|ಹರೀಶ್ ಬೇಲೂರುಬೆಂಗಳೂರು
ಕರೊನಾದಿಂದ ಕಂಗೆಟ್ಟಿರುವ ಆರ್ಥಿಕತೆಯನ್ನು ಪುನಶ್ಚೇತನಗೊಳಿಸಲು ರಾಜ್ಯ ಸರ್ಕಾರ ಮುಂಬರುವ ಬಜೆಟ್​ನಲ್ಲಿ ಮದ್ಯದ ಮೇಲೆ ಅಬಕಾರಿ ಸುಂಕ ಹೆಚ್ಚಿಸಲು ಚಿಂತನೆ ನಡೆಸಿದೆ. ಇಂಡಿಯನ್ ಮೇಡ್ ಲಿಕ್ಕರ್ (ಐಎಂಎಲ್) ಹಾಗೂ ಬಿಯರ್ ಮೇಲೆ ಶೇ.5ರಿಂದ ಶೇ.10ರವರೆಗೆ ಅಬಕಾರಿ ಸುಂಕ ವಿಧಿಸಲು ಚಿಂತಿಸಿರುವ ಸರ್ಕಾರ, ಶೀಘ್ರದಲ್ಲೇ ಆರ್ಥಿಕ ಇಲಾಖೆ ಅಧಿಕಾರಿಗಳ ಜತೆ ರ್ಚಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಕಳೆದ ಬಜೆಟ್​ನಲ್ಲಿ ಸರ್ಕಾರ ಮದ್ಯದ ಮೇಲೆ ಶೇ.6 ಹೆಚ್ಚುವರಿ ಅಬಕಾರಿ ಸುಂಕ ಹೇರಿಸಿತ್ತು. ಕಳೆದ ಏಪ್ರಿಲ್​ನಲ್ಲಿ ಇದು ಜಾರಿ ಆಗಬೇಕಿದ್ದರೂ ಕರೊನಾ ನಿಯಂತ್ರಿಸಲು ಲಾಕ್​ಡೌನ್ ಹೇರಿದ್ದರಿಂದ ಸಾಧ್ಯವಾಗಿರಲಿಲ್ಲ. ಬಳಿಕ ಕಳೆದ ಮೇನಲ್ಲಿ ಬಿಯರ್ ಹಾಗೂ ವೈನ್ ಹೊರತುಪಡಿಸಿ ಐಎಂಎಲ್ ಮೇಲೆ ಶೇ.17 ಅಬಕಾರಿ ಶುಂಕ ಹೆಚ್ಚಿಸಿತ್ತು. ಇದರಿಂದ 180 ಎಂಎಲ್ ಬಾಟಲ್ ಮದ್ಯಕ್ಕೆ ಇರುವ ದರಕ್ಕಿಂತ ಆಂದಾಜು 16 ರೂ. ಹೆಚ್ಚಳವಾಗಿತ್ತು. ಅಲ್ಲದೆ, ಪ್ರತಿ ಬಲ್ಕ್ ಲೀಟರ್​ಗೆ 153 ರೂ.ನಿಂದ 179 ರೂ.ಗೆ ಏರಿಗೆ ಆಗಿತ್ತು. ಎಂಟು ತಿಂಗಳು ಕಳೆಯುವಷ್ಟರಲ್ಲೇ ಇದೀಗ ಮತ್ತೆ ಅಬಕಾರಿ ಸುಂಕ ವಿಧಿಸಲು ಸರ್ಕಾರ ಮುಂದಾಗಿದೆ.
5-10 ರೂ ಹೆಚ್ಚಳ:ಮುಂಬರುವ ಬಜೆಟ್​ನಲ್ಲಿ ಸರ್ಕಾರ, ಮದ್ಯದ ಮೇಲೆ ಅಬಕಾರಿ ಸುಂಕ ಹೆಚ್ಚಿಸಿದರೆ ಐಎಂಎಲ್ ಲಿಕ್ಕರ್ ಹಾಗೂ ಬಿಯರ್ ಬಾಟಲ್ ಮೇಲೆ ಕನಿಷ್ಟ 5ರೂ.ನಿಂದ ಗರಿಷ್ಟ 10 ರೂ. ಏರಿಕೆ ಆಗಲಿದೆ.
