| ಕೇಶವಮೂರ್ತಿ ವಿ.ಬಿ. ಹುಬ್ಬಳ್ಳಿ
ಮೊಬೈಲ್ ನಂಬರ್, ಬ್ಯಾಂಕ್ ಅಕೌಂಟ್ ನಂಬರ್, ಒಟಿಪಿ ಮತ್ತಿತರ ಮಾಹಿತಿ ಪಡೆದು ವಂಚಿಸುತ್ತಿದ್ದ ಸೈಬರ್ ಕಳ್ಳರು ಇದೀಗ ಇ-ಮೇಲ್​ಗಳನ್ನು ಹ್ಯಾಕ್ ಮಾಡಿ, ಅದೇ ಹೆಸರಲ್ಲಿ ನಕಲಿ ಮೇಲ್ ಸೃಷ್ಟಿಸುವ ಮೂಲಕ ವಂಚಿಸುವ ಹೊಸ ಕುತಂತ್ರಕ್ಕೆ ಮುಂದಾಗಿದ್ದಾರೆ.
ಸೈಬರ್ ಅಪರಾಧ ಲೋಕ ದಿನದಿಂದ ದಿನಕ್ಕೆ ವಿಸ್ತರಣೆಯಾಗುತ್ತಿದ್ದು, ಸೈಬರ್ ಕಳ್ಳರು ಹೊಸ ಬಗೆಯ ವಂಚನೆಯ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಶ್ರೀಮಂತರು, ದೊಡ್ಡ ಕಂಪನಿಗಳ ವ್ಯಾಪಾರ- ವಹಿವಾಟಿನ ಮೇಲೆ ಕಳ್ಳನೋಟ ಇಟ್ಟಿರುವ ವಂಚಕರು, ಇ-ಮೇಲ್​ಗಳನ್ನು ಹ್ಯಾಕ್ ಮಾಡಿ ಅದರಲ್ಲಿನ ಮಾಹಿತಿ ಕದ್ದು, ಅದೇ ಹೆಸರಿನ ಮತ್ತೊಂದು ಮೇಲ್ ಸೃಷ್ಟಿಸಿ ವಂಚಿಸುತ್ತಿದ್ದಾರೆ.
ಇಂಥಹದ್ದೇ ಒಂದು ಘಟನೆ ಧಾರವಾಡದ ರಾಯಾಪುರದಲ್ಲಿ ನಡೆದಿದೆ. ಸರ್ಕಾರಿ ಸ್ವಾಮ್ಯಕ್ಕೆ ಒಳಪಟ್ಟಿರುವ ಇಂಡಕ್ಷನ್ ಮೋಟಾರ್ ಮತ್ತು ಎಲೆಕ್ಟ್ರಿಕಲ್ ಟ್ರಾನ್ಸ್​ಫಾರ್ಮರ್ ಉತ್ಪಾದಿಸುವ ನ್ಯೂ ಗವರ್ನಮೆಂಟ್ ಎಲೆಕ್ಟ್ರಿಕಲ್ ಫ್ಯಾಕ್ಟರಿ (ಎನ್​ಜಿಇಎಫ್) ಆನ್​ಲೈನ್ ಮೂಲಕ ವ್ಯವಹಾರ ನಡೆಸುತ್ತಿತ್ತು.ಇದನ್ನೂ ಓದಿ:Web Exclusive: ಹಾಸನಾಂಬೆ ದರ್ಶನ ಈ ಬಾರಿ ಅನುಮಾನ; ಸಂಭ್ರಮ ಕಸಿದ ಕರೊನಾ
ಉತ್ಪಾದನೆಗೆ ಬೇಕಾಗುವ ಕಚ್ಚಾ ವಸ್ತುಗಳನ್ನು ಬೆಂಗಳೂರಿನ ಹೈಟೆಕ್ ಬೇರಿಂಗ್ ಪ್ರೖೆವೇಟ್ ಲಿಮಿಟೆಡ್​ನಿಂದ ಆನ್​ಲೈನ್ ಮೂಲಕ ಖರೀದಿಸುತ್ತಿತ್ತು. ಕಚ್ಚಾ ವಸ್ತು ಕಳುಹಿಸುವಂತೆ ಎನ್​ಜಿಇಎಫ್ ಸೆ.12ರಂದು ಹೈಟೆಕ್ ಬೇರಿಂಗ್ ಕಂಪನಿಯ ಮೇಲ್ ಕಳುಹಿಸಿತ್ತು. ಎನ್​ಜಿಇಎಫ್ ಮೇಲ್ ಹ್ಯಾಕ್ ಮಾಡಿದ್ದ ವಂಚಕರು ಹೈಟೆಕ್ ಬೇರಿಂಗ್ ಕಂಪನಿಯ ಹೆಸರಲ್ಲಿ ನಕಲಿ ಮೇಲ್ ಸೃಷ್ಟಿಸಿದ್ದರು. ‘ಎಚ್​ಟಿಬಿಎಲ್’ ಬದಲು ‘ಎಬಿಟಿಎಲ್’ ಎಂದು ಬದಲಿಸಿ ಹೊಸ ಮೇಲ್ ಸೃಷ್ಟಿಸಿದ್ದರು.
