಗೊಳ್ಳುವ ಸಲುವಾಗಿ ವಿದ್ಯಾರ್ಥಿ ಜೀವನದಲ್ಲೇ ಮಕ್ಕಳು ಕಲೆ, ಕ್ರೀಡೆ, ಸಂಗೀತ, ಸಾಹಿತ್ಯ, ನೃತ್ಯ, ತಾಳವಾದ್ಯದಂತಹ ಸಹಪಠ್ಯ ಚಟುವಟಿಕೆಯತ್ತ ಹೆಜ್ಜೆ ಹಾಕಿರುತ್ತಾರೆ. ಕೆಲವರು ಇದನ್ನೇ ವೃತ್ತಿಯಾಗಿಸಿಕೊಂಡು ಜೀವನ ನಿರ್ವಹಣೆ ಮಾಡುವ ಕನಸು ಕಂಡಿರುತ್ತಾರೆ. ಹಲವು ವಿದ್ಯಾರ್ಥಿಗಳು ಜ್ಯೂನಿಯರ್, ಸೀನಿಯರ್ ಮತ್ತು ವಿದ್ವತ್ ಪರೀಕ್ಷೆಯನ್ನು ತೆಗೆದುಕೊಂಡಿದ್ದು ಅದಕ್ಕಾಗಿ ವರ್ಷಾನುಗಟ್ಟಲೆ ಶ್ರಮಪಟ್ಟು ಅಭ್ಯಾಸ ಮಾಡಿ ತಯಾರಾಗಿದ್ದಾರೆ.ಇದನ್ನೂ ಓದಿ:Web Exclusive: ಅಪೌಷ್ಟಿಕತೆ ಮರಣ ಪ್ರಮಾಣ ತಗ್ಗಿಸಲು &#8216;ಮೀನು&#8217; ಪ್ರಯೋಗ
10ನೇ ವರ್ಷದ ನಂತರ ಈ ಪರೀಕ್ಷೆಗಳಿಗೆ ಅರ್ಹತೆ ಪಡೆದು ಶೈಕ್ಷಣಿಕ ಪಠ್ಯಕ್ರಮದ ಜತೆ ಹಂತ ಹಂತವಾಗಿ ಪೂರ್ಣಗೊಳಿಸಿಕೊಂಡು ಉನ್ನತ ಶಿಕ್ಷಣಕ್ಕೂ ಮುನ್ನ ವಿದ್ವತ್ ಪಡೆಯಲು ಗುರಿ ಹೊಂದಿರುತ್ತಾರೆ. ಈ ಸಂದರ್ಭದಲ್ಲಿ ಪರೀಕ್ಷೆ ವಿಳಂಬದಿಂದ ಮಕ್ಕಳ ಗುರಿಸಾಧನೆಗೆ ತೊಡಕಾಗುತ್ತಿದೆ. ಪರೀಕ್ಷೆ ನಡೆಸುವ ಹೊಣೆ ಹೊತ್ತಿರುವ ಪ್ರೌಢಶಿಕ್ಷಣ ಇಲಾಖೆ ಇತರೆ ಪರೀಕ್ಷಾ ವಿಭಾಗದಿಂದ ಶಾಲೆಗಳು ತೆರೆಯುವ ಮುನ್ನಾ ಪರೀಕ್ಷೆ ನಡೆಸಿದರೆ ಮಕ್ಕಳಿಗೆ ಅನುಕೂಲವಾಗುತ್ತದೆ ಎಂಬುದು ಸಂಗೀತ, ನೃತ್ಯ ಶಿಕ್ಷಕರ ಅಭಿಪ್ರಾಯ.