ಮದ್ಯದ ಮೇಲೆ ಅಬಕಾರಿ ಸುಂಕ ಹೆಚ್ಚಿಸಬಹುದು ಅಥವಾ ಇಲ್ಲದಿರಬಹುದು. ಈ ಬಗ್ಗೆ ನಿಖರ ಮಾಹಿತಿ ಇಲ್ಲ. ಆದರೆ, ಆರ್ಥಿಕ ಇಲಾಖೆಯ ಉನ್ನತ ಅಧಿಕಾರಿಗಳ ಜತೆ ರ್ಚಚಿಸಿ ಸರ್ಕಾರ ಸುಂಕ ಹೆಚ್ಚಿಸುವ ಸಾಧ್ಯತೆ ಹೆಚ್ಚಿದೆ.
| ಹೆಸರು ಹೇಳಲಿಚ್ಛಿಸದ ಅಧಿಕಾರಿ
ರಾಜ್ಯದಲ್ಲಿ 2020 ಏಪ್ರಿಲ್ ನಿಂದ 2021ನೇ ಸಾಲಿನ ಫೆ.7ರ ವರೆಗೆ ರಾಜ್ಯದಲ್ಲಿ 482.70 ಲಕ್ಷ ಪೆಟ್ಟಿಗೆ ಸ್ವದೇಶಿ ಮದ್ಯ ಮಾರಾಟವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 515.99 ಲಕ್ಷ ಪೆಟ್ಟಿಗೆ ಮಾರಾಟವಾಗಿತ್ತು. ಆದರೆ, ಈ ವರ್ಷ ಅಬಕಾರಿ ಇಲಾಖೆಗೆ 19,433 ಕೋಟಿ ರೂ.ಗಳ ರಾಜಸ್ವ ಸಂಗ್ರಹವಾಗಿದೆ! ಕಳೆದ ವರ್ಷ ಇದೇ ಅವಧಿಯಲ್ಲಿ 18,611.10 ಕೋಟಿ ರೂ. ಸಂಗ್ರಹವಾಗಿತ್ತು.
2021-2022ರ ಬಜೆಟ್ ಪೂರ್ವ ಸಿದ್ಧತೆ ಹಿನ್ನೆಲೆಯಲ್ಲಿ ಮದ್ಯಮಾರಾಟಗಾರರ ಸಂಘದ ಪದಾಧಿಕಾರಿಗಳ ಜತೆ ಸಭೆ ನಡೆಸಿದ ತರುವಾಯ ಅಬಕಾರಿ ಸಚಿವ ಕೆ.ಗೋಪಾಲಯ್ಯ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.
ಈ ವರ್ಷ 22, 700 ಕೋಟಿ ರೂ. ರಾಜಸ್ವದ ಗುರಿ ನಿಗದಿಯಾಗಿತ್ತು. ಫೆ.7ರ ವರೆಗೆ 19,433ಕೋಟಿ ಸಂಗ್ರಹವಾಗಿದೆ. ಮಾರ್ಚ್ ಅಂತ್ಯದ ವೇಳೆಗೆ ಗುರಿ ಮುಟ್ಟುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಳೆದ ವರ್ಷಕ್ಕೆ ಹೋಲಿಸಿದರೆ, 822 ಕೋಟಿ ಹೆಚ್ಚುವರಿ ಸಂಗ್ರವಾಗಿದೆ ಎಂದರು.
300 ಬೈಕ್, 70 ಜೀಪ್ ಖರೀದಿಗೆ ನಿರ್ಧಾರ:ಇನ್ಸ್​ಪೆಕ್ಟರ್​ಗಳಿಗೆ 300 ಬೈಕ್ ಖರೀದಿಗೆ ಒಪ್ಪಿಗೆ ಕೊಡಲಾಗಿದೆ. 70 ಜೀಪ್ ಖರಿದೀಸಲಾಗುತ್ತದೆ. ಅಬಕಾರಿ ಡಿಸಿ ಕಚೇರಿಗೆ ತಲಾ ನಾಲ್ಕು ಶಸ್ತ್ರಾಸ್ತ್ರ, ಇಲಾಖೆ ಅಧಿಕಾರಿಗಳಿಗೆ ಬಿ.ಎಸ್.ಎನ್.ಎಲ್ ಸಿಮ್ ಕೊಡಲು ನಿರ್ಧರಿಸಲಾಗಿದೆ ಎಂದರು.
