|ರಮೇಶ ದೊಡ್ಡಪುರಬೆಂಗಳೂರು
ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಸದ್ದು ಮಾಡಿದ್ದ ‘ಕಾಂಪಿಟ್ ವಿತ್ ಚೈನಾ’ ಬ್ರಾ್ಯಂಡ್ ಅನ್ನು ರಾಜ್ಯ ಸರ್ಕಾರ ಹಿಂಪಡೆದಿದೆ. ಆಟಿಕೆ, ಎಲೆಕ್ಟ್ರಾನಿಕ್ ಉತ್ಪನ್ನ ಸೇರಿ ಚೀನಾ ಪ್ರಾಬಲ್ಯವಿರುವ ಉತ್ಪನ್ನಗಳನ್ನು ಕರ್ನಾಟಕದಲ್ಲೆ ಉತ್ಪಾದಿಸುವ ಮಹತ್ವಾಕಾಂಕ್ಷಿ ಯೋಜನೆ ಮುಂದುವರಿಯುತ್ತದಾದರೂ ಆ ಹೆಸರಿನಿಂದ ಬೇಡ ಎಂಬ ನಿರ್ಧಾರಕ್ಕೆ ಬಂದಿದೆ. ಇದಕ್ಕೆ ರಾಜಕೀಯ ಕಾರಣದ ಜತೆಗೆ ರಾಜತಾಂತ್ರಿಕ ಕಾರಣವೂ ಇದೆ ಎಂದು ಮೂಲಗಳು ತಿಳಿಸಿವೆ.
ಪ್ಲಾಸ್ಟಿಕ್ ಧ್ವಜಗಳಿಂದ ಮಕ್ಕಳ ಆಟಿಕೆಗಳವರೆಗೆ ಚೀನಾದಿಂದ ಬೃಹತ್ ಪ್ರಮಾಣದಲ್ಲಿ ಉತ್ಪನ್ನಗಳು ಆಮದಾಗುತ್ತವೆ. ಅತ್ಯಂತ ಕಡಿಮೆ ದರ ವಿಧಿಸಿ ಮಾರುಕಟ್ಟೆ ಏಕಸ್ವಾಮ್ಯ ಸಾಧಿಸುವ ಚೀನಾ ತಂತ್ರಕ್ಕೆ ಪ್ರತಿಯಾಗಿ ಭಾರತ ಸರ್ಕಾರ ಅನೇಕ ಚೀನಾ ಉತ್ಪನ್ನಗಳ ಮೇಲೆ ‘ಆಂಟಿ ಡಂಪಿಂಗ್’ ಸುಂಕ ವಿಧಿಸಿದೆ. ಅಂದರೆ ಅದಷ್ಟೂ ಚೀನಾ ಸರಕಿನ ದರವನ್ನು ಹೆಚ್ಚಿಸುವ ಪ್ರಯತ್ನ ಮಾಡಿದೆ. ತಡೆಯುವುದು ಮಾತ್ರವಲ್ಲ, ಚೀನಾ ವಸ್ತುಗಳನ್ನು ಜನರೇ ಬಹಿಷ್ಕರಿಸಬೇಕು ಎಂಬ ಮಾತು ಅನೇಕ ವರ್ಷಗಳಿಂದ ಕೇಳಿಬರುತ್ತಿದೆ. ಭಾರತದಲ್ಲೆ ಅಂತಹ ಉತ್ಪನ್ನಗಳನ್ನು ತಯಾರಿಸುವುದೇ ಇದಕ್ಕೆ ಉತ್ತಮ ಪರಿಹಾರ ಎಂಬು ಭಾವಿಸಿ 2018ರ ಬಜೆಟ್​ನಲ್ಲಿ ‘ಕಾಂಪಿಟ್ ವಿತ್ ಚೈನಾ’ ಯೋಜನೆಯನ್ನು ಅಂದಿನ ಸಿಎಂ ಎಚ್.ಡಿ. ಕುಮಾರಸ್ವಾಮಿ ಘೋಷಿಸಿದರು. 9 ಜಿಲ್ಲೆಗಳನ್ನು ಆಯ್ಕೆ ಮಾಡಿಕೊಂಡು ತಲಾ 2 ಸಾವಿರ ಕೋಟಿ ರೂ. ಸರ್ಕಾರದಿಂದ ನೀಡಲಾಗುವುದು, ಖಾಸಗಿಯಿಂದ ತಲಾ 3 ಸಾವಿರ ಕೋಟಿ ರೂ. ಹೂಡಿಕೆ ಆಕರ್ಷಿಸಬೇಕು. ಆಟಿಕೆ, ಮೊಬೈಲ್ ಉಪಕರಣಗಳು, ಬಾಥ್​ರೂಂಫಿಟ್ಟಿಂಗ್ಸ್, ವಿದ್ಯುತ್ ಉಪಕರಣಗಳಂತಹ ಉತ್ಪನ್ನಗಳನ್ನು ಕ್ಲಸ್ಟರ್​ವಾರು ಅಭಿವೃದ್ಧಿಪಡಿಸುವು ಗುರಿ ಹೊಂದಲಾಗಿತ್ತು. ಲಕ್ಷಾಂತರ ಉದ್ಯೋಗ ಸೃಜನೆಯ ಜತೆಗೆ ಆರ್ಥಿಕತೆಗೂ ಉತ್ತೇಜನ ಸಿಗುತ್ತದೆ ಎಂಬ ಕಾರಣಕ್ಕೆ ಕೂಡಲೆ ಯೋಜನೆ ಜಾರಿ ಮಾಡಿ ಪ್ರತಿ ಕ್ಲಸ್ಟರ್​ಗೆ ದಾರ್ಶನಿಕರ ಗುಂಪು(ವಿಷನ್ ಗ್ರೂಪ್) ಹಾಗೂ ನೋಡಲ್ ಅಧಿಕಾರಿಗಳನ್ನೂ ನೇಮಿಸಲಾಗಿತ್ತು.
