|ಜಿತೇಂದ್ರ ಕಾಂಬಳೆಬೆಳಗಾವಿ
ದಿನೇದಿನೆ ಪೆಟ್ರೋಲ್ ದರ ಗಗನಕ್ಕೇರಿರುತ್ತಿರುವುದರಿಂದ ಬಡ ಹಾಗೂ ಮಧ್ಯಮ ವರ್ಗದ ಜನರು ನಷ್ಟ ಅನುಭವಿಸುತ್ತಿದ್ದರೆ, ಇತ್ತ ವಾಹನಗಳಿಗೆ ಭರಿಸಿದ ಪೆಟ್ರೋಲ್​ಅನ್ನು ಕಳ್ಳರು ಕದ್ದೊಯ್ಯುತ್ತಿರುವುದು ಮತ್ತಷ್ಟು ಆತಂಕ ತಂದೊಡ್ಡಿದೆ. ‘ದುಬಾರಿ ದುನಿಯಾ’ದಿಂದ ತತ್ತರಿಸುತ್ತಿರುವ ಜನಸಾಮಾನ್ಯರು, ಚಿನ್ನಾಭರಣ ಜೋಪಾನವಾಗಿಡುವಂತೆಯೇ ಬೈಕ್​ಗೆ ಹಾಕಿಸಿದ ಪೆಟ್ರೋಲ್ ರಕ್ಷಣೆಗೂ ಕಾವಲು ನಿಲ್ಲುವ ಸ್ಥಿತಿ ಬಂದಿದೆ.
ಇಂಧನ ಬೆಲೆಯೇರಿಕೆ ಜನರಿಗೆ ಹೊರೆಯಾಗುತ್ತಿದ್ದರೆ, ಕಳ್ಳರಿಗೆ ಅದು ಆಸರೆಯಾಗತೊಡಗಿದೆ. ಬೈಕ್ ಹಾಗೂ ಇನ್ನಿತರ ವಾಹನ ಕದಿಯುತ್ತಿದ್ದ ಕಳ್ಳರೀಗ, ವಾಹನಗಳ ಟ್ಯಾಂಕ್​ಗಳಲ್ಲಿರುವ ಪೆಟ್ರೋಲ್ ಕದಿಯತೊಡಗಿದ್ದಾರೆ. ಪ್ರತಿದಿನವೂ ನೂರಾರು ಲೀಟರ್ ಪೆಟ್ರೋಲ್ ಕದ್ದು ಸಂಗ್ರಹಿಸಿ ಅದನ್ನು ಲೀಟರ್ ದರಕ್ಕಿಂತ ನಾಲ್ಕೈದು ರೂಪಾಯಿ ಕಡಿಮೆ ದರಕ್ಕೆ ಮಾರಾಟ ಮಾಡಿ ದಿನವೂ ಸಾವಿರಾರು ರೂಪಾಯಿ ಆದಾಯ ಮಾಡಿಕೊಳ್ಳತೊಡಗಿದ್ದಾರೆ.
ಕಳ್ಳತನ ಹೇಗೆ?:ಕಳೆದ ಒಂದು ವಾರದಿಂದ ಬೆಳಗಾವಿಯಲ್ಲಿ ಪೆಟ್ರೋಲ್ ಕಳ್ಳತನ ಪ್ರಕರಣ ಹೆಚ್ಚುತ್ತಿವೆ. ಇಬ್ಬರು ಅಥವಾ ಮೂವರು ಕಳ್ಳರಿರುವ ತಂಡ ರಾತ್ರೋರಾತ್ರಿ ಆಗಮಿಸಿ, ಗೇಟ್​ಗೆ ಬೀಗ ಹಾಕಿದ್ದರೂ ಅದನ್ನು ಹಾರಿ ಒಳ ಬರುತ್ತಾರೆ. ಅಂಗಳದಲ್ಲಿ ನಿಲ್ಲಿಸಿರುವ ಬೈಕ್​ನಿಂದ ಸುಲಭವಾಗಿ ಪೆಟ್ರೋಲ್ ಕದಿಯತೊಡಗಿದ್ದಾರೆ. ಬೈಕ್​ನ ಇಂಜಿನ್​ಗೆ ಪೆಟ್ರೊಲ್ ಪೂರೈಸುವ ಪೈಪ್ ತೆಗೆದು ಬಾಟಲ್​ಗಳಲ್ಲಿ ಪೆಟ್ರೋಲ್ ಸಂಗ್ರಹಿಸಿ ಕದ್ದೊಯ್ಯುತ್ತಿದ್ದಾರೆ. ನಗರದ ಕಪಿಲೇಶ್ವರ ಕಾಲನಿಯಲ್ಲಿ ಶನಿವಾರ ರಾತ್ರಿ ಒಟ್ಟು 10 ಬೈಕ್​ಗಳ ಪೆಟ್ರೋಲ್ ಕದ್ದಿದ್ದಾರೆ. ಈ ದೃಶ್ಯ ಮನೆಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ನಿಲ್ಲಿಸಿಟ್ಟ ವಾಹನಗಳಿಗೆ ನಾಯಿಗಳು ಮೂತ್ರ ಮಾಡುವುದರಿಂದ ಹಾಗೂ ಮನೆಯ ಗೇಟ್ ಮುಂಭಾಗದಲ್ಲಿಯೇ ಮಲ ವಿಸರ್ಜನೆ ಮಾಡುತ್ತದೆ ಎಂಬ ಕಾರಣದಿಂದ ಬೆಳಗಾವಿಯಲ್ಲಿ ಕೆಂಪು ನೀರನ್ನು ಬಾಟಲಿಯೊಂದರಲ್ಲಿ ಹಾಕಿ ಇಡುವ ಪದ್ಧತಿ ಇದೆ. ಈ ಬಾಟಲಿ ಕಂಡರೆ ನಾಯಿಗಳು ಹತ್ತಿರ ಬರುವುದಿಲ್ಲ ಎಂಬ ಕಾರಣಕ್ಕೆ ಈ ವ್ಯವಸ್ಥೆ ಮಾಡಿಕೊಂಡಿರುತ್ತಾರೆ. ಆದರೆ, ಪೆಟ್ರೊಲ್ ಕದಿಯಲು ಬಂದಿದ್ದ ಕಳ್ಳರು, ಬಾಟಲಿಯೊಳಗೆ ಕೆಂಪು ಬಣ್ಣದ ದ್ರವ ಇರುವುದರಿಂದ ಅದು ಪೆಟ್ರೋಲ್ ಎಂದು ಭಾವಿಸಿ ಅದನ್ನೂ ಕದ್ದೊಯ್ದಿದ್ದಾರೆ. ಈ ದೃಶ್ಯವೂ ಸಹ ಬೆಳಗಾವಿಯ ಕಪಿಲೇಶ್ವರ ಕಾಲನಿಯ ಇನ್ನೋರ್ವರ ಮನೆಯಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಾವಳಿಯಿಂದ ತಿಳಿದು ಬಂದಿದೆ.
ಅಕ್ಕಪಕ್ಕದ ಅಪಾರ್ಟ್​ವೆುಂಟ್​ಗಳಲ್ಲಿ ಬೈಕ್​ಗಳ ಪೆಟ್ರೋಲ್ ಕಳ್ಳತನ ನಡೆಯುತ್ತಿದೆ ಎಂಬ ಮಾಹಿತಿ ಇತ್ತು. ಹೀಗಾಗಿ ರ್ಪಾಂಗ್ ಸ್ಥಳದಲ್ಲೂ ಒಂದು ಸಿಸಿ ಕ್ಯಾಮೆರಾ ಅಳವಡಿಸಿದ್ದೆ. ಶನಿವಾರ ರಾತ್ರಿ ಇಬ್ಬರು ಕಳ್ಳರು ಬಂದು ಪೆಟ್ರೋಲ್ ಕದ್ದೊಯ್ದಿರುವುದು ಸೆರೆಯಾಗಿದೆ. ಶನಿವಾರ ಮನೆಗೆ ಬರುವಾಗ ಬೈಕ್​ಗೆ 5 ಲೀಟರ್ ಪೆಟ್ರೋಲ್ ಹಾಕಿಸಿದ್ದೆ. ಆದರೆ, ಶನಿವಾರ ರಾತ್ರಿ ನನ್ನ ಬೈಕ್​ನಿಂದಲೂ ಕಳ್ಳರು ಪೆಟ್ರೋಲ್ ಕದ್ದಿದ್ದಾರೆ. ಇದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪೊಲೀಸ್​ಗೆ ದೂರು ನೀಡಲಿದ್ದೇನೆ.
|ಶಿವಾನಂದ ಹೊರಟ್ಟಿಬೆಳಗಾವಿ ನಿವಾಸಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + 6 =
Remember me
