|ಮೃತ್ಯುಂಜಯ ಕಲ್ಮಠಗದಗ
ಅರೆಕಾಲಿಕ ಬೋಧಕ, ಬೋಧಕೇತರ ಸಿಬ್ಬಂದಿ ಮೂಲಕವೇ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ವಿಶ್ವವಿದ್ಯಾಲಯ (ಆರ್​ಡಿಪಿಆರ್​ಯುು) ಮುನ್ನಡೆಯುತ್ತಿದೆ. ಸರ್ಕಾರದ ಈ ಕ್ರಮಕ್ಕೆ ಜಿಲ್ಲೆಯಲ್ಲಿ ಅಸಮಾಧಾನ ಶುರುವಾಗಿದೆ. ಗದಗ ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ವಿಶ್ವವಿದ್ಯಾಲಯದಲ್ಲಿ (ಆರ್​ಡಿಪಿಆರ್​ಯುು) ಕುಲಪತಿ ಒಬ್ಬರನ್ನು ಹೊರತುಪಡಿಸಿ ಬೋಧಕ ಹಾಗೂ ಬೋಧಕೇತರ ಸೇರಿ ಎಲ್ಲರೂ ಅರೆಕಾಲಿಕ ಸಿಬ್ಬಂದಿ.
ಮೂರು ವರ್ಷದ ಹಿಂದೆಯೇ ಈ ವಿಶ್ವವಿದ್ಯಾಲಯ ಆರಂಭಿಸಲಾಗಿದ್ದು, ಇಲ್ಲಿಯವರೆಗೆ ಪೂರ್ಣ ಪ್ರಮಾಣದ ಸಿಬ್ಬಂದಿ ನೇಮಕ ಮಾಡಿಲ್ಲ. ಜತೆಗೆ ಇಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಸರ್ಕಾರಿ ನೇಮಕಾತಿಯಲ್ಲೂ ಅವಕಾಶ ಇಲ್ಲದಿರುವುದರಿಂದ ದೇಶದ ಮೊಟ್ಟ ಮೊದಲ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ವಿಶ್ವವಿದ್ಯಾಲಯದ ಸ್ಥಿತಿ ಡೋಲಾಯಮಾನವಾಗಿದೆ.
ಆರ್​ಡಿಪಿಆರ್​ಯುುದಲ್ಲಿ 175 ಮಂಜೂರಾದ ಹುದ್ದೆಗಳಿವೆ. ಇದರಲ್ಲಿ 53 ಬೋಧಕ ಸಿಬ್ಬಂದಿ (ಎಸ್ಸಿ 8, ಎಸ್ಟಿ 5, ಒಬಿಸಿ 29 ಮತ್ತು ಜಿಎಂ 11), 100 ಬೋಧಕೇತರ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಇವರೆಲ್ಲರನ್ನೂ ಹೊರಗುತ್ತಿಗೆ ಆಧಾರದಡಿ ನೇಮಕ ಮಾಡಿಕೊಳ್ಳಲಾಗಿದೆ. ಇನ್ನೂ 22 ಹುದ್ದೆ ಖಾಲಿ ಇದ್ದು, ಅವಶ್ಯಕತೆ ಬಿದ್ದರೆ ಉಳಿದ ಹುದ್ದೆಗಳಿಗೂ ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗುವುದು ಎಂದು ಆರ್​ಡಿಪಿಆರ್​ಯುು ಅಧಿಕಾರಿಗಳು ಹೇಳುತ್ತಾರೆ.
ಆರ್​ಡಿಪಿಆರ್​ಯುುದಲ್ಲಿ ಸಾರ್ವಜನಿಕ ಆಡಳಿತ, ಅಭಿವೃದ್ಧಿ ಅರ್ಥಶಾಸ್ತ್ರ, ಸಾರ್ವಜನಿಕ ಆರೋಗ್ಯ, ಎಎಸ್ಸಿ ಕಂಪ್ಯೂಟರ್ ಸೈನ್ಸ್, ಫುಡ್ ಸೈನ್ಸ್ ಟೆಕ್ನಾಲಜಿ, ಎಂಬಿಎ ರೂರಲ್ ಡೆವಲಪ್​ವೆುಂಟ್ ಆಂಡ್ ಅಗ್ರಿ ಬಿಸಿನೆಸ್ ಮ್ಯಾನೇಜ್​ವೆುಂಟ್, ಎಂ.ಕಾಂ. ಎಂಟರ್​ಪ್ರೂನರ್ ಆಂಡ್ ಕೋ ಆಪ್ ಮ್ಯಾನೇಜ್​ವೆುಂಟ್, ಎಂಎ ರೂರಲ್ ಡೆವಲೆಪ್​ವೆುಂಟ್ ಆಂಡ್ ಪಂಚಾಯತ್​ರಾಜ್ ಸೇರಿ ವಿವಿಧ 10 ಸ್ನಾತಕೋತ್ತರ ಕೋರ್ಸ್​ಗಳಿವೆ. 3 ಪಿಜಿ ಡಿಪ್ಲೊಮಾ ಕೋರ್ಸ್​ಗಳಿವೆ. ಸದ್ಯ ಇಲ್ಲಿ 377 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಪ್ರತಿ ಕೋರ್ಸ್​ಗೆ ಒಬ್ಬರನ್ನಾದರೂ ಪೂರ್ಣಾವಧಿ ಪ್ರಾಧ್ಯಾಪಕರನ್ನು ನೇಮಕ ಮಾಡಬೇಕು. ಇಲ್ಲದಿದ್ದರೆ ಅಪಾರ ನಿರೀಕ್ಷೆಯೊಂದಿಗೆ ಆರಂಭಿಸಿರುವ ವಿಶ್ವ ವಿದ್ಯಾಲಯ ಚಿಂತಾಜನಕ ಸ್ಥಿತಿಗೆ ತಲುಪಬಹುದು ಎಂಬ ಆತಂಕ ಇದೆ.