ಭಾರತ ಹಾಗೂ ಚೀನಾ ಜತೆಗೆ ಸೇನಾ ಸಂಘರ್ಷವಾದಾಗ ಕಾಂಪಿಟ್ ವಿತ್ ಚೈನಾಕ್ಕೆ ಮಹತ್ವ ಹೆಚ್ಚಾಗಿತ್ತು. ಯೋಜನೆ ಉತ್ತಮವಾಗಿದೆಯಾದರೂ ಚೀನಾದೊಂದಿಗೆ ಸ್ಪರ್ಧೆ ಎಂಬ ಬ್ರಾ್ಯಂಡ್​ಗೆ ಕೈಗಾರಿಕಾ ವಲಯದಿಂದ ಹಾಗೂ ಕೇಂದ್ರದಿಂದಲೂ ವಿಭಿನ್ನ ಅಭಿಪ್ರಾಯಗಳು ಕೇಳಿಬಂದಿದ್ದವು. ಈ ರೀತಿ ದೇಶವೊಂದನ್ನು ಬ್ರಾ್ಯಂಡ್ ಮಾಡುವುದು ರಾಜತಾಂತ್ರಿಕವಾಗಿ ಉತ್ತಮ ಅಲ್ಲ. ಉದ್ಯಮ ಸಂಬಂಧದ ದೃಷ್ಟಿಯಿಂದಲೂ ಸರಿಯಲ್ಲ. ಚೀನಾ ಕಳೆದ ನಾಲ್ಕೈದು ದಶಕದಲ್ಲಿ ಮಾಡಿದಂತೆಯೇ ಮೌನವಾಗಿ ಉತ್ಪಾದನೆಯತ್ತ ಗಮನ ಹರಿಸಬೇಕು ಎಂಬ ಅಭಿಪ್ರಾಯಗಳ ಹಿನ್ನೆಲೆಯಲ್ಲಿ ಆ ಹೆಸರನ್ನು ಹಿಂಪಡೆಯಲಾಗಿದೆ ಎಂದು ಕೈಗಾರಿಕಾ ಇಲಾಖೆ ಮೂಲಗಳು ತಿಳಿಸಿವೆ. ಹಿಂದಿನ ಸರ್ಕಾರ ರೂಪಿಸಿದ ಕಾಯ್ದೆ ಎಂಬ ರಾಜಕೀಯ ಕಾರಣ ಇರಬಹುದಾದರೂ, ರಾಜತಾಂತ್ರಿಕ ಕಾರಣ ಪ್ರಮುಖವಾದದ್ದು. ಇದೇ ಕಾರಣಕ್ಕೆ, ಇತ್ತೀಚೆಗೆ ಬಿಡುಗಡೆಯಾದ ‘ಕೈಗಾರಿಕಾ ನೀತಿ 2020-25’ರಲ್ಲೂ ಉಲ್ಲೇಖಿಸಿಲ್ಲ ಎಂದು ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಕಾಂಪಿಟ್ ವಿತ್ ಚೈನಾ ಹೆಸರು ಬಳಸದ ಮಾತ್ರಕ್ಕೆ ಸ್ಥಳೀಯ ಉತ್ಪಾದನೆಗೆ ಉತ್ತೇಜನ ನೀಡುವುದರಲ್ಲಿ ಹಿಂದೆ ಬೀಳುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೆ ಕೊಪ್ಪಳದಲ್ಲಿ ಸಾಂಪ್ರದಾಯಿಕ ಹಾಗೂ ಯಾಂತ್ರಿಕ ಆಟಿಕೆಗಳ ಕ್ಲಸ್ಟರ್​ಗೆ ಮುಖ್ಯಮಂತ್ರಿಗಳು ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಮುಂದೆಯೂ ಕ್ಲಸ್ಟರ್ ಹಾಗೂ ಜಿಲ್ಲೆಗೊಂದು ಉತ್ಪನ್ನ ಎಂಬ ಗುರಿಯೊಂದಿಗೆ ಕೈಗಾರಿಕೆಗೆ ಉತ್ತೇಜನ ನೀಡಲಾಗುತ್ತದೆ. ಉತ್ತರ ಕರ್ನಾಟಕದ ಭಾಗಗಳೂ ಸೇರಿ ಉದ್ಯೋಗಾವಕಾಶ ಸೃಷ್ಟಿಸುವ ಹೆಜ್ಜೆ ಇಡಲಾಗುತ್ತಿದೆ ಎಂದು ಹೇಳಿದ್ದಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:13 − 3 =
Remember me
