|ಹೀರಾನಾಯ್ಕ ಟಿ.ವಿಜಯಪುರ
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಸರ್ಕಾರ ಖರೀದಿ ಕೇಂದ್ರ ತೆರೆದಿದ್ದರೂ ಕಡಿಮೆ ದರಕ್ಕೆ ಕಡಲೆ ಮಾರಾಟ ಮಾಡಲು ರೈತರು ಹಿಂದೇಟು ಹಾಕುತ್ತಿರುವುದರಿಂದ ಕೇಂದ್ರಗಳು ಭಣಗುಡುತ್ತಿವೆ. ಪ್ರಸಕ್ತ ಸಾಲಿನಲ್ಲಿ ರಾಜ್ಯದ 13 ಜಿಲ್ಲೆಗಳಲ್ಲಿ ಕಡಲೆಕಾಳು ಖರೀದಿಗೆ ಸರ್ಕಾರ ಅನುಮತಿ ನೀಡಿದೆ. ಆದರೆ ಮುಕ್ತ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಇರುವುದರಿಂದ ಖರೀದಿ ಕೇಂದ್ರಗಳತ್ತ ರೈತರು ಸುಳಿಯುತ್ತಿಲ್ಲ.
ಏಳು ಜಿಲ್ಲೆಗಳಲ್ಲಿ ಖರೀದಿ ಶೂನ್ಯ:ರಾಜ್ಯದಲ್ಲಿ ಒಟ್ಟು 410 ಖರೀದಿ ಕೇಂದ್ರಗಳನ್ನು ಸರ್ಕಾರ ತೆರೆದಿದೆ. ಅದರಲ್ಲಿ ಏಳು ಜಿಲ್ಲೆಗಳಲ್ಲಿ ಕಡಲೆ ಖರೀದಿ ಆಗಿಲ್ಲ. ಬೀದರ್, ಚಿತ್ರದುರ್ಗ, ದಾವಣಗೆರೆ, ಕಲಬುರಗಿ, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಕಡಲೆಕಾಳು ಖರೀದಿಯಾಗಿಲ್ಲ. 13 ಜಿಲ್ಲೆಗಳಲ್ಲಿ 27,678 ರೈತರು ಕಡಲೆಕಾಳು ಮಾರಾಟ ಮಾಡಲು ಹೆಸರು ನೋಂದಾಯಿಸಿದ್ದು, ಅದರಲ್ಲಿ 1,994 ರೈತರು ಮಾತ್ರ ಮಾರಾಟ ಮಾಡಿದ್ದಾರೆ.
23 ಸಾವಿರ ಕ್ವಿಂಟಾಲ್ ಖರೀದಿ:ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಾಲ್​ಗೆ 5100 ರೂ. ನಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 23,713 ಕ್ವಿಂಟಾಲ್ ಕಡಲೆಕಾಳು ಖರೀದಿ ಮಾಡಲಾಗಿದೆ. ಬಾಗಲಕೋಟೆ ಜಿಲ್ಲೆಯಲ್ಲಿ 4,812 ಕ್ವಿಂಟಾಲ್, ಬೆಳಗಾವಿ 905, ಬಳ್ಳಾರಿ 1,500, ಧಾರವಾಡ 5,171, ಗದಗ 3,862, ಕೊಪ್ಪಳ 6,989, ರಾಯಚೂರು ಜಿಲ್ಲೆಯಲ್ಲಿ 472 ಕ್ವಿಂಟಾಲ್ ಕಡಲೆ ಖರೀದಿಸಲಾಗಿದೆ ಎಂದು ರಾಜ್ಯ ಸಹಕಾರ ಮಾರಾಟ ಮಂಡಳದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮುಕ್ತ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ:ಈ ಬಾರಿ ರಾಜ್ಯದಲ್ಲಿ ಕಡಲೆಕಾಳು ಇಳುವರಿ ಕುಸಿತಗೊಂಡಿದ್ದು, ಇದರಿಂದಾಗಿ ಮುಕ್ತ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆಗೆ ಮಾರಾಟವಾಗುತ್ತಿದೆ. ಕಡಲೆಕಾಳು ಕ್ವಿಂಟಾಲ್​ಗೆ 5500ರಿಂದ 6000 ರೂ. ವರೆಗೆ ದರ ಇದೆ. ಹಾಗಾಗಿ ರೈತರು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಒಂದು ತಿಂಗಳು ಕಳೆದರೂ ರೈತರು ಖರೀದಿ ಕೇಂದ್ರಗಳತ್ತ ಸುಳಿಯುತ್ತಿಲ್ಲ.
ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಪ್ರತಿ ರೈತರಿಂದ 15 ಕ್ವಿಂಟಾಲ್​ನಂತೆ ಕಡಲೆಕಾಳು ಖರೀದಿಗೆ ಸರ್ಕಾರ ಆದೇಶಿಸಿದೆ. ಮುಕ್ತ ಮಾರುಕಟ್ಟೆಯಲ್ಲಿ ಕಡಲೆ ಕಾಳಿಗೆ ಈ ಬಾರಿ ಉತ್ತಮ ಧಾರಣೆ ಇರುವುದರಿಂದ ರೈತರು ಖರೀದಿ ಕೇಂದ್ರಗಳ ಕಡೆ ಬರುವುದು ಕಡಿಮೆ ಆಗಿದೆ. ವಿಜಯಪುರ ಜಿಲ್ಲೆಯಲ್ಲಿ 43 ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಆದರೆ ಈವರೆಗೆ ಇನ್ನೂ ರೈತರು ಕಡಲೆಕಾಳು ಮಾರಾಟ ಮಾಡಲು ಬಂದಿಲ್ಲ.
|ಡಿ.ಎಂ.ಲಿಂಗರಾಜುಜಿಲ್ಲಾ ವ್ಯವಸ್ಥಾಪಕ, ರಾಜ್ಯ ಸಹಕಾರ ಮಾರಾಟ ಮಂಡಳ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
