|ವೇಣುವಿನೋದ್ ಕೆ.ಎಸ್.ಮಂಗಳೂರು
ಇಲಾಖೆ ಒಂದೇ… ಆದರೆ ಒಂದು ಕಾರ್ಯಕ್ರಮದಡಿ ಬ್ಲಾಕ್​ಲಿಸ್ಟ್​ಗೆ ಹಾಕಲಾದ ಗುತ್ತಿಗೆದಾರ ಇನ್ನೊಂದು ಸ್ಕೀಂನಡಿಯಲ್ಲಿ ಟೆಂಡರ್ ಪಡೆದುಕೊಳ್ಳಬಹುದು!
ಇದು ದ.ಕ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ಕಾರ್ಯವೈಖರಿ.
ಕೊರಗ ಹಾಗೂ ಮಲೆಕುಡಿಯ ಜನಾಂಗದವರು ಆದಿವಾಸಿಗಳು, ಅರಣ್ಯದಲ್ಲಿ ಲಭಿಸುವ ಒಂದು ವಿಧದ ಕಾಡುಬಳ್ಳಿ, ಬೆತ್ತ ಬಳಸಿ ಬುಟ್ಟಿ ಹೆಣೆಯುವ ಕಾಯಕದವರು. ಅವರಿಗೆ ವರ್ಷದಲ್ಲಿ 6 ತಿಂಗಳು ಪೌಷ್ಟಿಕ ಆಹಾರ ಯೋಜನೆ ಅನೇಕ ವರ್ಷಗಳಿಂದ ಇದೆ. ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯಲ್ಲಿ ಹತ್ತು ವರ್ಷಗಳಿಂದ ಈ ಕಾರ್ಯಕ್ರಮ ನಡೆಯುತ್ತಾ ಬಂದಿದೆ.
ಆದರೆ, 2019ರಲ್ಲಿ ಗಿರಿಜನರಿಗೆ ನೀಡಲಾದ ಆಹಾರವಸ್ತುಗಳೇ ಕಳಪೆ ಎಂಬ ದೂರುಗಳು ಕೇಳಿಬಂದಿದ್ದವು. ಕೊರಗ ಮುಖಂಡರೂ ಅದರ ಬಗ್ಗೆ ದೂರು ಸಲ್ಲಿಸಿದ್ದು ಗುತ್ತಿಗೆದಾರರಿಗೆ ಇಲಾಖೆ ನೋಟಿಸ್ ಕಳುಹಿಸಿತ್ತು. ಅದಕ್ಕೆ ಉತ್ತರಿಸಿದ ಗುತ್ತಿಗೆದಾರರು ಆಹಾರ ಬದಲಾಯಿಸಿ ಕೊಡುವುದಾಗಿ ಹೇಳಿದ್ದರು.
ಬಳಿಕ 2020-21ರ ಸಾಲಿನ ಮಲೆಕುಡಿಯರು, ಕೊರಗರ ಆಹಾರ ಒದಗಿಸುವ ಕಾರ್ಯಕ್ರಮಕ್ಕೆ ಕಳೆದ ವರ್ಷ ಜೂನ್ ವೇಳೆ ಟೆಂಡರ್ ಕರೆಯಲಾಗಿತ್ತು, ನಾಲ್ವರು ಗುತ್ತಿಗೆದಾರರು ಭಾಗವಹಿಸಿದರು. ಅದರಲ್ಲಿ ಕಳಪೆ ಆಹಾರವಸ್ತು ಒದಗಿಸಿದವರ ಹೆಸರೂ ಇತ್ತು. ಅಧಿಕಾರಿಗಳು ರ್ಚಚಿಸಿ, ನಿರ್ಧಾರ ತೆಗೆದುಕೊಂಡರು.