ಫೆಬ್ರವರಿ, ಮಾರ್ಚ್​ವರೆಗೂ ತರಬೇತಿ ನೀಡಿ ಪರೀಕ್ಷೆಗಾಗಿ ವಿದ್ಯಾರ್ಥಿಗಳನ್ನು ತಯಾರಿ ಮಾಡಲಾಗಿತ್ತು. ಶಾಲಾ-ಕಾಲೇಜುಗಳಲ್ಲಿ ಈಗಾಗಲೆ ಆನ್​ಲೈನ್ ಪಾಠ ಪ್ರವಚನಗಳು ಆರಂಭವಾಗಿರುವುದರಿಂದ ಈ ಪರೀಕ್ಷೆ ತೆಗೆದುಕೊಂಡಿರುವ ಮಕ್ಕಳಿಗೆ ಇತ್ತ ಓದಿನ ಕಡೆಯೂ ಮನಸ್ಸು ಸಂಪೂರ್ಣವಾಗಿ ಸೆಳೆಯದೆ ಗೊಂದಲದಲ್ಲಿ ಸಿಲುಕಿದ್ದಾರೆ. ಶೀಘ್ರದಲ್ಲಿ ಪರೀಕ್ಷೆ ದಿನಾಂಕ ಪ್ರಕಟಿಸಿದರೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಅನುಕೂಲವಾಗುತ್ತದೆ ಎಂದು ಕರ್ನಾಟಕ ಶಾಸ್ತ್ರೀಯ ನೃತ್ಯ ಕಲಾವಿದರ ಒಕ್ಕೂಟ ಸಚಿವ ಸುರೇಶ್​ಕುಮಾರ್ ಅವರಿಗೂ ಮನವಿ ಮಾಡಿದ್ದಾರೆ.ಇದನ್ನೂ ಓದಿ:Web Exclusive: ಬಂಜರು ಭೂಮಿಗೆ ನ್ಯಾಯ ನೀಡಿದ ವಕೀಲ; ಬಂಗಾರದ ಬೆಳೆ ತೆಗೆದ ಸಾಧಕ
ಸಾಮಾನ್ಯವಾಗಿ ಸಂಗೀತ ಪರೀಕ್ಷೆ 15 ದಿನಗಳ ಕಾಲ ನಡೆಯುತ್ತದೆ. ಈಗ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ತಯಾರು ಮಾಡಲು ತರಬೇತಿಗೆ ಒಂದು ತಿಂಗಳಾದರೂ ಬೇಕು. ಹೀಗಾಗಿ ಅಕ್ಟೋಬರ್​ನಲ್ಲೇ ಪರೀಕ್ಷೆ ದಿನಾಂಕ ಪ್ರಕಟಗೊಳಿಸಿ ತರಬೇತಿ ತರಗತಿಗೆ ಅವಕಾಶ ಕಲ್ಪಿಸಿ ಪರೀಕ್ಷೆ ನಡೆಸಿದರೆ ತರಬೇತಿಗೂ ಕೊಂಚ ಒಳಿತಾಗಲಿದೆ. ಒಂದು ವರ್ಷ ವ್ಯಯವಾಗುವುದೂ ತಪ್ಪಿ ವಿದ್ಯಾರ್ಥಿಗಳ ಭವಿಷ್ಯದ ಶಿಕ್ಷಣಕ್ಕೆ ಹೆಚ್ಚು ಅನುಕೂಲವಾಗಲಿದೆ ಎಂಬುದು ಶಿಕ್ಷಕರು ಹಾಗೂ ಪರೀಕ್ಷಾರ್ಥಿಗಳ ಅಭಿಪ್ರಾಯ. ಅರ್ಜಿ ಸಲ್ಲಿಸದ ವಿದ್ಯಾರ್ಥಿಗಳಿಗೆ ಅವಕಾಶ ಸಿಕ್ಕರೆ ಅನುಕೂಲ ಎಂಬುದು ಇನ್ನೂ ಕೆಲವರ ವಾದ.
