| ಎಸ್.ಲಿಂಗರಾಜು ಮಂಗಲ ಹನೂರು
ಮಲೆ ಮಹದೇಶ್ವರ ವನ್ಯಜೀವಿ ಧಾಮದ ಅರಣ್ಯ ಪ್ರದೇಶ ಒತ್ತುವರಿ ಮತ್ತು ರಸ್ತೆ ನಿರ್ಮಾಣ ಕಾರ್ಯಕ್ಕೆ ‘ವಿಜಯವಾಣಿ’ ಅಂಕುಶ ಹಾಕಿದೆ.
ತಾಲೂಕಿನ ಜಲ್ಲಿಪಾಳ್ಯ ಗ್ರಾಮದಿಂದ 3 ಕಿ.ಮೀ. ಅಂತರದಲ್ಲಿರುವ ಹೂಗ್ಯಂ ಪ್ರದೇಶಕ್ಕೆ ಸೇರಿದ ಚೆಕ್​ಪೋಸ್ಟ್ ಬಳಿಯ ಗುಡ್ಡವನ್ನು ಐದಕ್ಕೂ ಹೆಚ್ಚು ಜನರು ಆಕ್ರಮಿಸಿಕೊಂಡಿದ್ದರು. ಹುಲಿ ಸಂರಕ್ಷಿತಾರಣ್ಯ ಪ್ರದೇಶವಾಗಿ ಘೋಷಣೆಯ ನಿರೀಕ್ಷೆಯಲ್ಲಿರುವ ವನ್ಯಜೀವಿ ಧಾಮದಲ್ಲಿ ಜೆಸಿಬಿ ಬಳಸಿ ಗುಡ್ಡದ ಮೇಲ್ಭಾಗವನ್ನು ಉಳುಮೆ ಮಾಡಿರುವ ಒತ್ತುವರಿದಾರರು, ಭೂಮಿಯನ್ನು ಸ್ವಹಿತಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿದ್ದರು. ಈ ಕುರಿತು ಕೆಲವರಿಂದ ದೊರೆತ ಖಚಿತ ಮಾಹಿತಿ ಮೇರೆಗೆ ‘ವಿಜಯವಾಣಿ’ ಸ್ಥಳಕ್ಕೆ ಭೇಟಿ ನೀಡಿ, ಅರಣ್ಯ ಪ್ರದೇಶ ಒತ್ತುವರಿಯಾಗಿರುವುದನ್ನು ಖಚಿತಪಡಿಸಿಕೊಂಡ ಬಳಿಕ ಅರಣ್ಯಾಧಿಕಾರಿಗಳ ಗಮನಕ್ಕೆ ತಂದ ಪರಿಣಾಮ ಅತಿಕ್ರಮಣಕ್ಕೆ ಕಡಿವಾಣ ಬಿದ್ದಿದೆ.
ಒತ್ತುವರಿ ಸ್ಥಳಕ್ಕೆ ತೆರಳಲು ಜೆಸಿಬಿ ಬಳಸಿ ರಸ್ತೆ ನಿರ್ಮಾಣ ಮಾಡುವ ಕೆಲಸವೂ ನಡೆದಿತ್ತು. ರಸ್ತೆ ನಿರ್ವಿುಸುವ ವೇಳೆ ಸಿಕ್ಕರುವ ಕಲ್ಲುಗಳನ್ನು ಕೆಲವರು ಸ್ವಂತಕ್ಕೆ ಬಳಕೆ ಮಾಡಿಕೊಂಡಿದ್ದಾರೆ. ಈ ರಸ್ತೆ ಸಮೀಪದಲ್ಲೇ ಯೇಸುವಿನ ಶಿಲುಬೆಯೊಂದಿದ್ದು, ಅಲ್ಲಿಗೆ ಹೋಗಲು ದಾರಿ ಮಾಡಿಕೊಳ್ಳಲಾಗುತ್ತಿರುವುದಾಗಿ ತಿಳಿದುಬಂದಿದೆ. ಮಲೆ ಮಹದೇಶ್ವರ ವನ್ಯಜೀವಿ ಧಾಮದಲ್ಲಿ ಜೆಸಿಬಿ ಬಳಸಿ ಕಾಮಗಾರಿ ಮಾಡಲು ಅರಣ್ಯ ಇಲಾಖೆಯ ಸಮ್ಮತಿ ಬೇಕು. ಈ ನಿಯಮವನ್ನು ಉಲ್ಲಂಘಿಸಿ ಅರಣ್ಯ ಪ್ರದೇಶದ ಭೂಮಿಯನ್ನೇ ಒತ್ತುವರಿದಾರರು ಜೆಸಿಬಿ ಬಳಸಿ ಅತಿಕ್ರಮಿಸಿದ್ದಾರೆ.