ನಕಲಿ ಮೇಲ್​ನಿಂದ ಟ್ಯಾಕ್ಸ್ ಇನ್​ವೈಸ್, ಅಕೌಂಟ್ ನಂಬರ್ ಕಳುಹಿಸಿ ಹಣ ವರ್ಗಾಯಿಸುವಂತೆ ಸಂದೇಶ ರವಾನಿಸಿದ್ದರು. ಎಂದಿನಂತೆ ಮೇಲ್ ಮೂಲಕ ಆನ್​ಲೈನ್​ನಲ್ಲಿ ಹಣ ವರ್ಗಾವಣೆ ಮಾಡುತ್ತಿದ್ದ ಎನ್​ಜಿಇಎಫ್ 94,788 ರೂ. ಹಣ ವರ್ಗಾಯಿಸಿತ್ತು. ಮತ್ತೊಂದು ಕಂಪನಿಗೆ ಮೇಲ್ ಕಳುಹಿಸಿದಾಗ 1,35,464 ರೂ. ಕಳುಹಿಸುವಂತೆ ನಕಲಿ ಮೇಲ್​ನಿಂದ ಉತ್ತರ ಬಂದಾಗ ಎಚ್ಚೆತ್ತುಕೊಂಡ ಕಂಪನಿ ಹುಬ್ಬಳ್ಳಿ- ಧಾರವಾಡ ಸೈಬರ್ ಕ್ರೖೆಂ ಪೊಲೀಸ್ ಠಾಣೆಗೆ ದೂರು ನೀಡಿದೆ.
ಇಂತಹ ಸೈಬರ್ ವಂಚನೆಯಿಂದ ಬಚಾವಾಗಲು ಜಾಗೃತಿ ಮತ್ತು ಎಚ್ಚರಿಕೆಯೊಂದೇ ಸದ್ಯಕ್ಕಿರುವ ಮಾರ್ಗ. ಒಂದು ವೇಳೆ ವಂಚನೆಯಾದಲ್ಲಿ ಕೂಡಲೇ ಪೊಲೀಸರ ಗಮನಕ್ಕೆ ತಂದರೆ ಅವರು ಆ ಮೇಲ್​ಗಳನ್ನು ಬ್ಲಾಕ್ ಮಾಡುವ ಮೂಲಕ ಹೆಚ್ಚಿನ ಹಾನಿ ತಪ್ಪಿಸುತ್ತಾರೆ.ಇದನ್ನೂ ಓದಿ:Web Exclusive: ಪೊಲೀಸರಿಗೆ ಸಿಗುತ್ತಿಲ್ಲ ‘ಆರೋಗ್ಯ ಭಾಗ್ಯ’; ಚಿಕಿತ್ಸೆ ಸಿಗಲ್ಲವೆಂದು ಭಿತ್ತಿಪತ್ರ ಅಂಟಿಸಿದ ಆಸ್ಪತ್ರೆಗಳು
ದೊಡ್ಡ ದೊಡ್ಡ ಕಂಪನಿಗಳ ಆನ್​ಲೈನ್ ವ್ಯವಹಾರದ ಮೇಲೆ ಕಣ್ಣಿಟ್ಟಿರುವ ವಂಚಕರು ನಕಲಿ ಮೇಲ್ ಸೃಷ್ಟಿಸಿ ವಂಚಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ಸಾರ್ವಜನಿಕರು ಎಚ್ಚರದಿಂದ ಇರಬೇಕು. ವಂಚನೆಗೀಡಾದಲ್ಲಿ ತಕ್ಷಣ ಸೈಬರ್ ಕ್ರೖೆಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಬೇಕು.
| ಎಸ್.ಬಿ. ಮಾಳಗೊಂಡ,ಇನ್ಸ್​ಪೆಕ್ಟರ್, ಹು-ಧಾ ಸೈಬರ್ ಕ್ರೖೆಂ ಪೊಲೀಸ್ ಠಾಣೆ
Web Exclusive: ಕಬ್ಬು ಕಟಾವಿಗೂ ಕರೊನಾ ಕಂಟಕ; ‘ಕಾರ್ವಿುಕರ ಗ್ಯಾಂಗ್’ ಬರಲು ಹಿಂದೇಟು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 17 =
Remember me