ಆರ್​ಡಿಪಿಆರ್​ಯುುದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಮುಂದಿನ ಭವಿಷ್ಯ ಹೇಗೆ ಎಂದು ಚಿಂತಿತರಾಗಿದ್ದಾರೆ. ಗ್ರಾಮೀಣ ಸೇವೆಗೆ ಸಂಬಂಧಿಸಿದ ಪಿಡಿಒ ಇತ್ಯಾದಿ ಹುದ್ದೆಗಳ ನೇಮಕಾತಿಯಲ್ಲಿ ಆರ್​ಡಿಪಿಆರ್​ಯುುದಲ್ಲಿ ಅಧ್ಯಯನ ಮಾಡಿರುವ ವಿದ್ಯಾರ್ಥಿಗಳಿಗೆ ನಿಗದಿತ ಹುದ್ದೆಗಳನ್ನು ಕಾಯ್ದಿರಿಸಬೇಕು. ಅಂದಾಗ ಮಾತ್ರ ಆರ್​ಡಿಪಿಆರ್​ಯುು ಬೆಳವಣಿಗೆ ಕಾಣಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ನೂರಾರು ಕೋಟಿ ರೂ. ವ್ಯಯಿಸಿ ಆರಂಭಿಸಲಾದ ಆರ್​ಡಿಪಿಆರ್​ಯುು ಬಿಳಿಯಾನೆಯಂತಾಗುವ ಸಾಧ್ಯತೆ ಇದೆ.
ಗದಗ ಆರ್​ಡಿಪಿಆರ್​ಯುುದಲ್ಲಿರುವ 10 ಪಿಜಿ ಕೋರ್ಸ್​ಗಳಿಗೆ ತಲಾ ಒಬ್ಬರಂತೆ ಪೂರ್ಣ ಪ್ರಮಾಣದ ಪ್ರಾಧ್ಯಾಪಕರನ್ನು ನೇಮಿಸಬೇಕು. ಅಲ್ಲದೆ, ಇಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪಿಡಿಒ ಹಾಗೂ ಮತ್ತಿತರ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುವ ಹುದ್ದೆಗಳ ಸರ್ಕಾರಿ ನೇಮಕಾತಿಯಲ್ಲಿ ಆದ್ಯತೆ ನೀಡದಿದ್ದರೆ ವಿಶ್ವವಿದ್ಯಾಲಯ ನಡೆಸುವುದು ಕಷ್ಟವಾಗಲಿದೆ. ಇದೇ ಸ್ಥಿತಿ ಮುಂದುವರಿದರೆ ವಿಶ್ವವಿದ್ಯಾಲಯ ಮುಚ್ಚುವ ಹಂತ ತಲುಪಿದರೂ ಅಚ್ಚರಿ ಇಲ್ಲ. ಆದ್ದರಿಂದ ಸರ್ಕಾರ ಕೂಡಲೆ ಪೂರ್ಣಾವಧಿ ಸಿಬ್ಬಂದಿ ನೇಮಿಸಬೇಕು ಹಾಗೂ ಇಲ್ಲಿ ಕಲಿತಿರುವ ವಿದ್ಯಾರ್ಥಿಗಳಿಗೆ ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಮೀಸಲಾತಿ ಕೊಡಬೇಕು.
|ಎಸ್.ವಿ.ಸಂಕನೂರವಿಪ ಸದಸ್ಯ ಗದಗ
ಗದಗ ನಗರದಲ್ಲಿ ಕಳೆದ ಮೂರು ವರ್ಷದಿಂದ ಆರ್​ಡಿಪಿಆರ್​ಯುು ಕಾರ್ಯನಿರ್ವಹಿಸುತ್ತಿದ್ದು, ಅಲ್ಲಿ ಬೋಧಕ-ಬೋಧಕೇತರ ಸಿಬ್ಬಂದಿಯನ್ನು ಗುತ್ತಿಗೆ ಆಧಾರದಡಿ ನೇಮಕ ಮಾಡಿಕೊಳ್ಳಲಾಗಿದೆ. ಇಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸರ್ಕಾರಿ ನೇಮಕಾತಿಯಲ್ಲಿ ವಿಶೇಷ ಅವಕಾಶ ನೀಡುವ ಕುರಿತು ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ. ಸಮಿತಿ ನೀಡುವ ವರದಿ ಆಧರಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ಇಲಾಖೆ ಸಚಿವ ಕೆ.ಎಸ್. ಈಶ್ವರಪ್ಪ ಅಧಿವೇಶನದಲ್ಲಿ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × three =
Remember me