31,500 ಕಡೆ ದಾಳಿ:ಮಾದಕ ವಸ್ತು ಮಾರಾಟ ತಡೆಯಲು ಅಬಕಾರಿ ಇಲಾಖೆ ಹೆಚ್ಚಿನ ಒತ್ತು ನೀಡಿದೆ. ಪೊಲೀಸರ ಜತೆ ಸೇರಿ ಸಾಕಷ್ಟು ಕಾರ್ಯಾಚರಣೆ ನಡೆಸಿದೆ. ಈ ವರ್ಷ 31,500 ದಾಳಿ ಮಾಡಿ 19, 406 ಪ್ರಕರಣ ದಾಖಲು ಮಾಡಲಾಗಿದೆ. 12,239 ವ್ಯಕ್ತಿಗಳನ್ನು ದಸ್ತಗಿರಿ ಮಾಡಿ 928 ವಾಹನ ವಶಕ್ಕೆ ಪಡೆಯಲಾಗಿದೆ. ಕಳ್ಳಭಟ್ಟಿ ಸೇವನೆ ಜುಲೈ 2020ಯಿಂದ 620 ಗ್ರಾಮ ಸಭೆಗಳಲ್ಲಿ ಅಧಿಕಾರಿಗಳು ಜಾಗೃತಿ ಸಭೆ ಮಾಡಿದ್ದಾರೆ ಎಂದು ತಿಳಿಸಿದರು. 950 ಎಂಎಸ್​ಐಎಲ್ ಸನ್ನದುಗಳನ್ನು ನೀಡಲಾಗುತ್ತಿದೆ. ಹೊಸ ಅಂಗಡಿ ತೆರೆಯಲು ಬೇಡಿಕೆ ಇದೆ. ಈ ಕುರಿತು ಸಿಎಂ ಜತೆ ರ್ಚಚಿಸಿ ತೀರ್ಮಾನ ಮಾಡಲಾಗುವುದು. ಆದರೆ, ಹೊಸ ಲೈಸೆನ್ಸ್ ಕೊಡುವ ಪ್ರಸ್ತಾಪ ನಮ್ಮ ಮುಂದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕಮೀಷನ್ ಹೆಚ್ಚಳಕ್ಕೆ ಬೇಡಿಕೆ:ಮದ್ಯ ಮಾರಾಟಗಾರರ ಸಂಘ 2009 ರಲ್ಲಿ ಇದ್ದಂತೆ ಮದ್ಯ ಮಾರಾಟದ ಮೇಲೆ ಶೇ.20 ಕಮಿಷನ್ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಸಿಎಂ ಜತೆ ರ್ಚಚಿಸಿ ತೀರ್ವನಿಸಲಾಗುವುದು ಎಂದು ಹೇಳಿದರು.
ಆನ್​ಲೈನ್ ಮದ್ಯ ಮಾರಾಟವಿಲ್ಲ:ಆನ್​ಲೈನ್ ಮದ್ಯ ಮಾರಾಟ ಮಾಡುವ ಪ್ರಸ್ತಾವನೆಯೇ ನಮ್ಮ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಹಿಂದಿನ ಸಚಿವರಿದ್ದ ಸಂದರ್ಭದಲ್ಲಿ ಅಧಿಕಾರಿಗಳ ವರ್ಗಾವಣೆಗೆ ಲಂಚ ಕೇಳಿದ್ದ ಆರೋಪ ಕುರಿತ ಪ್ರಶ್ನೆಗೆ, ನಾನು ಬಂದ ಮೇಲೆ ಆ ರೀತಿಯ ದೂರು ಬಂದಿಲ್ಲ. ಆ ರೀತಿಯ ಯಾವುದೇ ಪ್ರಕರಣ ನಡೆದಿಲ್ಲ ಎನ್ನಿಸುತ್ತದೆ. ಕಾಲ ಕಾಲಕ್ಕೆ ವರ್ಗಾವಣೆ ನಡೆದಿರಬಹುದು ಎಂದು ಪ್ರಶ್ನೆಯೊಂದಕ್ಕೆ ಸಚಿವ ಗೋಪಾಲಯ್ಯ ಪ್ರತಿಕ್ರಿಯಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 3 =
Remember me
