|ರವಿ ಗೋಸಾವಿಬೆಳಗಾವಿ
ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ತಾಲೂಕುವಾರು ಮೀಸಲಾತಿ ಅನುಪಾತ ನಿಗದಿಪಡಿಸಿ ಸರ್ಕಾರ ರಾಜ್ಯಪತ್ರ ಪ್ರಕಟಿಸಿದ್ದು, ಆಯ್ಕೆಗೊಂಡ ನೂತನ ಸದಸ್ಯರ ‘ರಾಜಕೀಯ ಬಣ’ಗಳ ಕಾರ್ಯಚಟುವಟಿಕೆ ಗ್ರಾಮಗಳಲ್ಲಿ ಬಿರುಸುಗೊಂಡಿದೆ. ಮೀಸಲಾತಿ ಮಂತ್ರಕ್ಕೆ ಪ್ರತಿ ತಂತ್ರ ಹೆಣೆದು, ಅಧಿಕಾರಕ್ಕೇರಲು ಇನ್ನಿಲ್ಲಿದ ಲಾಬಿ ಶುರುವಾಗಿದೆ.
ಈ ಬಾರಿ ಚುನಾವಣೆಯಲ್ಲಿ ಅರ್ಧದಷ್ಟು ಮಹಿಳೆಯರು ಸೇರಿ ಯುವಕರು, ಪದವೀಧರರು ಹಾಗೂ ರಾಜಕೀಯ ಪಕ್ಷಗಳ ಕಾರ್ಯಕರ್ತರು ಗೆಲುವು ಸಾಧಿಸಿದ್ದಾರೆ. ಈಗ ಅಧ್ಯಕ್ಷ ಸ್ಥಾನ ಒಲಿಸಿಕೊಳ್ಳಲು ಇತರ ಸದಸ್ಯರನ್ನು ಸೆಳೆಯಲು ಕಸರತ್ತು ಆರಂಭಿಸಿದ್ದಾರೆ. ರಾಜಕೀಯ ಪಕ್ಷಗಳ ತಾಲೂಕು ಘಟಕಗಳ ಅಧ್ಯಕ್ಷರು ಹಾಗೂ ಶಾಸಕರೂ ಸಹ ಗ್ರಾಪಂಗಳತ್ತ ದೃಷ್ಟಿ ಹರಿಸಿದ್ದಾರೆ.
ಚುನಾವಣೆ ಮುಗಿಯುವವರೆಗೂ ತೆರೆಮರೆಯಲ್ಲಿದ್ದ ಪಕ್ಷಗಳು, ಇದೀಗ ಸದಸ್ಯರನ್ನು ತಮ್ಮ ಪಕ್ಷಗಳತ್ತ ಸೆಳೆದುಕೊಳ್ಳಲು ಬಹಿರಂಗವಾಗಿಯೇ ಸನ್ಮಾನ, ಅಭಿನಂದನಾ ಸಮಾರಂಭ ಏರ್ಪಡಿಸುತ್ತಿದ್ದಾರೆ. ಗೆದ್ದವರೆಲ್ಲ ತಮ್ಮ ಪಕ್ಷದಿಂದ ಬೆಂಬಲಿತರಾದವರು ಎಂದು ಹೇಳಿಕೊಳ್ಳತೊಡಗಿದ್ದಾರೆ. ಚುನಾಯಿತ ಸದಸ್ಯರೂ ಸಹ ತಾಲೂಕುವಾರು ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪಟ್ಟಿ ಹಿಡಿದು ತಾವೇ ಅಧಿಕಾರಕ್ಕೇರಲು ‘ಬಣ’ ಮಾಡಿಕೊಂಡು ಪ್ರಮುಖ ನಾಯಕರ ಮನೆ-ಕಚೇರಿಯ ಕದ ತಟ್ಟುತ್ತಿದ್ದಾರೆ. ತಮ್ಮ ಗ್ರಾಪಂಗೆ ತಮ್ಮದೇ ಜಾತಿ ಹಾಗೂ ಪಂಗಡಕ್ಕೆ ಮೀಸಲು ಒದಗಿಸಿ ಎಂದು ಮುಖಂಡರ ದುಂಬಾಲು ಬಿದ್ದಿದ್ದಾರೆ. ಅಧ್ಯಕ್ಷ ಗದ್ದುಗೆ ಏರುವ ಆಕಾಂಕ್ಷಿತರು ಇತರ ಸದಸ್ಯರನ್ನು ಹಿಡಿದಿಟ್ಟುಕೊಳ್ಳಲು ಅವರನ್ನು ಪ್ರವಾಸಕ್ಕೆ ಕರೆದೊಯ್ಯಲು ಯೋಜಿಸಿದ್ದಾರೆ.