ಅರಣ್ಯ ಇಲಾಖೆ ಚಾಮರಾಜನಗರ ವೃತ್ತ ಕಚೇರಿ ನೀಡಿರುವ ಮಾಹಿತಿಯಂತೆ, ಮಲೆ ಮಹದೇಶ್ವರ ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ಏ. 1ರಂದು ಬಾಕಿ ಉಳಿದಿರುವ ಅರಣ್ಯ ಮೊಕದ್ದಮೆಗಳಲ್ಲಿ 201 ಅತಿಕ್ರಮಣ ಪ್ರಕರಣಗಳಿವೆ. ಹೂಗ್ಯಂ ಬಳಿಯ ಗುಡ್ಡದ ಮೇಲ್ಭಾಗ ಒತ್ತುವರಿ ಮಾಡಿರುವುದನ್ನು ಗಮನಿಸಿದರೆ ಈ ಪ್ರದೇಶದಲ್ಲಿ ಅತಿಕ್ರಮಣಕ್ಕೆ ಕಡಿವಾಣ ಬಿದ್ದಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ.ಇದನ್ನೂ ಓದಿ:Web Exclusive: ಹೊಸ ಪಿಯು ಕಾಲೇಜು ಆರಂಭಕ್ಕೂ ಕರೊನಾ ಛಾಯೆ; ಶೈಕ್ಷಣಿಕ ವರ್ಷದ ಅನಿಶ್ಚಿತತೆ
ಅರಣ್ಯ ಅತಿಕ್ರಮಣದ ಸ್ಥಳ ಪರಿಶೀಲನೆಗೆಂದು ತೆರಳಿದ್ದಾಗ ಒತ್ತುವರಿದಾರರು ಜಗಳಕ್ಕಿಳಿದರು.ಇದು ಪಟ್ಟಾ ಜಮೀನು. ಹಾಗಾಗಿ ಹುರುಳಿ ಬಿತ್ತನೆ ಮಾಡಿದ್ದೇವೆ. ನೀವೇಕೆ ಫೋಟೋ ತೆಗೆಯುತ್ತಿದ್ದೀರಾ? ಈ ಬಗ್ಗೆ ನಿಮಗೆ ಮಾಹಿತಿ ಕೊಟ್ಟವರು ಯಾರು? ಸುಮ್ಮನೇ ಸ್ಥಳದಿಂದ ತೆರಳಿ ಎಂದು ಗಲಾಟೆ ಮಾಡಿ, ಧಮ್ಕಿ ಹಾಕಿದರು.
ಸಿಬ್ಬಂದಿ ಪರಿಶೀಲನೆ:ಈ ಕುರಿತು ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ತಕ್ಷಣ ಕ್ರಮ ಕೈಗೊಂಡ ಡಿಎಫ್​ಒ ಏಡುಕುಂಡಲು, ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲಿಸಿದಾಗ ಅತಿಕ್ರಮಿಸಿದ ಜಮೀನು ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರುತ್ತದೆ ಎಂಬುದು ತಿಳಿದುಬಂತು.
ಅರಣ್ಯ ಪ್ರದೇಶದ ಒತ್ತುವರಿ ಮತ್ತು ರಸ್ತೆ ನಿರ್ಮಾಣ ಮಾಡುತ್ತಿರುವ ಕುರಿತು ಮಾಹಿತಿ ನೀಡಿದ್ದಲ್ಲದೆ, ಸ್ಥಳವನ್ನು ತೋರಿಸಿದ ‘ವಿಜಯವಾಣಿ’ ಪತ್ರಿಕೆಗೆ ಡಿಎಫ್​ಒ ಏಡುಕೊಂಡಲು ಧನ್ಯವಾದ ಹೇಳಿದ್ದಾರೆ. ಈ ಅಭಿನಂದನೆಯನ್ನು ಪತ್ರಿಕೆ ಮಾಹಿತಿದಾರರಿಗೆ ಅರ್ಪಿಸಿದೆ.ಇದನ್ನೂ ಓದಿ:Web Exclusive: ಡಾ.ಗಂಗೂಬಾಯಿ ಹಾನಗಲ್ ಸಂಗೀತ ವಿವಿಗಿಲ್ಲ ನಾವಿಕ; ಎರಡೂವರೆ ವರ್ಷದಿಂದಲೂ ಗ್ರಹಣ
‘ವಿಜಯವಾಣಿ’ ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ನಮ್ಮ ಸಿಬ್ಬಂದಿಯನ್ನು ಕಳುಹಿಸಿ ಪರಿಶೀಲಿಸಲಾಯಿತು. ಅಕ್ರಮಿಸಿಕೊಂಡಿರುವ ಪ್ರದೇಶ ಅರಣ್ಯ ಇಲಾಖೆ ವ್ಯಾಪ್ತಿಗೆ ಬರುತ್ತಿದೆ. ಹಾಗಾಗಿ ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗಿದೆ. ರಸ್ತೆ ನಿರ್ವಿುಸುತ್ತಿರುವುದನ್ನು ಕೂಡಲೇ ಸ್ಥಗಿತಗೊಳಿಸಲಾಗಿದೆ. ಈ ಕುರಿತು ಮುಂದಿನ ದಿನಗಳಲ್ಲಿ ಕಾನೂನು ಪ್ರಕಾರ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
| ಏಡುಕುಂಡಲುಡಿಎಫ್​ಒ, ಮಲೆ ಮಹದೇಶ್ವರ ವನ್ಯಜೀವಿ ವಿಭಾಗ
Web Exclusive| ‘ಭಾನುವಾರ ಮಾರುಕಟ್ಟೆ’ ನನೆಗುದಿಗೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four − two =
Remember me
