|ಇಮಾಮಹುಸೇನ್ ಗೂಡುನವರಬೆಳಗಾವಿ
ಹಳ್ಳಿ ಪ್ರತಿಭೆಯೊಬ್ಬಳಿಗೆ ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಮಿಂಚುವ ಸದವಕಾಶ ಸಿಕ್ಕಿದೆ. ಆದರೆ, ಪೂರ್ವ ತಯಾರಿಗೆ ಬೇಕಿರುವ ಮೌಂಟೇನ್ ಬೈಕ್(ಎಂಟಿಬಿ) ಸೈಕಲ್ ಇಲ್ಲದಿರುವುದು ಆಕೆಯ ಸಾಧನೆಯ ಆಸೆಗೆ ಅಡ್ಡಿಯಾಗಿದೆ. ಕರ್ನಾಟಕ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಷನ್ ಆಶ್ರಯದಲ್ಲಿ ಫೆ. 19ರಿಂದ ಮೂರು ದಿನಗಳ ಕಾಲ ಗದಗದಲ್ಲಿ ರಾಷ್ಟ್ರಮಟ್ಟದ ಎಂಟಿಬಿ ಸೈಕ್ಲಿಂಗ್ ಚಾಂಪಿಯನ್​ಷಿಪ್ ಜರುಗಲಿದ್ದು, ಬೆಳಗಾವಿ ತಾಲೂಕಿನ ಹಂದಿಗನೂರ ಗ್ರಾಮದ ನಕುಶಾ ಪಾಟೀಲ ಆಯ್ಕೆಯಾಗಿದ್ದಾಳೆ. ಆದರೆ, ಟೂರ್ನಿಗೆ ಪೂರಕವಾಗಿ ಅಭ್ಯಾಸ ಕೈಗೊಳ್ಳಲು ಆಕೆಯ ಬಳಿ ಎಂಟಿಬಿ ಸೈಕಲ್ ಇಲ್ಲ.
ನಗರದ ಸರ್ಕಾರಿ ಚಿಂತಾಮಣರಾವ್ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾದ ನಕುಶಾ, ಸೈಕ್ಲಿಂಗ್ ಮಾತ್ರವಲ್ಲದೆ ಜುಡೋ, ಕರಾಟೆ, ವೇಟ್ ಲಿಫ್ಟಿಂಗ್​ನಲ್ಲೂ ಸಾಧನೆ ಮೆರೆಯುತ್ತ ಬಂದಿದ್ದಾಳೆ. ಎಂಟಿಬಿ ಸೈಕ್ಲಿಂಗ್ ಚಾಂಪಿಯನ್​ಷಿಪ್​ನಲ್ಲಿ ಕರ್ನಾಟಕ ತಂಡ ಪ್ರತಿನಿಧಿಸುತ್ತಿರುವ ನಕುಶಾ, ರಾಷ್ಟ್ರ ಮಟ್ಟದಲ್ಲಿ ಭಾರತದ ಕೀರ್ತಿ ಬೆಳಗುವ ಕನಸು ಹೊತ್ತಿದ್ದಾಳೆ. ಅಂದುಕೊಂಡಿರುವ ಗುರಿ ಸಾಧಿಸುವ ನಿಟ್ಟಿನಲ್ಲಿ ನಿತ್ಯವೂ ಬೆವರು ಹರಿಸುತ್ತಿದ್ದಾಳೆ. ಆದರೆ, ಸಾಧನೆ ನಾಗಾಲೋಟದಲ್ಲಿ ಮುನ್ನುಗ್ಗುತ್ತಿರುವ ಆಕೆಗೆ ಬಡತನ ಅಡ್ಡಿಯಾಗಿದೆ.
ವಿವಿಧ ಸ್ಪರ್ಧೆಗಳಲ್ಲಿ ಮಿಂಚು:ಶಾಲಾ ಹಂತದಿಂದಲೇ ವಿವಿಧ ಕ್ರೀಡೆಗಳಲ್ಲಿ ಮಿಂಚುತ್ತಿರುವ ನಕುಶಾ, ಕಳೆದ ವರ್ಷ ಬೆಳಗಾವಿಯಲ್ಲಿ ಜರುಗಿದ 50 ಕೆ.ಜಿ. ವಿಭಾಗದ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಅಗ್ರಸ್ಥಾನ, ಮೈಸೂರಿನ ದಸರಾ ಕ್ರೀಡಾಕೂಟದಲ್ಲಿ 50 ಕೆ.ಜಿ. ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ತೃತೀಯ ಸ್ಥಾನ ಗಳಿಸಿದ್ದಾಳೆ. ಅಲ್ಲದೆ, ಜಿಲ್ಲಾ ಹಂತದಲ್ಲಿ ನಡೆದ ಕರಾಟೆ ಮತ್ತು ಜುಡೋ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಗಳಿಸಿ, ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಳು. ಅಲ್ಲದೆ, ವಿವಿಧ ಸ್ಪರ್ಧೆಗಳಲ್ಲಿ ಹತ್ತಾರು ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾಳೆ.