ವಿದ್ವತ್ ಅಂತಿಮ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದೇನೆ. ಜೂನ್​ನಲ್ಲಿ ಮುಗಿದಿದ್ದರೆ ಸರ್ಕಾರಿ ಕೆಲಸಕ್ಕೆ ಅರ್ಜಿ ಸಲ್ಲಿಸಲು ಅನುಕೂಲವಾಗುತ್ತಿತ್ತು. 3 ತಿಂಗಳು ವಿಳಂಬವಾಗಿದೆ. ಈಗ ಅಂತಿಮ ವರ್ಷದ ಬಿಕಾಂ ಮಾಡುತ್ತಿದ್ದೇನೆ. ಸರ್ಕಾರ ಅಕ್ಟೋಬರ್​ನಲ್ಲೇ ಪರೀಕ್ಷೆ ಮಾಡಿದರೆ ಒಳಿತು. ಪಾರ್ಟ್ ಟೈಂ ನೃತ್ಯ ಶಾಲೆ ಆರಂಭಿಸಬೇಕಾದರೆ ಮಕ್ಕಳನ್ನು ಕಳಿಸಲು ಪಾಲಕರು ವಿದ್ವತ್ ಆಗಿದೆಯಾ ಎಂದು ಕೇಳುತ್ತಾರೆ. ಹಾಗಾಗಿ ಗೊಂದಲವಾಗಿದೆ.
| ಶರ್ವಿುಳಾ ಪ್ರಸಾದ್​,ವಿದ್ವತ್ ಪರೀಕ್ಷೆ ಕಟ್ಟಿರುವ ವಿದ್ಯಾರ್ಥಿನಿ
ಜಿಲ್ಲೆಯಲ್ಲಿ ಭರತನಾಟ್ಯ, ಸಂಗೀತ, ತಾಳವಾದ್ಯ ಸೇರಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ. ಬೆಂಗಳೂರು, ಮಂಗಳೂರು, ಹಾಸನ, ಉಡುಪಿ ಸೇರಿ ರಾಜ್ಯದಲ್ಲಿ 15 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗಾಗಿ ಎದುರು ನೋಡುತ್ತಿದ್ದಾರೆ. ಸರ್ಕಾರ ತುರ್ತಾಗಿ ಪರೀಕ್ಷೆ ನಡೆಸಿದರೆ ಅನುಕೂಲವಾಗುತ್ತದೆ. ಮುಂದೂಡುತ್ತ ಹೋಗಿ ಶಾಲೆಗಳು ಆರಂಭವಾದರೆ ವಿದ್ಯಾರ್ಥಿಗಳಿಗೆ ಒತ್ತಡ ಹೆಚ್ಚಾಗಿ ಪರೀಕ್ಷೆ ಬರೆಯುವುದು ಕಷ್ಟವಾಗುತ್ತದೆ.
| ಜ್ಯೋತಿ ಪ್ರಕಾಶ್ನೃತ್ಯ ಶಿಕ್ಷಕಿ
ಲಾಕ್​ಡೌನ್​ನಿಂದ 5 ತಿಂಗಳು ತರಬೇತಿ ಇಲ್ಲದಂತಾಗಿದೆ. ತರಗತಿಗಳಿಗೆ ಅವಕಾಶ ಕಲ್ಪಿಸಿ ಪರೀಕ್ಷೆ ನಡೆಸುವ ದಿನಾಂಕವನ್ನು ಸರ್ಕಾರ ಒಂದು ತಿಂಗಳು ಮುನ್ನವೇ ಪ್ರಕಟಿಸಿದರೆ ವಿದ್ಯಾರ್ಥಿಗಳಿಗೆ ತರಬೇತಿ ಪಡೆಯಲು ಅನುಕೂಲವಾಗುತ್ತದೆ.
| ಭಾರ್ಗವ ಶರ್ಮಕೊಪ್ಪ ಭರತನಾಟ್ಯ ಶಿಕ್ಷಕ
Web Exclusive| ಜನಹೃದಯದಲ್ಲಿ ನೆಲೆಗೊಂಡ ವಿಶಿಷ್ಟ ವ್ಯಕ್ತಿತ್ವ: ಸಾಹಿತಿ ಗೊ.ರು.ಚನ್ನಬಸಪ್ಪ ವಿಶೇಷ ಲೇಖನ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:14 + 8 =
Remember me