ರಾಜ್ಯಾದ್ಯಂತ ರಾಜಕೀಯ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ವಿಜಯಿಗಳಾಗಿದ್ದಾರೆ. ಹೀಗಾಗಿ ಪ್ರತಿ ಗ್ರಾಮಗಳಲ್ಲೂ ತಮ್ಮ ಪಕ್ಷ ಬಲಪಡಿಸುವ ಭಾಗವಾಗಿ ಆಯಾ ಪಂಚಾಯಿತಿಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಬಿಜೆಪಿ ಮುಂಚೂಣಿಯಲ್ಲಿದೆ. ನಂತರದ ಸ್ಥಾನದಲ್ಲಿರುವ ಕೈ ಪಡೆಯು, ಗ್ರಾಮಗಳಲ್ಲಿ ಮುಖಂಡರ ಬಣಗಳಾಗಿ ಹೋಳಾಗುತ್ತಿರುವ ಚುನಾಯಿತ ಸದಸ್ಯರನ್ನು ಕೈವಶ ಮಾಡಿಕೊಳ್ಳಲು ತಂತ್ರ ರೂಪಿಸುತ್ತಿದ್ದಾರೆ.
ಗ್ರಾಪಂ ಚುನಾವಣೆ ಪಕ್ಷಾತೀತವಾಗಿ ನಡೆದಿದೆಯಾದರೂ ತಾವು ಇಂತಹ ಪಕ್ಷದ ಬೆಂಬಲಿತರು ಎಂದು ಅಭ್ಯರ್ಥಿಗಳು ಬಹಿರಂಗವಾಗಿಯೇ ಪ್ರಚಾರ ನಡೆಸಿ, ಆಯ್ಕೆಯಾಗಿದ್ದಾರೆ. ಆದರೆ, ಇದೀಗ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆ ಸಿಗದಿದ್ದಲ್ಲಿ ಸದಸ್ಯರು ತಮ್ಮ ಪಕ್ಷ ನಿಷ್ಠೆ ಬದಲಿಸುವ ಸಾಧ್ಯತೆ ಇದೆ. ಕೆಲವು ಯುವ ಉತ್ಸಾಹಿ ಸದಸ್ಯರು ತಮ್ಮ ಅನುಭವ ಹಾಗೂ ಅಭಿವೃದ್ಧಿ ಉದ್ದೇಶದ ಆಧಾರದ ಮೇಲೆ ಅಧ್ಯಕ್ಷ ಹುದ್ದೆ ಕೇಳುತ್ತಿದ್ದರೆ, ಇನ್ನೂ ಕೆಲವರು ಹಣಬಲ ಹಾಗೂ ರಾಜಕೀಯ ಬಲದಿಂದ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ. ತಮ್ಮ ಗೆಲುವಿಗೆ ಸಹಕರಿಸಿದ ಮುಖಂಡರನ್ನು ಅಭಿನಂದಿಸುವ ನೆಪದಲ್ಲಿ ಅಧಿಕಾರ ಗದ್ದುಗೆ ಕೊಡಿಸಲು ಅರ್ಜಿಯನ್ನೂ ಹಾಕುತ್ತಿದ್ದಾರೆ. ಹೀಗಾಗಿ ಪಕ್ಷಗಳ ಪ್ರಮುಖ ಮುಖಂಡರು ಲಾಬಿ ನಡೆಸುತ್ತಿರುವ ಸದಸ್ಯರನ್ನು ಸಮಾಧಾನ ಪಡಿಸಲು ಮೀಸಲಾತಿಗೆ ಲಾಟರಿ ಎತ್ತುವ ಪ್ರಹಸನದ ಕರಾಮತ್ತಿನ ವಿವರಣೆ ನೀಡುತ್ತಿದ್ದಾರೆ.
ಪ್ರಸಕ್ತ ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರೇ ರಾಜ್ಯಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿದ್ದಾರೆ. ಆದರೂ ಕಾಂಗ್ರೆಸ್ ನಾಯಕರು ಗೆದ್ದವರೆಲ್ಲ ನಮ್ಮ ಪಕ್ಷದ ಬೆಂಬಲಿತರು ಎನ್ನುತ್ತಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ವಾರದೊಳಗೆ ಸಭೆ ನಡೆಸಿ, ಬಿಜೆಪಿಯಿಂದ ಬೆಂಬಲ ಪಡೆದು ಗೆಲುವು ಸಾಧಿಸಿದವರನ್ನು ಹಾಜರುಪಡಿಸುತ್ತೇನೆ.
|ರಮೇಶ ಜಾರಕಿಹೊಳಿಜಲಸಂಪನ್ಮೂಲ ಸಚಿವ
‘ಮೊದಲ ಪತ್ನಿಯ ಜತೆ ಚೆನ್ನಾಗಿಯೇ ಇದ್ದೇನೆ: ಇನ್ನೊಂದು ಮದ್ವೆಯಾಗುವಂತೆ ಮಗಳೇ ಹೇಳಿದ್ದಳು’

7 ವರ್ಷದ ಮಗನಿಗೆ ನಿದ್ರೆ ಮಾತ್ರೆ ತಿನ್ನಿಸಿ ಸಾಯಿಸಿದ್ಲು; ಗಂಡ-ಅಪ್ಪ-ಅವಳೂ ಡಾಕ್ಟರ್; ಆದ್ರೂ ಮಾಡಿದ್ದು ಜೀವ ತೆಗೆಯೋ ಕೆಲಸ!

ವಾಹನದ ಮೇಲೆ ಕರೊನಾ ಬೋರ್ಡ್; ಮಾಡುತ್ತಿದ್ದುದು ಮತ್ತೇರಿಸೋ ಕೆಲಸ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × two =
Remember me