ಹಳೇ ಸೈಕಲ್​ನಲ್ಲೇ ಅಭ್ಯಾಸ:ತಂದೆ ಪರಶುರಾಮ ಕೃಷಿಕರು. ತಾಯಿ ರೇಣುಕಾ ಗೃಹಿಣಿ. 10 ಕಿ.ಮೀ. ದೂರದ ಹಂದಿಗನೂರಿನಿಂದ ನಿತ್ಯವೂ ಬೆಳಗಾವಿಗೆ ಬಂದು ಜಿಲ್ಲಾ ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡುತ್ತಿದ್ದೇನೆ. ಊರಲ್ಲಿದ್ದಾಗ ಮನೆಯಲ್ಲಿರುವ ಹಳೇ ಸೈಕಲ್ ಬಳಸುತ್ತೇನೆ ಎನ್ನುತ್ತಾಳೆ ನಕುಶಾ. ಗದಗದಲ್ಲಿ ಇತ್ತೀಚೆಗೆ ನಡೆದಿದ್ದ ರಾಜ್ಯಮಟ್ಟದ ಎಂಟಿಬಿ ಸೈಕ್ಲಿಂಗ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದೇನೆ. ಅಲ್ಲಿ ಭಾಗವಹಿಸುವ ಬಹುತೇಕ ಸೈಕ್ಲಿಸ್ಟ್​ಗಳು ಎಂಟಿಬಿ ಸೈಕಲ್​ನಲ್ಲೇ ಅಭ್ಯಾಸ ನಡೆಸುತ್ತಾರೆ. ಆದರೆ, ನನ್ನ ಬಳಿ ಅಂತಹ ಸೈಕಲ್ ಇಲ್ಲ. ಈ ಸೈಕಲ್​ಗೆ ಸುಮಾರು 2 ಲಕ್ಷ ರೂಪಾಯಿ ಇದೆ. ಸರ್ಕಾರ ಅಥವಾ ಸಂಘ-ಸಂಸ್ಥೆಗಳು ನೆರವಾದರೆ ಹೆಚ್ಚಿನ ಸಾಧನೆಗೆ ಅನುಕೂಲವಾಗಲಿದೆ ಎನ್ನುತ್ತಾಳೆ ನಕುಶಾ. (ಮೊ: 6366478936)
ಬಡತನದ ಮಧ್ಯೆಯೂ ನಕುಶಾ ಪಾಟೀಲ ಸೈಕ್ಲಿಂಗ್​ನಲ್ಲಿ ಮಿಂಚುತ್ತಿರುವುದು ಸಂತಸ ತಂದಿದೆ. 15 ದಿನಗಳ ಮಟ್ಟಿಗೆ ಅವಳಿಗೆ ಅಭ್ಯಾಸಕ್ಕೆ ಅನುಕೂಲವಾಗಲೆಂದು, ಇಲಾಖೆ ವತಿಯಿಂದ ಸೈಕಲ್ ನೀಡಲಾಗಿದೆ. ರಾಷ್ಟ್ರಮಟ್ಟದ ಟೂರ್ನಿಯಲ್ಲಿ ಭಾಗವಹಿಸಲು ಬೇರೆ ಕ್ರೀಡಾಪಟುಗಳ ಬಳಿ ಇರುವ ಎಂಟಿಬಿ ಸೈಕಲ್ ಒದಗಿಸಲಾಗುವುದು. ಅವಳಿಗೇ ಪ್ರತ್ಯೇಕವಾಗಿ ಎಂಟಿಬಿ ಸೈಕಲ್ ನೀಡುವ ಕುರಿತು ಕೇಂದ್ರ ಕಚೇರಿ ಗಮನಕ್ಕೆ ತರಲಾಗುವುದು.|ಎಚ್.ಡಿ. ಕೋಳೇಕರಪ್ರಭಾರ ಉಪನಿರ್ದೇಶಕ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಳಗಾವಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + five =
Remember me