ಕಳೆದ ಮೇ 18ರಂದು ಅಧಿಕಾರಿಗಳು ತೆಗೆದುಕೊಂಡಿರುವ ನಿರ್ಧಾರ ನಡವಳಿಯಲ್ಲಿ ನಮೂದಾಗಿದೆ. ಒಕ್ಕಣೆ ಹೀಗಿದೆ: ಸದ್ರಿ ಗುತ್ತಿಗೆದಾರರು 2019-20ನೇ ಸಾಲಿನಲ್ಲಿ ಕಳಪೆ ಆಹಾರ ಸಾಮಗ್ರಿ ಸರಬರಾಜು ಮಾಡಿದ್ದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯ ಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ಸುಳ್ಯದ ಸಹಾಯಕ ನಿರ್ದೇಶಕರು ವರದಿ ನೀಡಿದ್ದು ಕೊರಗ ಸಂಘಟನೆಗಳೂ ಕಳಪೆ ಆಹಾರವಸ್ತು ನೀಡಿರುವ ಬಗ್ಗೆ ದೂರು ನೀಡಿದ್ದಾರೆ. ಟೆಂಡರ್​ದಾರರಿಗೆ ಮೂರು ಬಾರಿ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ದೋಷವಿರುವ ಆಹಾರ ವಸ್ತು ವಾಪಸ್ ಪಡೆದು ಬದಲಾಯಿಸಿಕೊಡಲು ಒಪ್ಪಿದ್ದಾರೆ. ಈ ಬೆಳವಣಿಗೆಗಳ ಪರಿಣಾಮ ಸದ್ರಿಯವರನ್ನು ಕಪ್ಪುಪಟ್ಟಿಗೆ ಸೇರಿಸಲು ಬೆಂಗಳೂರಿನ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ಪತ್ರ ಬರೆಯಲಾಗಿದೆ. ಹಾಗಾಗಿ ಈ ಹಂತದಲ್ಲಿಯೇ ಅವರನ್ನು ತಿರಸ್ಕರಿಸಲು ನಿರ್ಧರಿಸಲಾಗಿದೆ.
ಅಚ್ಚರಿ ಎಂದರೆ ಯಾವ ಟೆಂಡರ್​ದಾರರನ್ನು ಕಳಪೆ ಕಾರಣ ನೀಡಿ ಬ್ಲಾಕ್​ಲಿಸ್ಟ್​ಗೆ ಹಾಕಲಾಗಿದೆಯೋ, ಅವರನ್ನೇ ಇಲಾಖೆ ಇನ್ನೊಂದು ಸ್ಕೀಂನಡಿಯಲ್ಲಿ ಸೇರ್ಪಡೆಗೊಳಿಸಿದೆ. ಇಲಾಖೆ ಕಳೆದ ಜೂನ್ 30ಕ್ಕೆ ಮಾಡಿರುವ ಆದೇಶದ ಅನ್ವಯ ಒಂದು ವರ್ಷ ಕಾಲ ಪರಿಶಿಷ್ಟ ಜಾತಿ/ವರ್ಗಗಳ ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರ, ಆಶ್ರಮ/ವಸತಿ ಶಾಲೆ ಹಾಗೂ ನಿರಾಶ್ರಿತರ ಕೇಂದ್ರಗಳಿಗೆ ಆಹಾರ ಸಾಮಗ್ರಿ ವಿತರಿಸಲು ಆದೇಶ ನೀಡಲಾಗಿದೆ.
ಒಂದು ಕಾರ್ಯಕ್ರಮದಡಿ ಬ್ಲಾಕ್​ಲಿಸ್ಟ್​ಗೆ ಹಾಕಿ ಅದೇ ಟೆಂಡರ್​ದಾರರನ್ನು ಇನ್ನೊಂದು ಸ್ಕೀಂನಲ್ಲಿ ಸೇರಿಸಿದ್ದು ಅಕ್ರಮ. ಈ ಬಗ್ಗೆ ಇಲಾಖಾ ಮಟ್ಟದ ತನಿಖೆಯಾದರೆ ಸಾಲದು, ನ್ಯಾಯಾಂಗ ತನಿಖೆ ಅಥವಾ ಯಾವುದೇ ಉನ್ನತ ತನಿಖೆಯಾದಾಗ ಮಾತ್ರ ನ್ಯಾಯ ಸಿಗಬಹುದು.
|ಸಂಜೀವ ಎಂ.ಆರ್.ಕೊರಗ ಮುಖಂಡರು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 4 =
Remember me
